Advertisement

ಏರ್‌ ಶೋ ಬೆಂಗಳೂರಲ್ಲಿ ನಡೆಸಲು ರಾಜನಾಥ್‌ ಸಿಂಗ್‌ಗೆ ಸಿಎಂ ಮನವಿ  

09:48 AM Mar 07, 2020 | Team Udayavani |

ದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಗನ ಮದುವೆಗಾಗಿ ಮುಖ್ಯಮಂತ್ರಿಗಳು ದಿಲ್ಲಿಗೆ ತೆರಳಿದ್ದಾರೆ. ಈ ಸಂದರ್ಭ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದು, 2021ರ ಏರೋ ಇಂಡಿಯಾ ಶೋ ಅನ್ನು ಬೆಂಗಳೂರಿನಲ್ಲೇ ನಡೆಸುವಂತೆ ಮನವಿ ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಗನ ವಿವಾಹ ಸಮಾರಂಭವು ನಡ್ಡಾ ನಿವಾಸದಲ್ಲಿ ನಡೆಯುತ್ತಿದೆ.

Advertisement

ರಾಜನಾಥ್‌ ಸಿಂಗ್‌ ಅವರ ನಿವಾಸಕ್ಕೆ ತೆರಳಿದ ಸಿಎಂ,ವೆಲ್ಲಾರ ಜಂಕ್ಷನ್‌ನಲ್ಲಿ ಅವಶ್ಯಕತೆ ಇರುವ ರಕ್ಷಣಾ ಇಲಾಖೆಯ ಭೂಮಿಯನ್ನ ನಮ್ಮ ಮೆಟ್ರೋಗೆ ಹಸ್ತಾಂತರ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಮನವಿಗೆ ರಕ್ಷಣಾ ಸಚಿವರು ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಬಹಳ ಹಿಂದಿನಿಂದಲೂ “ಏರೋ ಇಂಡಿಯಾ ಶೋ’ ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನಡೆಯುತ್ತಿದೆ. ಕಳೆದ ವರ್ಷ ಗೋವಾದಲ್ಲಿ ನಡೆಸಲು ಸಕಲ ತಯಾರಿಯೂ ಏರ್ಪಟ್ಟಿತ್ತು. ಆದರೆ ರಾಜ್ಯದ ತೀವ್ರ ಪ್ರತಿಭಟನೆ ಕಾರಣ ಬೆಂಗಳೂರಿನಲ್ಲೇ ಏರ್‌ ಶೋ ನಡೆಸಲಾಯಿತು.

ಕಳೆದ ವರ್ಷ ಪಾರ್ಕಿಂಗ್‌ ಜಾಗದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ನೂರಾರು ವಾಹನಗಳು ಸುಟ್ಟು ಹೋಗಿದ್ದವು. ಈ ಕಾರಣಕ್ಕಾಗಿ ಮುಂಬರುವ ಶೋಗಳನ್ನು ಅನ್ನು ಬೇರೆಡೆ ನಡೆಸಲು ಚಿಂತನೆ ನಡೆದಿದೆ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ರಕ್ಷಣಾ ಸಚಿವರನ್ನು ಭೇಟಿಯಾಗಿ ಬೆಂಗಳೂರಿನಲ್ಲೇ ನಡೆಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಬೇಕಾದ ಸಕಲ ತಯಾರಿಗೆ ರಾಜ್ಯವೂ ಸಹಾಯ ಮಾಡಲಿದೆ ಎಂದಿದ್ದಾರೆ. ಸಿಎಂ ಜತೆ ಡಿಸಿಎಂ ಗೋವಿಂದ ಕಾರಜೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next