Advertisement

ಕ್ಲಬ್‌ ಬ್ಯಾಂಕ್ವೆಟ್‌ ಹಾಲ್‌ ಉದ್ಘಾಟನೆ

10:38 AM Jul 01, 2018 | Team Udayavani |

ಕಲಬುರಗಿ: ಮಹಾನಗರದ ಹೃದಯ ಭಾಗ ಸಾರ್ವಜನಿಕ ಉದ್ಯಾನವನದಲ್ಲಿರುವ ಗುಲಬರ್ಗಾ ಕ್ಲಬ್‌ ಕೇವಲ ಮನೋರಂಜನೆಗೆ ಸಿಮೀತವಾಗಿರದೆ ಆಟೋಟಗಳಿಗೂ ಹೆಚ್ಚಿನ ಒತ್ತು ನೀಡಲು ಮುಂದಾಗಬೇಕೆಂದು ಕ್ಲಬ್‌ ಜಿಲ್ಲಾ 
ಧಿಕಾರಿ ಆರ್‌. ವೆಂಕಟೇಶಕುಮಾರ ಕರೆ ನೀಡಿದರು.

Advertisement

ಮಹಾನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಗುಲಬರ್ಗಾ ಕ್ಲಬ್‌ನ ನೂತನ ಬ್ಯಾಂಕ್ವೆಟ್‌ ಹಾಲ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಲಬ್‌ ಇತ್ತೀಚೆಯ ವರ್ಷಗಳಲ್ಲಿಸಾಕಷ್ಟು ಅಭಿವೃದ್ಧಿ ಹೊಂದುತ್ತಾ ಬಂದಿರುವುದು
ಸಂತಸದ ವಿಷಯ. ಸದಸ್ಯರಿಗೆ ಜಿಮ್‌, ಈಜು ಸೇರಿ ಇತರ ಆಟೋಟಗಳನ್ನು ಮೈಗೂಡಿಸಿಕೊಳ್ಳಲು ವಾತಾವರಣ
ಕಲ್ಪಿಸುವುದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಕ್ರಮ ಕೈಗೊಳ್ಳಬೇಕೆಂದರು.

ಕ್ಲಬ್‌ನ ಸಮಯವನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಬೇಕು. ಏಕೆಂದರೆ ಕ್ಲಬ್‌ನ ಅಧ್ಯಕ್ಷರು ತಾವೇ
ಆಗಿರುವುದರಿಂದ ನಿಯಮ ಪಾಲನೆ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕ್ಲಬ್‌ನ ಸದಸ್ಯರಿಗೆ ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಮಹಾಪೌರ ಶರಣಕುಮಾರ ಮೋದಿ, ಕ್ಲಬ್‌ನ ರಸ್ತೆ ಕೆಟ್ಟು ಹೋಗಿದ್ದರಿಂದ ಎಸ್‌ ಎಫ್‌ಸಿ ಅನುದಾನದಲ್ಲಿ 5 ಲಕ್ಷ ರೂ. ತೆಗೆದಿಡಲಾಗುವುದು ಎಂದು ಪ್ರಕಟಿಸಿದರು. ಕ್ಲಬ್‌ನ ಜಂಟಿ ಕಾರ್ಯದರ್ಶಿ ಮಲ್ಲಿನಾಥ ಗುಡೇದ್‌ ಮಾತನಾಡಿ, ಕ್ಲಬ್‌ನ ಸದಸ್ಯರ ಸಣ್ಣ-ಸಣ್ಣ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ಸುಸಜ್ಜಿತ
ಬ್ಯಾಂಕ್ವೆಟ್‌ ಹಾಲ್‌ ನಿರ್ಮಿಸಲಾಗಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಹೊಂದಲಾಗಿದೆ ಎಂದು ಹೇಳಿದರು. ಕ್ಲಬ್‌ನ ಕಾರ್ಯದರ್ಶಿ ಸೋಮನಾಥ ನಿಗ್ಗುಡಗಿ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿದರು. ಕ್ಲಬ್‌ನ ಆಡಳಿತ ಮಂಡಳಿ ಸದಸ್ಯರಾದ
ಡಾ| ಲಿಂಗರಾಜ ಲಾತೂರೆ, ಮಹಾಂತಗೌಡ ತುಪ್ಪದ, ಸಾತಪ್ಪ ಪಟ್ಟಣಕರ್‌, ಎಸ್‌.ಕೆ. ಹಿರೇಮಠ, ಪ್ರದೀಪಕುಮಾರ ಮನ್ಸೂರ. ಕೆ.ಎಸ್‌. ಸಕ್ರಿ ಹಾಗೂ ಕ್ಲಬ್‌ನ ಹಿರಿಯ ಸದಸ್ಯರು ಹಾಜರಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ| ನರೇಂದ್ರ ಬಡಶೇಷಿ ನಿರೂಪಿಸಿದರು, ಸವಿತಾ ಪಾಟೀಲ ಪ್ರಾರ್ಥನಾಗೀತೆ ಹಾಡಿದರು, ಚಂದ್ರಶೇಖರ ಕಮಲಾಪುರ ಸ್ವಾಗತಿಸಿದರು, ಕ್ಲಬ್‌ನ ಖಜಾಂಚಿ ಶೇಖರ ಮೋದಿ ವಂದಿಸಿದರು. ನಂತರ ರಸಮಂಜರಿ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next