ಬೆಂಗಳೂರು : ಪ್ರವಾಸೋದ್ಯಮ ಇಲಾಖೆಯ ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರ ಕೇಳಿಬರುತ್ತಿರುವಾಗಲೇ ರಾಜೀನಾಮೆ ವಿಚಾರ ಯಾವುದೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು(ಬುಧವಾರ, ಆಗಸ್ಟ್ 11) ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಆನಂದ್ ಸಿಂಗ್ ನನಗೆ ಮೂರು ದಶಕಗಳಿಂದ ಗೆಳೆಯರು. ಅವರ ವಿಚಾರಗಳನ್ನು ಅವರು ನನ್ನಲ್ಲಿ ಹೇಳಿದ್ದಾರೆ. ನಾನು ಅವರ ಮಾತನ್ನು ಕೇಳಿದ್ದೇನೆ. ರಾಜೀನಾಮೆಯ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾನು ಎಂಗೇಜ್ ಆಗಿದ್ದೇನೆ ಎಂದ ನಯನತಾರಾ : ಸದ್ಯದಲ್ಲೇ ಮದುವೆಯಂತೆ
ನಿಮ್ಮ ಭೇಟಿ ವೇಳೆಯಲ್ಲಿ ರಾಜೀನಾಮೆ ವಿಚಾರ ಆನಂದ್ ಸಿಂಗ್ ಪ್ರಸ್ತಾಪ ಮಾಡಿದ್ದರು ಎಂಬ ವಿಚಾರ ಹರಿದಾಡುತ್ತಿದೆ ಎಂಬ ವಿಷಯಕ್ಕೆ ಉತ್ತರಿಸಿದ ಅವರು, ಆನಂದ್ ಸಿಂಗ್ ನನ್ನನ್ನು ಸಂಪರ್ಕ ಮಾಡಿ ಮಾತನಾಡಿದ್ದಾರೆ. ರಾಜೀನಾಮೆ ಕೊಡುವ ವಿಚಾರದ ಬಗ್ಗೆ ಮಾತನಾಡಿಲ್ಲ. ಮತ್ತೆ ಭೇಟಿಯಾಗಿ ಎಂದು ಹೇಳಿದ್ದೇನೆ. ಅವರೊಂದಿಗೆ ಮಾತುಕತೆ ನಡೆದ ನಂತರ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದ್ದಾರೆ.
ಯಾವುದೇ ರೀತಿಯಲ್ಲಿ ಪಕ್ಷದಲ್ಲಿ ಗೊಂದಲವಿಲ್ಲ. ರಾಜೀನಾಮೆ ವಿಚಾರವಾಗಿ, ಖಾತೆಯ ವಿಚಾರವಾಗಿ ಪಕ್ಷ ಏನು ನಿರ್ಣಯ ತೆಗೆದುಕೊಂಡ ಮೇಲೆ ಎಲ್ಲವೂ ತಿಳಿಯುತ್ತದೆ. ನಾನು ಆ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಮತ್ತೊಮ್ಮೆ ಅವರೊಂದಿಗೆ ಮಾತಾಡುವುದಿದೆ. ಎಂ ಟಿ ಬಿ ನಾಗರಾಜ್ ವಿಚಾರದಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಅಂತಿಮವಾಗಿ ಎಲ್ಲವೂ ಸರಿ ಹೋಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಐಸಿಸಿ ಗಂಭೀರ ಪ್ರಯತ್ನ