Advertisement

ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಬಂದ್‌

03:18 PM Mar 27, 2020 | Suhan S |

ಬಾಗೇಪಲ್ಲಿ: ಕೋವಿಡ್ 19  ವೈರಸ್‌ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದು, ಜಿಲ್ಲೆಯಲ್ಲೂ ಆತಂಕದ ವಾತಾವರಣದ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸದಿರಲು ಜಾಮೀಯಾ ಮಸೀದಿ ಆಡಳಿತ ಮಂಡಳಿ ತೀರ್ಮಾನಿಸಿದೆ.

Advertisement

ಪಟ್ಟಣದ ಜಾಮೀಯಾ ಮಸೀದಿ ಸಭಾಂಗಣದಲ್ಲಿ ಜಾಮೀಯಾ ಮಸೀದಿ ಆಡಳಿತ ಮಂಡಳಿ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ತುರ್ತಾಗಿ ಸಭೆ ಸೇರಿ ರಾಜ್ಯ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಿ ದಿನ ಮಸೀದಿಗಳಲ್ಲಿ ನಿರ್ವಹಿಸಲಾಗುತ್ತಿರುವ ಐದು ಹೊತ್ತಿನ ಸಾಮೂಹಿಕ ನಮಾಜನ್ನು ಸಮುದಾಯದವರು ಮನೆಗಳಲ್ಲಿ ನಿರ್ವಹಿಸಲು ಸೂಚನೆ ನೀಡಲಾಗಿದೆ. ತಾತ್ಕಾಲಿಕವಾಗಿ ಮಸೀದಿಯಲ್ಲಿ ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ.

ಮುಂದಿನ ಆದೇಶದವರೆಗೆ ತಾಲೂಕಿನ ಎಲ್ಲಾ ಮಸೀದಿಗಳಲ್ಲಿನ ಜಮಾತ್‌ನ ನಮಾಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಶೇಕ್‌ ಖಾಸೀಂ ಸಾಬ್‌, ಕಾರ್ಯದರ್ಶಿ ಮಹಮದ್‌ ಯೂನೂಸ್‌, ಪುರಸಭೆ ಮಾಜಿ ಸದಸ್ಯ ಮಹಮದ್‌ ಎಸ್‌ .ನೂರುಲ್ಲಾ ಹಾಗೂ ಮುಖಂಡರಾದ ಇಂತಿಯಾಜ್‌, ಪರೀದ್‌, ಅಹಮದ್‌ ಖಾನ್‌, ಶಬ್ಬೀರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next