Advertisement

ಮುಚ್ಚಲ್ಪಟ ಸರಕಾರಿ ಕನ್ನಡ ಮಾ. ಶಾಲೆ ಎ.18ಕ್ಕೆ ಮತ್ತೆ ತೆರೆದುಕೊಳ್ಳಲಿದೆ!

08:21 PM Apr 02, 2019 | Team Udayavani |

ಕಟಪಾಡಿ : ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಕುರ್ಕಾಲು, ಕೋಟೆ, ಉದ್ಯಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಮುಚ್ಚಲ್ಪಟ್ಟ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಎ.18ರಂದು ಮತ್ತೆ ತೆರೆದುಕೊಳ್ಳಲಿದೆ. ಆದರೆ ಶಾಲಾ ಮಕ್ಕಳ ಆಟ-ಪಾಠಕ್ಕಲ್ಲ. ಮತದಾನದ ಚಟುವಟಿಕೆಗಾಗಿ.

Advertisement

ಮಕ್ಕಳು ಇಲ್ಲದೆ ಮುಚ್ಚಿ ಹಲವು ವರ್ಷಗಳೇ ಕಳೆದಿರುವ ಶಾಲೆಗಳಾದ ಉದ್ಯಾವರ ಪಡುಕರೆಯಲ್ಲಿರುವ ಸರಕಾರಿ ಫಿಶರೀಸ್‌ ಹಿ.ಪ್ರಾ. ಶಾಲೆ (ದರ್ಬಾರ್‌ ಶಾಲೆ), ಕೋಟೆ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಉಡುಪಿ ಜಿ.ಪಂ. ಕಿ. ಪ್ರಾ. ಶಾಲೆ ಮಟ್ಟು ಮತ್ತು ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಶ್ರೀ ಗಣಪತಿ ಹಿ. ಪ್ರಾ. ಶಾಲೆಯು ಮತದಾನದ ಕೇಂದ್ರವಾಗಿ ಗುರುತಿಸಲ್ಪ ಟ್ಟಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನ ಕ್ಕಾಗಿ ಸುಸಜ್ಜಿತ ಗೊಂಡು ಮತ್ತೆ ತೆರೆದು ಕೊಳ್ಳಲಿದೆ.

ಒಟ್ಟು 13 ಮತದಾನದ ಕೇಂದ್ರಗಳನ್ನು ಹೊಂದಿರುವ ಉದ್ಯಾವರದ ಈ ಮತಗಟ್ಟೆಯು ಅಂದಾಜು 450 ಮತದಾರರನ್ನು ಹೊಂದಿದ್ದು, 225
ಪುರುಷರು, 225 ಮಹಿಳಾ ಮತದಾರ ರನ್ನು ಹೊಂದಿರುತ್ತದೆ. ಕೋಟೆ ಮಟ್ಟುವಿ ನಲ್ಲಿರುವ 5 ಮತಗಟ್ಟೆಗಳಲ್ಲಿ ಈ ಶಾಲೆಯ ಮತಗಟ್ಟೆಯೂ ಒಂದಾಗಿದ್ದು, ಅಂದಾಜು 1,244 ಮತದಾರರಿದ್ದು, 609 ಪುರುಷ, 635 ಮಹಿಳಾ ಮತದಾರರು ಇದ್ದಾರೆ. ಕುರ್ಕಾಲು ಗ್ರಾಮದ 4 ಮತದಾನ ಕೇಂದ್ರದಲ್ಲೊಂದಾದ ಈ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ 576 ಮತದಾರರ, 289 ಪುರುಷ, 287 ಮಹಿಳಾ ಮತದಾರರು ಇದ್ದಾರೆ ಎಂದು ಈ ಮತಗಟ್ಟೆಗಳ ಬಿ.ಎಲ್‌.ಒ. ಮಾಹಿತಿ ನೀಡಿದ್ದಾರೆ.

ಈ ಮತದಾನದ ಕೇಂದ್ರಗಳು, ಶಾಲೆಯು ಚಾಲ್ತಿಯಲ್ಲಿ ಇರುವ ಸಂದರ್ಭ ಗುರುತಿಸಲ್ಪಟ್ಟು ಮತಗಟ್ಟೆಯಾಗಿ ಸೂಚಿಸಲ್ಪಟ್ಟಿತ್ತು. ಶಾಲಾ ಚಟುವಟಿಕೆ ಇಲ್ಲ ಎಂಬ ಕಾರಣಕ್ಕೆ ಏಕಾಏಕಿಯಾಗಿ ಮತಗಟ್ಟೆ ಬದಲಾಯಿಸಿದಲ್ಲಿ ಮತದಾರರಿಗೆ ಅನಾನುಕೂಲವಾಗುವ ಸಾಧ್ಯತೆ ಹೆಚ್ಚು ಎಂಬ ಕಾರಣಕ್ಕೆ ಇದೇ ಶಾಲೆಗಳನ್ನು ಮತದಾನದ ಕೇಂದ್ರವಾಗಿ ಉಳಿಸಿಕೊಳ್ಳಲಾಗುತ್ತಿದೆ ಎಂದು ಗ್ರಾಮಲೆಕ್ಕಿಗರು ಮಾಹಿತಿ ನೀಡಿದ್ದು, ಚುನಾವಣೆಯಸಂದರ್ಭ ಮತಗಟ್ಟೆಯನ್ನು ಮತ್ತಷ್ಟು ಸುಸಜ್ಜಿತಗೊಳಿಸಲಾಗುತ್ತದೆ ಎಂದವರು ತಿಳಿಸಿದ್ದಾರೆ.

ಮತದಾನಕ್ಕೆ ಹೆಚ್ಚಿನ ಒತ್ತು ನೀಡುವ ಸರಕಾರ ಮುಚ್ಚಿದ ಸರಕಾರಿ
ಕನ್ನಡ ಮಾ. ಶಾಲೆಯನ್ನು ತೆರೆಯುವತ್ತ‌ಲೂ ಗಮನಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಮೂಲ ಸೌಕರ್ಯದೊಂದಿಗೆ ತೆರೆದುಕೊಳ್ಳಲಿದೆ
ಶಾಲೆ 2012ರಲ್ಲಿ ಮುಚ್ಚಿದ್ದು ಸ್ಥಳೀಯ ಜನರಿಗೆ ಮತ ಹಾಕಲು ಅನುಕೂಲ ವಾಗಬೇಕೆಂಬ ಹಿತದೃಷ್ಟಿಯಿಂದ ಅಂದು ಸರಕಾರಿ ಶಾಲೆಗಳನ್ನು ಮತಗಟ್ಟೆಯಾಗಿ ಅಧಿಕಾರಿಗಳು ಆರಿಸಿಕೊಂಡಿದ್ದರು. ಇದೀಗ ಶಾಲೆ ಮುಚ್ಚಿದ್ದರೂ ಮತದಾನ ಕೇಂದ್ರವಾಗಿ ಉಳಿದಿದ್ದು, ಮತದಾನಕ್ಕಾಗಿ ಸುಸಜ್ಜಿತಗೊಂಡು ಮೂಲ ಸೌಕರ್ಯಗಳ ವ್ಯವಸ್ಥೆಯೊಂದಿಗೆ ಶಾಲೆ ತೆರೆದುಕೊಳ್ಳಲಿದೆ .

-ಹರೀಶ್‌ ಶೆಟ್ಟಿ,, ನಿವೃತ್ತ ಶಿಕ್ಷಕರು. ಶ್ರೀ ಗಣಪತಿ ಹಿ. ಪ್ರಾ. ಶಾಲೆ, ಕುರ್ಕಾಲು

  • ವಿಜಯ ಆಚಾರ್ಯ, ಉಚ್ಚಿಲ
Advertisement

Udayavani is now on Telegram. Click here to join our channel and stay updated with the latest news.

Next