ಬೆಂಗಳೂರು: ದಾವೋಸ್‌ಗೆ ನಾಳೆ ಹೋಗುತ್ತೇನೆ. ಅಲ್ಲಿ ಮೂರು ದಿನ ಮೈನ್ ಸೆಷನ್ ನಲ್ಲಿ ಭಾಗಿಯಾಗುತ್ತಿದ್ದೇನೆ. ಎರಡು ಸೆಷನ್ಸ್ ನೀಡಿದ್ದಾರೆ. ಬೇರೆ ಬೇರೆ ದೇಶದ ಉದ್ಯೋಗಿಗಳ ಜೊತೆ ಮೀಟಿಂಗ್ ಫಿಕ್ಸ್ ಆಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನವೆಂಬರ್ ತಿಂಗಳಲ್ಲಿ ಇನ್ವೆಸ್ಟ್ ಕರ್ನಾಟಕ ನಡೆಯುತ್ತಿದೆ. ಹಾಗಾಗಿ ಅಲ್ಲಿ ಅವರ ಜೊತೆ ಚರ್ಚೆ ಮಾಡಲು ಅವಕಾಶ ಸಿಗಲಿದೆ. ಹಿರಿಯ ಅಧಿಕಾರಿಗಳು, ಐಟಿ-ಬಿಟಿ ಸಚಿವರು ಬರುತ್ತಾರೆ ಎಂದು ಹೇಳಿದರು.
ಬೆಂಗಳೂರಿನ ಮಳೆಯ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಎಂಟು ವಲಯಗಳಿವೆ. ಎಂಟೂ ವಲಯಗಳಿಗೆ ಉಸ್ತುವಾರಿ ಸಚಿವರ ನೇಮಕ ಇಂದು ರಾತ್ರಿ ಆಗಲಿದೆ ಎಂದರು.
ದೆಹಲಿಗೆ ಹೋಗಿದ್ದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ,ಚುನಾವಣಾ ವಿಚಾರವಾಗಿ ಚರ್ಚೆ ಮಾಡಲು ತೆರಳಿದ್ದೆ. ಕೋರ್ ಕಮಿಟಿ ನಿರ್ಧಾರ ಕಳಿಸಿದ್ದೇವೆ. ನಾಳೆ ನಾಡಿದ್ದು ಫೈನಲ್ ಆಗಲಿದೆ. ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಗೆ ಇನ್ನೂ ಸಮಯವಿದೆ ಎಂದರು.
Related Articles
ಮುಂದಿನ 15 ದಿನ ಯಾವುದೇ ಅಧಿಕಾರಿಗೆ ರಜೆ ಇಲ್ಲ
ಕಚೇರಿ ಬಿಟ್ಟು ಸ್ಥಳಕ್ಕೆ ಭೇಟಿ ಕೊಡಿ, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಯಾವುದೇ ಅಧಿಕಾರಿಗೂ ಮುಂದಿನ 15 ದಿನ ರಜೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಗೃಹ ಕಚೇರಿ ಕೃಷ್ಣಾದಿಂದ ಶನಿವಾರ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿಗಳು, ಉಸ್ತುವಾರಿ ಕಾರ್ಯದರ್ಶಿಗಳು ಸೇರಿದಂತೆ ಸಂಬಂಧಪಟ್ಟ ಇತರ ಅಧಿಕಾರಿಗಳು ಮುಂದಿನ ಎರಡು-ಮೂರು ದಿನಗಳಲ್ಲಿ ಕಡ್ಡಾಯವಾಗಿ ಸ್ಥಳ ಪರಿಶೀಲನೆ ಮಾಡಿ ಮುಖ್ಯ ಕಾರ್ಯದರ್ಶಿಯವರಿಗೆ ಸ್ಥಳ ಭೇಟಿ ಬಗ್ಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಯಾವುದೇ ಅಧಿಕಾರಿಗೆ ಮುಂದಿನ 15 ದಿನ ರಜೆ ಹಾಕುವಂತಿಲ್ಲ.
ಗ್ರಾ.ಪಂ. ಮಟ್ಟದಲ್ಲಿ ಪಿಡಿಒಗಳು ಸ್ಥಳದಲ್ಲೇ ಇದ್ದು ಹಾನಿ ಪರಿಶೀಲಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಎನ್‌ಡಿಆರ್‌ಎಫ್ ನಿಯಮಗಳಡಿ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಯವರು ತಾಕೀತು ಮಾಡಿದ್ದಾರೆ.
ಹಾನಿ: ಸರ್ಕಾರದ ಮಾಹಿತಿ
-12 ಜನರ ಪ್ರಾಣ ಹೋಗಿದೆ.
-430 ಜಾನುವಾರುಗಳ ಸಾವು..
-1,431 ಮನೆಗಳಿಗೆ ನೀರು ನುಗ್ಗಿದೆ.
-4242 ಮನೆಗಳಿಗೆ ಭಾಗಶ: ಹಾನಿ.
-7,010 ಹೆಕ್ಟೇರ್ ಕೃಷಿ ಬೆಳೆ ಹಾನಿ.
-5,736 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ
– 728 ಕೋಟಿ ರೂ ಡಿಸಿಗಳ ಪಿಡಿ ಖಾತೆಯಲ್ಲಿದೆ.