Advertisement
ಯೋಗಿತಾ ಲೋಕೇಶ್ ಅವರ ನೇತೃತ್ವದಲ್ಲಿ ವೇದಿಕೆ ಮತ್ತು ಸಭಾಂಗಣವನ್ನು ಅತ್ಯಂತ ಮನೋಹರವಾಗಿ ಅಲಂಕರಿಸಲಾಗಿತ್ತು.40ನೇ ಬೆಳಕಿನ ಕನ್ನಡೋತ್ಸವಕ್ಕೆ ವೇದಿಕೆಯಲ್ಲಿ ಕನ್ನಡಾಂಬೆಯ ಚಿತ್ರಪಟವನ್ನು ಇಟ್ಟು 40 ಎಂಬ ಸಂಖ್ಯೆಯನ್ನು ಅಲಂಕರಿಸಿದ್ದು ಎಲ್ಲರ ಗಮನ ಸೆಳೆಯುತ್ತಿತ್ತು. ಸಭಿಕರ ಛಾಯಾಚಿತ್ರಕ್ಕೆ ಪ್ರತ್ಯೇಕವಾದ ಸ್ಥಳವನ್ನು ವಿಶೇಷವಾಗಿ ಅಲಂಕರಿಸಿದ್ದರು.
Related Articles
Advertisement
ಟರ್ಮಿನಲ್ ಟವರ್‌ನಲ್ಲಿ ಕನ್ನಡ ಧ್ವಜ 708 ಅಡಿ ಎತ್ತರದ ಟರ್ಮಿನಲ್ ಟವರ್ 1964ರ ವರೆಗೂ ನ್ಯೂಯಾರ್ಕ್ ನಗರದ ಕಟ್ಟಡಗಳನ್ನು ಹೊರೆತುಪಡಿಸಿದರೆ ಉತ್ತರ ಅಮೆರಿಕದ ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಒಂದಾಗಿತ್ತು. 1920- 1930ರ ನಡುವೆ ಕಟ್ಟಲಾದ ಟರ್ಮಿನಲ್ ಟವರ್ ಆಗಿನ ಕಾಲಕ್ಕೆ ಪ್ರಪಂಚದ ಎರಡನೇ ಎತ್ತರದ ಕಟ್ಟಡವಾಗಿತ್ತು. ಇದು ಕ್ಲೀವ್‌ಲ್ಯಾಂಡ್ ನಗರದಲ್ಲಿ ವಾಸಿಸುತ್ತಿರುವವರಿಗೆ ಅತ್ಯಂತ ವಿಶೇಷವಾದ ಕಟ್ಟಡ. ಅಂತಹ ಕಟ್ಟಡ ನಮ್ಮ ಕರ್ನಾಟಕದ ಧ್ವಜವನ್ನು ತೊಟ್ಟು ಹಳದಿ ಮತ್ತು ಕೆಂಪು ಬಣ್ಣಗಳಿಂದ ಕಂಗೊಳಿಸಿದ್ದು, ಕನ್ನಡಿಗರ ಹೆಮ್ಮೆಯ ವಿಷಯವಾಗಿತ್ತು. ಆ ವಿಶೇಷತೆಯ ಲೈವ್ ಪ್ರದರ್ಶನವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸಿ ಎಲ್ಲರಿಗೂ ಮೈ ರೋಮಾಂಚನವಾಯಿತು. ಬೆಳಕಿನ ಕನ್ನಡೋತ್ಸವದ ಸಂಭ್ರಮ ಇಮ್ಮಡಿಗೊಂಡಿತ್ತು. ವಾಣಿ ಬಲರಾಮ್ ಮತ್ತು ಸುಜಯ್ ಸುಬ್ಬಯ್ಯ ಅವರ ಅತ್ಯಾಕರ್ಷಕ ನಿರೂಪಣೆ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿತ್ತು.
ಕಾರ್ಯಕ್ರಮದ ಉದ್ಘಾಟನೆಯ ಅನಂತರ ಕಸ್ತೂರಿ ಕನ್ನಡ ಸಂಘದ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಹಾಡು, ಭರತನಾಟ್ಯ, ನೃತ್ಯ ಹೀಗೆ ಹಲವಾರು ಬಗೆಯ ಮನೋರಂಜನೆಯ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿ ಬಂತು.
ಛದ್ಮವೇಷವಿಶೇಷವಾಗಿ ಕನ್ನಡ ಶಾಲೆಯ ಮಕ್ಕಳು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ಛದ್ಮವೇಷ ಕಾರ್ಯಕ್ರಮದಲ್ಲಿ ಭಾಗಿಯಾದರು. ಪುಟ್ಟ ಮಕ್ಕಳು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ವೇಷಭೂಷಣ ತೊಟ್ಟು ಸುಲಲಿತವಾಗಿ ಕನ್ನಡದಲ್ಲಿ ಮಾತನಾಡಿ, ಬಾರಿಸು ಕನ್ನಡ ಡಿಂಡಿಮವ ಹಾಡಿಗೆ ನೃತ್ಯ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು ಮತ್ತು ಭಾಷಾಭಿಮಾನವನ್ನು ಮೆರೆದರು. ನಮ್ಮ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮಹೇಶ್ ಹುಂಚದ ಕಟ್ಟೆ ಮತ್ತು ಅವರ ಮಗ ಮನೀತ್ ಅವರು ಧ್ವನಿವರ್ಧಕ ಮತ್ತು ತಾಂತ್ರಿಕ ವಿಭಾಗವನ್ನು ನಿಭಾಯಿಸಿದ ರು. ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗದ ಮೇಲ್ವಿಚಾರಕರಾದ ಮೀನಾ ಮಹೇಶ್, ಸುಭಾಷ್ ಪುತ್ತುರಾಯ, ಲೋಕೇಶ್ ನಿಂಗೇಗೌಡ ಅವರು ಕಾರ್ಯಕ್ರಮ ಸರಾಗವಾಗಿ ನೆರವೇರು ವಲ್ಲಿ ಸಹಕರಿಸಿದರು. ರವಿಕುಮಾರ್ ಗುಡಿಯನಕೊಪ್ಪ ಅವರು ಅತ್ಯದ್ಭುತವಾಗಿ ಎಲ್ಲ ಕಾರ್ಯಕ್ರಮದ ಛಾಯಾಗ್ರಹಣ ಮಾಡುತ್ತಾ, ಅತ್ಯಂತ ಸುಂದರವಾಗಿ ಚಿತ್ರಗಳನ್ನು ಸೆರೆ ಹಿಡಿಯುತ್ತಾ ಪ್ರತಿಯೊಬ್ಬರ ಪ್ರಶಂಸೆಗೆ ಪಾತ್ರರಾದರು. ಹಾಸ್ಯ ಹೊನಲು ಕಸ್ತೂರಿ ಪ್ರತಿಭೆಗಳ ಕಾರ್ಯಕ್ರಮದ ಅನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಡುಂಡಿರಾಜ್ ಅವರ ಹಾಸ್ಯ ಚಟಾಕಿ ಕಾರ್ಯಕ್ರಮ ಪ್ರಾರಂಭವಾಯಿತು. ಚುಟುಕು ಚಕ್ರವರ್ತಿ, ಹನಿಗವನಗಳ ರಾಜ ಎಂದೇ ಪ್ರಸಿದ್ಧರಾಗಿರುವ ಎಚ್.ಡುಂಡಿರಾಜ್ ಅವರ ಕಾರ್ಯಕ್ರಮ ವೀಕ್ಷಿಸಲು ಪ್ರತಿಯೊಬ್ಬರು ಉತ್ಸುಕರಾಗಿದ್ದರು. ಅವರ ಮಾತುಗಳನ್ನು ಕೇಳುತ್ತಾ ಪ್ರತಿಯೊಬ್ಬರು ನಗೆಗಡಲಿನಲ್ಲಿ ತೇಲಿದರು. ನಂದಾ ಲೋಕೇಶ್, ಬಲರಾಮ್ ಮತ್ತು ಶ್ವೇತಾ ರವಿಕುಮಾರ್ ಅವರ ನೇತೃತ್ವದ ಅಡುಗೆ ವಿಭಾಗದ ಸದಸ್ಯರು ಬಿಡುವಿಲ್ಲದೆ ಕೆಲಸ ಮಾಡುತ್ತಾ ವಿಶೇಷ ಭೋಜನವನ್ನು ಅಚ್ಚುಕಟ್ಟಾಗಿ ಜೋಡಿಸಿ ಊಟಕ್ಕಾಗಿ ನೆರೆದಿದ್ದ ಸದಸ್ಯರನ್ನು ಅತ್ಯಂತ ಪ್ರೀತಿಯಿಂದ ಆಹ್ವಾನಿಸಿದರು. ರಚನಾ ಶ್ರೀಪತಿ ಮತ್ತು ಇತರ ಕಾರ್ಯಕಾರಿ ಸಮಿತಿಯ ಸದಸ್ಯರು ಊಟೋ ಪಚಾರಗಳನ್ನು ನೋಡಿಕೊಂಡರು. ದೀಪಾವಳಿ ವಿಶೇಷ ಔತಣದ ಸಮಯದಲ್ಲಿ ವಾಣಿಯವರು ಕನ್ನಡ ರಸಪ್ರಶ್ನೆ ಹಾಗೂ ಇತರ ಕಾರ್ಯಕ್ರಮ ನಡೆಸಿಕೊಡುತ್ತಾ ಊಟದ ಜತೆಗೆ ಮನೋರಂಜನೆಯ ಸವಿಯನ್ನೂ ಉಣಬಡಿಸಿದರು. ಸಂಘದ ಅಧ್ಯಕ್ಷೆ ಮಮತಾ ಮತ್ತು ಉಪಾಧ್ಯಕ್ಷರಾದ ಲೋಕೇಶ್ ವೆಂಕಟೇಶಯ್ಯ ಅವರು ಆಗಮಿಸಿದ ಪ್ರತೀ ಸದಸ್ಯರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಾ, ಎಲ್ಲರ ಊಟೋಪಚಾರದ ಬಗ್ಗೆ ಮೇಲ್ವಿಚಾರಣೆ ಮಾಡುತ್ತಾ ಎಲ್ಲೂ ಲೋಪದೋಷಗಳು ಇಲ್ಲದಂತೆ ನೋಡಿಕೊಳ್ಳುತ್ತಿದ್ದರು. ಹಾಡಿನ ಮೋಡಿ ವಿಶೇಷ ಔತಣದ ಬಳಿಕ ಸುಪ್ರಿಯ ಜೋಶಿಯವರ ವಿಶೇಷ ಹಾಡಿನ ಕಾರ್ಯಕ್ರಮಕ್ಕೆ ಎಲ್ಲರೂ ಸಜ್ಜಾದರು. ಝೀ ಸರಿಗಮಪ ಮೂಲಕ ಪ್ರಸಿದ್ಧಿ ಪಡೆದ ಇವರ ಸುಶ್ರಾವ್ಯ ಹಾಡುಗಳನ್ನು ಕೇಳುತ್ತಾ ಎಲ್ಲರು ಮೈ ಮರೆತರು. ಪ್ರೇಕ್ಷಕ ಬಾಂಧವರಲ್ಲಿ ಕೆಲವರು ಕುಳಿತಲ್ಲೇ ಮೈ ಮರೆತರೆ, ಇನ್ನೂ ಕೆಲವರು ವೇದಿಕೆಯ ಮುಂಭಾಗಕ್ಕೆ ಬಂದು ಅವರ ಹಾಡಿಗೆ ಹೆಜ್ಜೆ ಹಾಕಿದರು. ಸುಪ್ರಿಯಾ ಅವರ ಜತೆಗೆ ಯುಗಳ ಗೀತೆಗಳನ್ನು ಹಾಡಲು ಡಾ| ನವೀನ್ ಉಲಿ, ಮಹೇಶ್ ಹುಂಚದಕಟ್ಟೆ ಮತ್ತು ಕೃಷ್ಣ ಅವರು ಧ್ವನಿಗೂಡಿಸಿದರು. ಕನ್ನಡ ಶಾಲೆಯ ಮಕ್ಕಳನ್ನು ಪ್ರೋತ್ಸಾಹಿಸಲು ಸಂಘದ ಅಧ್ಯಕ್ಷೆ ಮಮತಾ ಅವರು ಕನ್ನಡ ಶಾಲೆಯ ಪ್ರಾಂಶುಪಾಲರಾದ ಪುಷ್ಪಲತಾ ವೆಂಕಟರಾಮನ್ ಮತ್ತು ನಿರ್ವಾಹಕರಾದ ಜಯಪ್ರಕಾಶ್ ಅವರ ಜತೆಗೂಡಿ, ವೇದಿಕೆಗೆ ಎಲ್ಲ ಕನ್ನಡ ಶಾಲೆಯ ಮಕ್ಕಳು ಮತ್ತು ಶಿಕ್ಷಕರನ್ನು ಆಹ್ವಾನಿಸಿ ಗೌರವ ಸೂಚಿಸಿದರು. ಪ್ರಶಸ್ತಿ, ಸಮ್ಮಾನ
ಸ್ವರಬಲ್ಲ -1 ಮತ್ತು ಸ್ವರಬಲ್ಲ-2 ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಕನ್ನಡ ಅಕಾಡೆಮಿ ವತಿಯಿಂದ ಪ್ರಶಸ್ತಿ ಪತ್ರಗಳನ್ನು ಎಚ್.ಡುಂಡಿರಾಜ್ ಅವರು ವಿತರಿಸಿದರು. ಇದು ಎಲ್ಲ ಕನ್ನಡ ಶಾಲೆಯ ಮಕ್ಕಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಹೆಮ್ಮೆಯ ವಿಚಾರವಾಗಿತ್ತು. ಕಲೆ, ಸಾಮಾಜಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅತ್ಯುತ್ತಮ ಸಮಾಜ/ಸಮುದಾಯ ಸೇವೆಯನ್ನು ಪ್ರದರ್ಶಿಸಿದ ಯುವಕ-ಯುವತಿಯರಿಗೆ ಯೂತ್ ಅವಾರ್ಡ್ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಮಮತಾ ಅವರ ನೇತೃತ್ವದಲ್ಲಿ ಸುಪ್ರಿಯಾ ಜೋಶಿ ಅವರು ವಿಜೇತರಾದ ಯುವಕ-ಯುವತಿಯರಿಗೆ ವಿತರಿಸಿದರು. ನಮ್ಮ ಕಲೆ, ಸಂಸ್ಕೃತಿ, ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕಸ್ತೂರಿ ಕನ್ನಡ ಸಂಘ ಗೆಲುವಿನ ಹೆಜ್ಜೆಯನ್ನು ಇಡುತ್ತಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ವರದಿ: ರಶ್ಮಿ ಶಾಸ್ತ್ರಿ, ಕ್ಲೀವ್ ಲ್ಯಾಂಡ್