Advertisement

ಮೋಡ ಬಿತ್ತನೆ ಇಂದೂ ಅನುಮಾನ

08:15 AM Aug 23, 2017 | Harsha Rao |

ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷೆಯ ಮೋಡ ಬಿತ್ತನೆಯ “ವರ್ಷಧಾರೆ’ ಯೋಜನೆಗೆ ಚಾಲನೆ ಏನೋ ಸಿಕ್ಕಿದೆ. ಆದರೆ, ಸದ್ಯಕ್ಕೆ ಇದು ರೈತರಿಗೆ ಹರ್ಷ ತರುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ. ಏಕೆಂದರೆ ಯೋಜನೆ ಪ್ರಾರಂಭವಾದ ಎರಡನೇ ದಿನ ಮೋಡ ಬಿತ್ತನೆ ಆಗಿಲ್ಲ. ಬುಧವಾರವೂ ಮೋಡ ಬಿತ್ತನೆ ನಡೆಯುವುದು ಅನುಮಾನ. ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಹಾರಾಟ ವಿಳಂಬವಾಗಿದ್ದರಿಂದ ಸೋಮವಾರದ ಮೋಡ ಬಿತ್ತನೆ ಪ್ರಾಯೋಗಿಕ ಮಾತ್ರ ಆಯಿತು.

Advertisement

ಮಂಗಳವಾರ ಮಧ್ಯಾಹ್ನ 1ರಿಂದ 4 ಗಂಟೆಯೊಳಗೆ ರಾಡಾರ್‌ ಸಂಕೇತಗಳ ನಿಖರತೆ ಗಮನಿಸಿ ಮೋಡ ಬಿತ್ತನೆ
ಮಾಡಲಾಗುವುದು ಎಂದು ಇಲಾಖೆ ಹೇಳಿತ್ತು. ಆದರೆ, ಅದು ಆಗಿಲ್ಲ. ಬುಧವಾರದ ಮೋಡ ಬಿತ್ತನೆ ಬಗ್ಗೆಯೂ ಅಧಿಕಾರಿಗಳು ರಾಡಾರ್‌ ಸಂಕೇತಗಳ ನಿಖರತೆಯ ಕಾರಣವನ್ನೇ ನೀಡುತ್ತಿದ್ದಾರೆ.

ಸೋಮವಾರ ತಿಳಿಸಿದಂತೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ರಾಡಾರ್‌ ಸ್ಥಾಪಿಸಿದ್ದು, ಅದರ ತಾಂತ್ರಿಕ ಕ್ಯಾಲಿಬ್ರೇಷನ್‌ ಕಾರ್ಯ ಪ್ರಗತಿಯಲ್ಲಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ ಕ್ಯಾಲಿಬ್ರೇಷನ್‌ ಕಾರ್ಯ ಪೂರ್ಣಗೊಳ್ಳುವುದು. ಬೆಂಗಳೂರಿನ ಎಚ್‌ ಎಎಲ… ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಹಾರಾಟ ನಡೆಸಲಿದೆ.

ವರ್ಷಧಾರೆ ಯೋಜನೆಯಡಿ ಮೋಡ ಬಿತ್ತನೆಯು ಒಟ್ಟು 60 ದಿನ 300 ಹಾರಾಟ ಗಂಟೆಗಳ ಕಾರ್ಯಕ್ರಮಕ್ಕೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಷ್ಟು ಗಂಟೆಗಳ ಕಾಲ ಮೋಡ ಬಿತ್ತನೆ ಕೈಗೊಳ್ಳಲಾಗುತ್ತದೆಯೋ ಅಷ್ಟು ಗಂಟೆಗಳಿಗೆ ತಗಲುವ ವೆಚ್ಚವನ್ನು ಮಾತ್ರ ಪಾವತಿಸಲಾಗುತ್ತದೆ. ಸೋಮವಾರ (ಆ.21) ನಡೆದ ಪ್ರಾಯೋಗಿಕ ಹಾರಾಟಕ್ಕೆ
ಯಾವುದೇ ವೆಚ್ಚವನ್ನು ಗುತ್ತಿಗೆದಾರರಿಗೆ ಪಾವತಿ ಮಾಡುವುದಿಲ್ಲ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ
ಮುಖ್ಯ ಅಭಿಯಂತರ ಪ್ರಕಾಶಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next