Advertisement

ಕ್ಲಿಂಕರ್ ಬೆಲ್ಟ್ ಗೆ ಬೆಂಕಿ

11:30 AM Feb 21, 2022 | Team Udayavani |
ಸಿಮೆಂಟ್ ಕ್ಲಿಂಕರ್ ಸಾಗೀಸುವ ಬೆಲ್ಟ್ ಗೆ ಬೆಂಕಿ ಹತ್ತಿ ಯಂತ್ರಗಳು ಉರಿದು ಅಗ್ನಿ ಅವಘಡ ಸಂಭವಿಸಿದ ಘಟನೆ ಸೋಮವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ. ಕಲ್ಲು, ಮ್ಯಾಂಗನೀಸ್ ಮಣ್ಣು, ಜಿಬಸಂ, ಕಲ್ಲಿದ್ದಲು, ನೀರು ಮಿಶ್ರಣಮಾಡಿ ಸಿಮೆಂಟ್ ಉತ್ಪಾದನೆಗೂ ಮುಂಚೆ ಕ್ಲಿಂಕರ್ ತಯಾರಿಸುವ ಎಸಿಸಿ ಘಟಕದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಆಗಸಕ್ಕೆ ದಟ್ಟವಾದ ಹೊಗೆ ಹರಡಿತು. ನೀಲಿ ಆಗಸದಲ್ಲಿ ಕಪ್ಪು ಕಾರ್ಮೋಡ ಆವರಿಸಿಕೊಂಡಿತು. ವಾಡಿ ಪಟ್ಟಣದ ಮೇಲೆ ಕರಿಛಾಯೆ ಮೂಡಿಸಿತು. ಭಯಂಕರವಾದ ಹೊಗೆ ಕಂಡು ಕಾರ್ಮೋಡಗಳ ಚಲನೆಯಿರಬಹುದು ಎಂದು ನಗರದ ಜನ ಭಾವಿಸಿದ್ದರು. ಇದು ಎಸಿಸಿ ಕಂಪನಿ ಉಗುಳುತ್ತಿರುವ ವಿಷಕಾರಿ ಧೂಳು ಎಂದರಿತು ಧಂಗಾದರು. ಘಟನೆಯಿಂದ ವಿಚಲಿತರಾದ ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಇಂಜಿನಿಯರ್ ಗಳು, ಅವಘಡ ಸಂಬವಿಸಿದ ಸ್ಥಳದತ್ತ ದೌಡಾಯಿಸಿದರು. ಕ್ಲಿಂಕರ್ ಸಾಗಿಸುವ ಬೆಲ್ಟ್ ಕತ್ತರಿಸಿದೆಯೋ ಅಥವ ಕ್ಲಿಂಕರ್ ಸೈಲೋ ಧ್ವಂಸಗೊಂಡಿದೆಯೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ವಾಡಿ ನಗರ ಸೇರಿದಂತೆ ಸುತ್ತಲ ಗ್ರಾಮಗಳಾದ ಇಂಗಳಗಿ, ಕುಂದನೂರ, ಚಾಮನೂರ, ಹಳಕರ್ಟಿ, ಕಮರವಾಡಿ, ಕೊಂಚೂರ, ಬಳವಡಗಿ ಪರಸರವೂ ಕಲುಷಿತಗೊಂಡು ಜನರ ಆಕ್ರೋಶಕ್ಕೆ ಗುರಿಯಾಯಿತು.
Advertisement

Udayavani is now on Telegram. Click here to join our channel and stay updated with the latest news.

Next