Advertisement

ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪಾಠ

10:21 PM Jul 21, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ  ಸರಕಾರದ ವಿವಿಧ ಇಲಾಖೆಗಳ ಕಾರ್ಯವೈಖರಿ ಹಾಗೂ ಪ್ರಗತಿಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದು ಪರಿಶೀಲನೆ ನಡೆಸಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಘೋಷಿತ ಯೋಜನೆಗಳನ್ನು ಸರಿಯಾಗಿ ತಲುಪಿಸುವಲ್ಲಿ ನಿರ್ಲಕ್ಷ್ಯ ತೋರುವ ಇಲಾಖೆಗಳ ಮುಖ್ಯಸ್ಥರನ್ನು ತರಾಟೆ ತೆಗೆದುಕೊಂಡಿದ್ದಾರೆ.

Advertisement

ಗುರುವಾರ ಸರಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸುಮಾರು ಮೂರು ಗಂಟೆ  ಆಡಳಿತ ವ್ಯವಸ್ಥೆ ಬಗ್ಗೆ  ಪ್ರಗತಿ ಪರಿಶೀಲನೆ ನಡೆಸಿದರು.

ಯೋಜನೆ ಘೋಷಣೆಯಾದ ಬಳಿಕ ಆಗಿರುವ ಪ್ರಗತಿ ಮತ್ತು ವಿಳಂಬವಾಗಲು ಕಾರಣ, ಅದನ್ನು ಜಾರಿಗೊಳಿಸಲು ಇಲಾಖೆಯ ತಳ ಹಂತದ ಅಧಿಕಾರಿಯಿಂದ ಹಿಡಿದು ಇಲಾಖೆ ಮುಖ್ಯಸ್ಥರವರೆಗೂ ಮಾಡಿದ ಪ್ರಯತ್ನವೇನು, ಒಂದು ವೇಳೆ ಅಧಿಕಾರಿಗಳ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ದೊರೆಯದಿದ್ದರೆ, ಸಂಬಂಧ ಪಟ್ಟ ಇಲಾಖೆ ಸಚಿವರು ಅಥವಾ ಸ್ವತಃ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆಯೇ, ಯೋಜನೆ ಅನುಷ್ಠಾನಕ್ಕೆ ಸಮಸ್ಯೆಯಾದರೂ   ತನ್ನ  ಗಮನಕ್ಕೆ ತಾರದೆ ಇರುವುದಕ್ಕೆ ಸ್ಪಷ್ಟ ಕಾರಣ ನೀಡುವಂತೆ  ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಯೋಜನೆ ಅನುಷ್ಠಾನ  ವಿಳಂಬ ಹಾಗೂ ಅಧಿಕಾರಿಗಳು ಮಾಡಿರುವ ನಿರ್ಲಕ್ಷ್ಯವನ್ನು  ಮುಖ್ಯಮಂತ್ರಿಗಳೇ   ಅಧಿಕಾರಿಗಳಿಗೆ ತಿಳಿಸಿ ಅಚ್ಚರಿ ಮೂಡಿಸಿದ್ದಾರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next