Advertisement
ಪಶ್ಚಿಮ ಬಂಗಾಲ ಸರಕಾರದ ಆಹ್ವಾನದ ಮೇರೆಗೆ ಅಮಿತಾಭ್ ಅವರು ಕೋಲ್ಕತಾ ಇಂಟರ್ನ್ಯಾಶನಲ್ ಪಿಲ್ಮ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು.
Related Articles
Advertisement
ಅಮಿತಾಭ್ ಅವರು ಕಾರ್ಯಕ್ರಮ ಮುಗಿದ ಬಳಿಕ ಶನಿವಾರ ಬೆಳಗ್ಗೆ ಮುಂಬಯಿ ವಿಮಾನ ಏರಲು ಈ ಕಾರನ್ನು ಏರಿದ್ದರು. ಡಫ್ರಿನ್ ರಸ್ತೆಯಲ್ಲಿ ಇದರ ಹಿಂಬದಿಯ ಚಕ್ರ ಕಳಚಿ ಅಪಘಾತಕ್ಕೆ ಗುರಿಯಾಯಿತು. ಈ ಘಟನೆಯಿಂದ ಆಘಾತಗೊಂಡರೂ ಅಮಿತಾಭ್ ವಿಚಲಿರಾಗಲಿಲ್ಲ ಎನ್ನುವುದು ವಿಶೇಷ.
ಪ್ರಾಥಮಿಕ ತನಿಖೆಯಲ್ಲಿ ಕಾರಿನ ಫಿಟ್ನೆಸ್ ಸರ್ಟಿಫಿಕೇಟ್ ಬಹಳ ಹಿಂದೆಯೇ ಮುಗಿದು ಹೋಗಿದ್ದರೂ ಅದನ್ನಿನ್ನೂ ಸೇವೆಯಲ್ಲಿ ಇರಿಸಲಾಗಿತ್ತು ಎಂದು ಗೊತ್ತಾಗಿದೆ. ಬಚ್ಚನ್ ಜತೆಗೆ ಕಾರಿನಲ್ಲಿ ರಾಜ್ಯದ ಹಿರಿಯ ಸಚಿವರೊಬ್ಬರೂ ಇದ್ದರು. ಅವರೂ ಪಾರಾಗಿದ್ದಾರೆ.