Advertisement

ಹಾಸನ-ಸಕಲೇಶಪುರ; ರಾಷ್ಟ್ರೀಯ ಹೆದ್ದಾರಿ 6 ತಿಂಗಳು ಮುಚ್ಚುವುದಕ್ಕೆ ವಿರೋಧ

11:34 AM Jan 10, 2022 | Team Udayavani |

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ 75ನ್ನು ಸುಮಾರು 6 ತಿಂಗಳ ಕಾಲ ಮುಚ್ಚಲು ಅವಕಾಶ ನೀಡುವಂತೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ರಾಜ್‌ಕಮಲ್‌ ಕಂಪೆನಿ ಮನವಿ ಮಾಡಿರುವುದು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹಾಸನ-ಸಕಲೇಶಪುರ-ಮಾರನಹಳ್ಳಿ ನಡುವಿನ ಸುಮಾರು 56 ಕಿ.ಮೀ. ದೂರದ ರಸ್ತೆಯನ್ನು ಮೊದಲಿಗೆ ಚತುಷ್ಪಥ ರಸ್ತೆ ಕಾಮ ಗಾರಿ ಮಾಡಲು ಐಸೋಲೆಕ್ಸ್‌ ಕಂಪೆ‌ನಿ ಗುತ್ತಿಗೆ ಪಡೆದಿತ್ತು. ಈ ಕಂಪೆನಿ ದಿವಾಳಿಯಾದ್ದರಿಂದ ಉಪ ಗುತ್ತಿಗೆ ಪಡೆದಿದ್ದ ರಾಜ್‌ಕಮಲ್‌ ಕಂಪೆನಿಯೇ ಕಾಮಗಾರಿ ಮುಂದು ವರಿಸಲು ಒಪ್ಪಿಕೊಂಡಿದೆ. ಈಗ ಕಾಮಗಾರಿ ಪ್ರಾರಂಭವಾಗಿ 4 ವರ್ಷ ಗಳಾಗುತ್ತ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವುದು ಜನರಲ್ಲಿ ಅಸಮಾಧಾನ ಸೃಷ್ಟಿಸಿದೆ.

ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್‌

ಆರು ತಿಂಗಳಲ್ಲಿ ರಸ್ತೆ ಕಾಮಗಾರಿ ಸಾಧ್ಯವೇ?
ಹಾಸನ-ಸಕಲೇಶಪುರ ನಡುವಿನ 40 ಕಿ.ಮೀ. ದೂರದ ನೇರ ರಸ್ತೆ ಶೇ.50-60ರಷ್ಟು ಮುಗಿಸಲು 4 ವರ್ಷ ತೆಗೆದುಕೊಳ್ಳಲಾಗಿದೆ. ಇನ್ನು ಈ ಮಾರ್ಗದಲ್ಲಿ ಕಾಮಗಾರಿ ಮುಗಿಸದೆ ಏಕಾಏಕಿ ಸಕಲೇಶಪುರ ಹಾಗೂ ಮಾರನಹಳ್ಳಿ ನಡುವಿನ ಪಶ್ಚಿಮಘಟ್ಟದ ಕಡಿದಾದ ತಿರುವಿನ ರಸ್ತೆಯ ಕಾಮಗಾರಿ ಮುಗಿಸಲು 6 ತಿಂಗಳು ಕಾಲಾವಕಾಶ ಕೇಳಿದ್ದು, ಹೆದ್ದಾರಿ ಮುಚ್ಚಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮೊದಲಿಗೆ ಹಾಸನ-ಸಕಲೇಶಪುರ ನಡುವಿನ ಕಾಮಗಾರಿ ಮುಗಿಸಿದ ಬಳಿಕ ಸಕಲೇಶಪುರ ಹಾಗೂ ಮಾರನಹಳ್ಳಿ ನಡುವಿನ ಕಾಮಗಾರಿಗೆ ರಸ್ತೆ ಬಂದ್‌ ಮಾಡಲಿ ಎಂದಿದ್ದಾರೆ. ಕಾಮಗಾರಿ ಮುಗಿಸದೆ ಏಕಾಏಕಿ ಸಕಲೇಶಪುರ ಮಾರನಹಳ್ಳಿ ನಡುವೆ ಹೆದ್ದಾರಿ ಬಂದ್‌ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next