ಚಿಕ್ಕಮಗಳೂರು : ಮಲೆನಾಡಿನಲ್ಲಿ ಹರಡುತ್ತಿರೋ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ಹತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಕೊಪ್ಪದಲ್ಲಿ ಮಾತನಾಡಿದ ಅವರು ಎಲೆಚುಕ್ಕಿ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಯೂನಿವರ್ಸಿಟಿ ಟಿಂ ಕಳುಹಿಸಿ ಅಧ್ಯಯನ ಮಾಡುತ್ತಿದೆ. ನಿರಂತರ ಮಳೆ ಇರುವುದರಿಂದ ರೋಗ ಹೆಚ್ಚಾಗಿ ಹರಡುತ್ತಿದೆ, ಫಂಗಸ್ ತಡೆಯಲು ಔಷದಿ ಸಿಂಪಡಿಸುವ ಕೆಲಸವಾಗ್ತಿದೆ, ರೋಗ ಹರಡುಬಾರದೆಂದು ತಡೆಯಲು 10 ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದರು.
ಅಧ್ಯಯನದ ಬಳಿಕ ವಿಜ್ಞಾನಿಗಳು ಯಾವ ಔಷಧಿ ಸಿಂಪಡಿಸಲು ಹೇಳುತ್ತಾರೋ ಅದನ್ನೇ ಸಿಂಪಡಿಸಲು ಸೂಚಿಸಲಾಗುವುದು ಎಂದು ಹೇಳಿದ್ದಾರೆ.
ಬಳಿಕ ಮೂಡಿಗೆರೆ ಶಾಸಕ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು ಈ ಬಗ್ಗೆ ಚಿಕ್ಕಮಗಳೂರಿನ ಎಸ್ಪಿ ಜೊತೆ ಮಾತಾನಾಡಿದ್ದು ಸಮಗ್ರ ತನಿಖೆ ಮಾಡುವಂತೆ ಎಸ್ಪಿ ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
Related Articles
ಇದನ್ನೂ ಓದಿ: ಮಧ್ಯಪ್ರದೇಶ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಬೈಕ್ ಸವಾರಿ…