Advertisement

ಮಲ್ಪೆ ಸೈಂಟ್‌ ಮೇರಿ ದ್ವೀಪ ಕ್ಲಿಫ್‌ ಜಂಪಿಂಗ್‌ ತರಬೇತಿ

01:40 AM Dec 14, 2018 | Team Udayavani |

ಮಲ್ಪೆ: ಉಡುಪಿ ಜಿಲ್ಲಾಡಳಿತ ಮಲ್ಪೆ ಅಭಿವೃದ್ಧಿ ಸಮಿತಿ ಮತ್ತು ಮಂತ್ರ ಟೂರಿಸಂ ಡೆವಲಪ್‌ಮೆಂಟ್‌ ಕಂಪೆನಿಯ ವತಿಯಿಂದ ಕ್ಲಿಫ್‌ ಜಂಪ್‌ ತರಬೇತಿ ಕಾರ್ಯಕ್ರಮವು ಮಲ್ಪೆ ಸೈಂಟ್‌ಮೇರಿ ಐಲ್ಯಾಂಡ್‌ನ‌ಲ್ಲಿ ಗುರುವಾರ ನಡೆಯಿತು. ಆಸ್ಟ್ರೇಲಿಯಾದ ಆ್ಯಂಟನಿ, ಪುತ್ತೂರಿನ ಪಾರ್ಥ ವಾರಣಾಶಿ, ಸಿದ್ದಾರ್ಥ ಮತ್ತು ಬೆಂಗಳೂರಿನ ಅನುಷಾ  ಸೇರಿದಂತೆ ಒಟ್ಟು 4 ಮಂದಿ ತರಬೇತಿದಾರರು, 10 ಮಂದಿ ಸಾಹಸ ಪ್ರಿಯರಿಗೆ ತರಬೇತಿಯನ್ನು ನೀಡಿದರು.

Advertisement

ವಿಶ್ವದಾದ್ಯಂತ ಕರಾವಳಿಯ ದೇಶಗಳಲ್ಲಿ ಪ್ರಸಿದ್ದವಾಗಿರುವ ಈ ಕ್ರೀಡೆಗೆ ಭಾರತದಲ್ಲಿ ಗಂಗಾನದಿಯ ಹೃಷಿಕೇಶ್‌ನ್ನು ಹೊರತುಪಡಿಸಿದರೆ ಸಮುದ್ರದಲ್ಲಿ ಸೈಂಟ್‌ಮೇರಿ ದ್ವೀಪ ಅತ್ಯುತ್ತಮ ತಾಣವಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಸೈಂಟ್‌ ಮೇರೀಸ್‌ ನಲ್ಲಿ  ಈ ಕ್ರೀಡೆಯನ್ನು ನಡೆಸಲಾಗುತ್ತಿದ್ದು ಜನವರಿಯಿಂದ ಆಸಕ್ತ ಸಾಹಸಿ ಯುವಕರಿಗೆ ಕ್ಲಿಫ್‌ ಜಂಪಿಂಗ್‌ ತರಬೇತಿಯಲ್ಲಿ ನೀಡಲಾಗುತ್ತದೆ. ಎಪ್ರಿಲ್‌ ತಿಂಗಳಲ್ಲಿ ಇಲ್ಲಿ ಸಾಹಸ ಪ್ರದರ್ಶನವನ್ನು ನಡೆಸಲಾಗುವುದು ಎಂದು ಮಲ್ಪೆ ಬೀಚ್‌ ಅಭಿವೃದ್ದಿ  ಸಮಿತಿಯ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next