Advertisement

ಭಾರತಕ್ಕೆ ಕಾಲಿಟ್ಟಿರುವ ಕ್ಲಬ್ ಹೌಸ್!

04:00 PM Jul 01, 2021 | Team Udayavani |

ಅಲ್ಲೊಂದು ಹಾಡು, ಇಲ್ಲೊಂದು ಕಥೆ,ಮತ್ತೂಂದಿಷ್ಟು ಹಾಸ್ಯ, ಇಸ್ರೇಲಿನ ರಾಜಕೀಯ,ಪಾಕಿಸ್ತಾನದ ಕುತಂತ್ರ, ಅಮೆರಿಕದ ವಿದೇಶಾಂಗನೀತಿ, ಜಿ7ನಲ್ಲಿನ ಚೀನಾ ಕುರಿತ ಚರ್ಚೆ…ಇಂಗ್ಲಿಷ್ ಕಲಿಕೆ, ಭಾಷಣ ಮಾಡುವುದು ಹೇಗೆ ಗೊತ್ತೇ?ನಿಮ್ಮ ಮನೆ ಮೆಚ್ಚಿದ ಸಿನಿಮಾ ಯಾವುದು?ಹೀಗೇ… ಮಾತುಕತೆಗೆ ಬರವಿಲ್ಲ, ದಿನವಿಡೀ ಮಾತೇ ಮಾತು… ಇದು ಇತ್ತೀಚೆಗಷ್ಟೇ ಭಾರತಕ್ಕೆ ಕಾಲಿಟ್ಟಿರುವ ಕ್ಲಬ್ ಹೌಸ್ ಆ್ಯಪ್ ನ ಗಾಥೆ.

Advertisement

ವಿಶೇಷವೆಂದರೆ ಈ ಆ್ಯಪ್ ಭುವಿಗಿಳಿದಿದ್ದು 2020ರ ಏಪ್ರಿಲ್ ನಲ್ಲಿ . ಇದಾದ ಮಾರನೇ ತಿಂಗಳು, ಅಂದರೆ ಮೇನಲ್ಲಿ ಈ ಆ್ಯಪ್ ಗೆ ಇದ್ದಿದ್ದು ಕೇವಲ 1,500 ಮಂದಿ ಬಳಕೆದಾರರು ಮಾತ್ರ. 2021ರ ಜನವರಿ ಹೊತ್ತಿಗೆಈ ವೇದಿಕೆ ಸಿಕ್ಕ ಬಳಕೆದಾರರು 20 ಲಕ್ಷ. ಆರಂಭದಲ್ಲಿ ಕೇವಲ ಆ್ಯಪ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದ್ದ ಈ ಆ್ಯಪ್, ಇತ್ತೀಚೆಗಷ್ಟೇ ಆ್ಯಂಡ್ರಾಯ್ಡ್ ಸ್ಟೋರ್ ಗೂ ಬೇಟಾ ರೂಪದಲ್ಲಿ ಬಂದಿದೆ. ಈಗ ಇದರ ಬಳಕೆದಾರರು ವಾರಕ್ಕೆ ಒಂದು ಕೋಟಿ ಮಂದಿ ಇದ್ದಾರೆ.

ಎಲ್ಲರೂ ಬಳಕೆದಾರರಾಗಬಹುದೇ?:

ಸದ್ಯ ಎಲ್ಲರೂ ಈ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ, ನೋಂದಣಿ ಮಾಡಿಕೊಳ್ಳುವುದುಕಷ್ಟ. ಒಮ್ಮೆ ರಿಜಿಸ್ಟ್ರಾರ್ ಆದ ಮೇಲೆ ಕ್ಲಬ್ ಹೌಸ್ಕಂಪನಿ ಅಥವಾ ಬೇರೊಬ್ಬರು ನಿಮ್ಮನ್ನು ಒಳಗೆಕರೆದುಕೊಳ್ಳಬಹುದು. ಇದಾದ ಮೇಲೆ ಇನ್ನೊಬ್ಬರನ್ನು ಫಾಲೋ ಮಾಡಬಹುದು, ನಿಮ್ಮನ್ನು ಬೇರೆಯವರೂ ಫಾಲೋ ಮಾಡಬಹುದು. ಥೇಟ್ ಟ್ವಿಟರ್ ರೀತಿಯಲ್ಲೇ. ಈಗ ಇದು ಆ್ಯಪ್ಸೊರ್ನಲ್ಲಿ 16ನೇ ರ್ಯಾಂಕ್ ಗಳಿಸಿಕೊಂಡಿದೆ.

ಆ್ಯಪ್ನ ವಿಶೇಷವೇನು?

Advertisement

ಇದು ಟ್ವಿಟರ್ ನ ರೀತಿ ಪದಗಳ ಜತೆ ಆಟವಾಡುವುದಲ್ಲ, ಫೇಸ್ಬುಕ್ ನ ರೀತಿ ಎಲ್ಲವನ್ನೂ ತಂದು ನಿಮ್ಮ ಮುಂದೆಸುರಿಯುವುದಿಲ್ಲ,ಯೂಟ್ಯೂಬ್ ನ ರೀತಿ ಬೇಕಾದ ಸಿನಿಮಾ, ಹಾಡು,ಕಾಮಿಡಿ ತೋರಿಸುವುದಿಲ್ಲ. ಇಲ್ಲಿ ಕೇವಲ ಮಾತು ಮಾತು ಮಾತು. ಇಲ್ಲಿ ಗುಂಪುಗಳನ್ನುರಚಿಸಿ, ವಿಷಯದ ಮೇಲೆ ಚರ್ಚೆ ನಡೆಯುತ್ತದೆ.ವಿಶೇಷವೆಂದರೆ,ಕ್ಲಬ್ ಹೌಸ್ ನಲ್ಲಿ ಹೊಚ್ಚ ಹೊಸಪ್ರಯೋಗದ ರೀತಿಯಲ್ಲಿ ಕನ್ನಡ ನಾಟಕವೊಂದು ಪ್ರದರ್ಶನ ಕಂಡಿದೆ. ಕನ್ನಡದಲ್ಲೂ ಜನಪ್ರಿಯ ಸದ್ಯ ಕರ್ನಾಟಕದಲ್ಲಿ ಈ ಆ್ಯಪ್ನ ಬಳಕೆ ಹೆಚ್ಚಾಗುತ್ತಿದೆ. ಸಿನಿಮಾ, ಧಾರವಾಹಿ, ಹಾಡು,ಕಥೆ,ಕವನಆಸಕ್ತರು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾರಂಗದಲ್ಲಿರುವ ಬಹಳಷ್ಟು ಮಂದಿ ಇದರಲ್ಲಿ ಬಳಕೆದಾರರಾಗಿದ್ದಾರೆ. ಟಿ.ಎನ್.ಸೀತಾರಾಂ, ಪಿ.ಶೇಷಾದ್ರಿ, ನಾಗತಿಹಳ್ಳಿಚಂದ್ರಶೇಖರ್, ಪ್ರವೀಣ್ ಗೋಡ್ಖಿಂಡಿ, ಪ್ರಕಾಶ್ ಬೆಳವಾಡಿ, ಮಾನ್ವಿತಾ ಸೇರಿದಂತೆಹಲವಾರು ಮಂದಿ ಇದ್ದಾರೆ.  ಇತ್ತೀಚೆಗೆ ರಾಜಕಾರಣಿಗಳು ಕೂಡ ಸೇರಿಕೊಳ್ಳುತ್ತಿದ್ದಾರೆ.

1 ಶತಕೋಟಿ ಡಾಲರ್ ಮೌಲ್ಯ

ಈ ಆ್ಯಪ್ನ ಒಂದು ವಿಶೇಷತೆ ಎಂದರೆ ಇದರ ಸಹಸ್ಥಾಪಕ ಭಾರತೀಯ ಮೂಲದ ರೋಹನ್ ಸೇಥ್.ಒಂದೇ ವರ್ಷದಲ್ಲಿ ಈ ಕಂಪನಿ ಕಂಡ ಪ್ರಗತಿಅಗಾಧ. ಈಗಕ್ಲಬ್ಹೌಸ್ ಆ್ಯಪ್ನ ಮೌಲ್ಯ 1ಬಿಲಿಯನ್ ಡಾಲರ್.ಕಳೆದ ವರ್ಷದ ಮೇನಲ್ಲಿ ಈ ಆ್ಯಪ್ನ ಮೌಲ್ಯ ಇದ್ದದ್ದು ಕೇವಲ 100ಮಿಲಿಯನ್ ಡಾಲರ್ ಮಾತ್ರ. ಸದ್ಯ ಈಕಂಪನಿಯಲ್ಲಿ 180 ಸಂಸ್ಥೆಗಳು ಮತ್ತು ವೆಂಚರ್ ಕ್ಯಾಪಿಟಲಿಸ್ಟ್ ಗಳು ಹಣ ಹೂಡಿಕೆ ಮಾಡಿದ್ದಾರೆ.
ಮೂರು ರೀತಿಯಲ್ಲಿ ಭಾಗಿಯಾಗಬಹುದು!

ಮೊದಲನೆಯದಾಗಿ ಸ್ಪೀಕರ್ ಆಗಿ, ಎರಡನೆಯದು ಸ್ಪೀಕರ್ ಫಾಲೋವರ್ಗಳಾಗಿ, ಮೂರನೆಯದಾಗಿ ಕೇಳುಗರಾಗಿ. ನಿಮಗೆ ಚೆಂದ ಮಾತು ಬರುತ್ತೆ ಅಂದರೆ,ಬೇಗನೇ ಮಿಂಚಲು ಸಾಧ್ಯ. ಸ್ಪೀಕರ್ ರೂಪದಲ್ಲಿ ನೀವುಹಾಡಬಹುದು, ಒಂದು ವಿಷಯದ ಬಗ್ಗೆ ಮಾತನಾಡಬಹುದು,ಕಥೆ ಹೇಳಬಹುದು, ಕವಿತೆ ವಾಚಿಸಬಹುದು. ಇನ್ನು ಉಳಿದ ಎರಡೂ ಭಾಗಗಳೂ ಕೇವಲ ಕೇಳುಗರಾಗಿ ಭಾಗಿಯಾಗಬಹುದು.

ಸೋಮಶೇಖರ ಸಿ.ಜೆ

Advertisement

Udayavani is now on Telegram. Click here to join our channel and stay updated with the latest news.

Next