Advertisement

ಉತ್ತರದ ಪ್ರವಾಹ: ಉದ್ಯಮಿಗಳು-ಮಠಾಧಿಪತಿಗಳು ನೆರವಿಗೆ ಬನ್ನಿ; ಸಿಎಂ ಬಿಎಸ್ ವೈ

09:45 AM Aug 10, 2019 | Team Udayavani |

ಬಾಗಲಕೋಟೆ: ರಾಜ್ಯದ ಪ್ರವಾಹ ಪರಿಸ್ಥಿತಿಗೆ ನೂರು ಕೋಟಿ ಹಣ ಬಿಡುಗಡೆ ಮಾಡಲಾಗಿದೆ.ಬಾಗಲಕೋಟೆ ಜಿಲ್ಲೆಗೆ ಹತ್ತು ಕೋಟಿ ಹಣವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

Advertisement

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡುತ್ತಾ ,ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಾಗಲಕೋಟೆಯಲ್ಲಿ 63 ಗ್ರಾಮಗಳು ಜಲಾವೃತವಾಗಿವೆ. 6381 ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ.28,126 ಜನರನ್ನ ಸ್ಥಳಾಂತರ ಮಾಡಲಾಗಿದೆ ಎಂದರು.

42 ಪರಿಹಾರ ಕೇಂದ್ರ ತೆರಯಲಾಗಿದ್ದು, 92 ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ.ಇಲ್ಲಿಯವರೆಗೆ 19366 ಜಾನುವಾರಗಳನ್ನ ಸ್ಥಳಾಂತರ ಮಾಡಲಾಗಿದೆ.ಇದರ ಜೊತೆಗೆ 107.05 ಮೆಟ್ರಿಲಕ್ ಟನ್ ಮೇವು ಸಂಗ್ರಹಿಸಲಾಗಿದೆ. 2 ಎನ್‌ಡಿಆರ್‌ಎಫ್, 2 ಎಸ್‌ಡಿಆರ್‌ಎಫ್, 2 ಆರ್ಮಿ ತಂಡಗಳು ಸೇರಿ 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ ಎಂದರು.

ಜಿಲ್ಲೆಗೆ 10 ಕೋಟಿ ಪರಿಹಾರ ಸರ್ಕಾರ ನೀಡಿದ್ದು, ಸುಧಾಮೂರ್ತಿ 10 ಕೋಟಿ, ಮುರುಗೇಶ ನಿರಾಣಿ 1 ಕೋಟಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಇದರ ಜೊತೆಗೆ ರಾಜ್ಯದ ಪ್ರತಿಷ್ಠಿತ ಉದ್ಯಮಿಗಳಿಗೆ ಮನವಿ ಮಾಡಿ, ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ವಿನಂತಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next