Advertisement

ಶಾಲೆಗಳು ಮುಚ್ಚಿದ್ದರಿಂದಾಗಿ 247 ಮಿಲಿಯನ್ ಭಾರತೀಯ ವಿದ್ಯಾರ್ಥಿಗಳ  ಮೇಲೆ ಪರಿಣಾಮ..!

10:36 AM Mar 05, 2021 | Team Udayavani |

ನವ ದೆಹಲಿ : ಕೋವಿಡ್ ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ ಮತ್ತು ಲಾಕ್‌ ಡೌನ್‌ ನ ಪರಿಣಾಮದಿಂದಾಗಿ ಇಡೀ ಪ್ರಪಂಚದ ವ್ಯವಸ್ಥೆ ಅಡಿಮೇಲಾಗಿದೆ. ನಮ್ಮ ದೇಶದಲ್ಲಿಯೂ ಕೂಡ ಆರ್ಥಿಕ, ನಾಗರಿಕ ಹಾಗೂ ಶಿಕ್ಷಣ ವ್ಯವಸ್ಥೆಯನ್ನೊಳಗೊಂಡು ಹಲವಾರು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ.

Advertisement

ಕೋವಿಡ್ ಪರಿಣಾಮದಿಂದಾಗಿ ಕೇಂದ್ರ ಸರ್ಕಾರ ಕೈಗೊಂಡ ಲಾಕ್ ಡೌನ್ ಪರಿಣಾಮದಿಂದಾಗಿ 2020 ರಲ್ಲಿ 1.5 ಮಿಲಿಯನ್ ಶಾಲೆಗಳು ಮುಚ್ಚಲ್ಪಟ್ಟವು, ಇದರಿಂದಾಗಿ ಭಾರತದಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ದಾಖಲಾದ 247 ಮಿಲಿಯನ್ ಮಕ್ಕಳ ಮೇಲೆ ಪರಿಣಾಮ ಬೀರಿದೆ ಎಂದು ಯುನಿಸೆಫ್ (UNICEF, United Nations International Children’s Emergency Fund) ತಿಳಿಸಿದೆ.

ಓದಿ : ಲಕ್ಷ ಅಕ್ಕಿ ಮುಡಿಗಳನ್ನು ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿರುವ ದೇವ ಪೂಜಾರಿ

ಇನ್ನು, ಆನ್‌ ಲೈನ್ ಶಿಕ್ಷಣವು ಎಲ್ಲರಿಗೂ ಆಯ್ಕೆಯಾಗಿರಲಿಲ್ಲ, ಏಕೆಂದರೆ ನಾಲ್ಕು ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ಡಿಜಿಟಲ್ ಸೌಲಭ್ಯವಿತ್ತು ಮತ್ತು ಇಂಟರ್ನೆಟ್ ಸಂಪರ್ಕವಿದೆ.   ಕೋವಿಡ್ ಆಗಮನಕ್ಕಿಂತ ಮುಂಚೆಯೂ  ಭಾರತದಲ್ಲಿ ಕಾಲು ಭಾಗದಷ್ಟು ಕುಟುಂಬಗಳಿಗೆ (ಶೇಕಡಾ 24) ಮಾತ್ರ ಇಂಟರ್ನೆಟ್ ಸೌಲಭ್ಯವಿತ್ತು ಎಂದು ಯುನಿಸೆಫ್ ತಿಳಿಸಿದೆ. ಇನ್ನು, ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾದಲ್ಲಿ ಹೆಚ್ಚಿನ ಗೈರು ಹಾಜರಿ ಕಂಡು ಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಯುನಿಸೆಫ್ ಬಿಡುಗಡೆ ಮಾಡಿದ ದತ್ತಾಂಶವು ವಿಶ್ವಾದ್ಯಂತ 888 ಮಿಲಿಯನ್ ಗೂ ಹೆಚ್ಚು ಮಕ್ಕಳು ಪೂರ್ಣ ಮತ್ತು ಭಾಗಶಃ ಶಾಲಾ ಮುಚ್ಚುವಿಕೆಯಿಂದಾಗಿ ತಮ್ಮ ಶಿಕ್ಷಣಕ್ಕೆ ಅಡೆತಡೆಗಳನ್ನು ಎದುರಿಸುತ್ತಲೇ ಇದ್ದಾರೆ. ಅದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ತುಂಬಾ ಪ್ರಭಾವ ಬೀರಿದೆ ಎಂದು ಹೇಳಿದೆ.

Advertisement

ಶಾಲಾ ಮುಚ್ಚುವಿಕೆಯ ವರದಿಗಳ ವಿಶ್ಲೇಷಣೆಯು ಮಾರ್ಚ್ 2020 ರಿಂದ ಫೆಬ್ರವರಿ 2021 ರವರೆಗೆ ವಿಶ್ವದಾದ್ಯಂತ 14 ದೇಶಗಳು ಹೆಚ್ಚಇನ ಪ್ರಮಾಣದಲ್ಲಿ ಶಾಲೆಗಲನ್ನು ಮುಚ್ಚಲ್ಪಟ್ಟಿದೆ ಎಂದು ಹೇಳುತ್ತದೆ. ಆ ದೇಶಗಳಲ್ಲಿ ಮೂರನೇ ಎರಡರಷ್ಟು ಭಾಗವು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಲ್ಲಿವೆ, ಇದು ಸುಮಾರು 98 ಮಿಲಿಯನ್  ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.

ವಿಶೇಷವಾಗಿ ಅತ್ಯಂತ ದುರ್ಬಲ ಮತ್ತು ಬಡ ವರ್ಗಕ್ಕೆ ಸೇರಿದವರಲ್ಲಿ, ಕೋವಿಡ -19 ಬಿಕ್ಕಟ್ಟು ಪ್ರಾರಂಭವಾಗುವ ಮೊದಲೇ ಆರು ಮಿಲಿಯನ್ ಗೂ ಹೆಚ್ಚು ಬಾಲಕಿಯರು ಮತ್ತು ಹುಡುಗರು ಈಗಾಗಲೇ ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಹೇಳುವುದರೊಂದಿಗೆ ಮಕ್ಕಳ ಮೇಲೆ ಶಾಲೆಗಳು ಮುಚ್ಚಿರುವ ಪರಿಣಾಮದ ಬಗ್ಗೆ ಎಚ್ಚರಿಕೆಯನ್ನು ಯುನಿಸೆಫ್ ನೀಡಿದೆ.

ಓದಿ : ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!

Advertisement

Udayavani is now on Telegram. Click here to join our channel and stay updated with the latest news.

Next