Advertisement

1.91 ಲಕ್ಷ ಕೋಟಿ ವೆಚ್ಚಕ್ಕೆ ಅನುಮತಿ ಕೋರಿದ ಸಿಎಂ 

06:40 AM Jul 10, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ 2018-19ನೇ ಸಾಲಿಗೆ ವಿವಿಧ ಇಲಾಖೆಗಳಿಗೆ 1,91,301.93 ಕೋಟಿ ರೂ. ವೆಚ್ಚ ಮಾಡಲು ಅನುಮತಿ ಕೋರುವ ಸೂಚನೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ಸದನದಲ್ಲಿ ಮಂಡಿಸಿದ್ದಾರೆ.

Advertisement

2018-19ನೇ ಸಾಲಿಗೆ ಒಟ್ಟು 2,18,488 ಕೋಟಿ ರೂ. ಬಜೆಟ್‌ ಮಂಡಿಸಿರುವ ಕುಮಾರಸ್ವಾಮಿ, ಈ ಪೈಕಿ ವಿವಿಧ ಇಲಾಖೆಗಳಲ್ಲಿ 1,91,301.93 ಕೋಟಿ ರೂ. ವೆಚ್ಚ ಮಾಡಲು ಸದನದ ಅನುಮತಿ ಕೋರಿದ್ದಾರೆ. ಇದರಲ್ಲಿ 2018ರ ಏ. 1ರಿಂದ ಜುಲೈ ಅಂತ್ಯದವರೆಗೆ ವೆಚ್ಚ ಮಾಡಲು ಈಗಾಗಲೇ ಪಡೆದಿರುವ ಲೇಖಾನುದಾನದ ಮೊತ್ತವೂ ಸೇರಿದೆ.

ಈ ಸೂಚನೆ ಆಧಾರದ ಮೇಲೆ ಸೋಮವಾರದಿಂದ ಬಜೆಟ್‌ ಮೇಲಿನ ಚರ್ಚೆ ಆರಂಭವಾಗಿದೆ. ಗುರುವಾರದವರೆಗೆ ಚರ್ಚೆ ನಡೆಯಲಿದ್ದು, ಮುಖ್ಯಮಂತ್ರಿಗಳು ಚರ್ಚೆಗೆ ಉತ್ತರಿಸಿದ ಬಳಿಕ ಈ ಸೂಚನಾ ಪ್ರಸ್ತಾಪಕ್ಕೆ ಸದನದ ಅನುಮೋದನೆ ಪಡೆಯಬೇಕಾಗುತ್ತದೆ.ನಂತರವಷ್ಟೇ ಆಗಸ್ಟ್‌ ತಿಂಗಳಿನಿಂದ ಸರ್ಕಾರ ವಿವಿಧ ಇಲಾಖೆಗಳಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next