ಹೈದರಾಬಾದ್: ವೇಷ ಧರಿಸಿ ಬಂದ ದುಷ್ಕರ್ಮಿಯೊಬ್ಬ ತೆಲುಗು ದೇಶಂ ಪಕ್ಷದ ಮುಖಂಡ, ಮಾಜಿ ಸಂಸದ ಶೇಷಗಿರಿ ರಾವ್ ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿರುವ ಘಟನೆ ಗುರುವಾರ (ನವೆಂಬರ್ 17) ಮುಂಜಾನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಟುನಿ ನಗರದಲ್ಲಿ ನಡೆದಿದೆ.
ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ಗೆ ಬ್ಯಾಟಿಂಗ್ ಕೋಚ್ ಆದ ಜಾಫರ್: ಕಾಲೆಳೆದ ಮೈಕಲ್ ವಾನ್
ಭವಾನಿ ಮಾಲಾ ಉಪಾಸಕನಂತೆ ವೇಷಧರಿಸಿ ಬಂದ ಆಗಂತುಕ ಶೇಷಗಿರಿ ರಾವ್ ಅವರ ಮನೆಯೊಳಗೆ ಬಂದಿದ್ದು, ಅವರ ಜೊತೆ ಮಾತನಾಡುತ್ತ ಏಕಾಏಕಿ ಟವೆಲ್ ಒಳಗೆ ಅಡಗಿಸಿಟ್ಟಿದ್ದ ಆಯುಧದಿಂದ ರಾವ್ ಅವರ ತಲೆ ಮತ್ತು ಕೈಗಳ ಮೇಲೆ ದಾಳಿ ನಡೆಸಿದ್ದ.
ಘಟನೆಯಿಂದ ಶೇಷಗಿರಿ ರಾವ್ ಕೂಗಿಕೊಂಡಾಗ ಮನೆಯೊಳಗಿದ್ದ ಕುಟುಂಬ ಸದಸ್ಯರು ಹೊರ ಬಂದಾಗ ಆರೋಪಿ ಬೈಕ್ ನಲ್ಲಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾವ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆ ಮತ್ತು ಕೈಗೆ ಗಂಭೀರವಾಗಿ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
Related Articles
ಘಟನೆಯ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಗುರುತು ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.