ಲಕ್ನೋ: ಮಹಿಳೆಯೊಬ್ಬರನ್ನು ಇಸ್ಲಾಂಗೆ ಮತಾಂತರಗೊಂಡರೆ ದುಷ್ಟ ಶಕ್ತಿಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಿ ಮಹಿಳೆಯನ್ನು ಹೆದರಿಸಿದ ಆರೋಪದ ಮೇಲೆ ಶುಕ್ರವಾರ ಉತ್ತರ ಪ್ರದೇಶದಲ್ಲಿ ಧರ್ಮಗುರುವನ್ನು (ಮೌಲ್ವಿ) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಹಿಳೆಯ ಮಗ ಅಕ್ಷಯ್ ಶ್ರೀವಾಸ್ತವ (35) ನೀಡಿದ ದೂರಿನ ಮೇರೆಗೆ ಮೌಲ್ವಿ ಸರ್ಫರಾಜ್ ಅವರನ್ನು ಬಂಧಿಸಲಾಗಿದೆ.
2017 ರಿಂದ ನನ್ನ ತಾಯಿ ಮೀನು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲ ಜನರು ಮೌಲ್ವಿಯನ್ನು ಭೇಟಿಯಾದರೆ ಈ ಸಮಸ್ಯೆಗ ಮುಕ್ತಿ ಸಿಗುತ್ತದೆ ಎಂದು ಸಲಹೆ ನೀಡಿದ್ದಾರೆ. ಈ ಕಾರಣದಿಂದ ನಾನು ಮೌಲ್ವಿಯನ್ನು ಭೇಟಿಯಾಗಿದ್ದೇನೆ. ಇದಾದ ಬಳಿಕ ಮೌಲ್ವಿ ಸಲಹೆ ನೀಡಿದ್ದಾರೆಂದು ನನ್ನ ತಾಯಿ ಮನೆಯಲ್ಲಿದ್ದ ಹಿಂದೂ ದೇವರ ಫೋಟೋ ಹಾಗೂ ಮೂರ್ತಿಯನ್ನು ಹೊರ ಹಾಕಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಲು ತನ್ನ ಮಕ್ಕಳು ಮತ್ತು ಇತರ ಕುಟುಂಬ ಸದಸ್ಯರಿಗೆ ಹೇಳುವಂತೆ ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೋರ್ತಿ ಗ್ರಾಮ ತ್ರಿವಿಭಾಗದಿಂದ ಮೌಲ್ವಿಯನ್ನು ಬಂಧಿಸಲಾಗಿದೆ ಎಂದು ಎಸಿಪಿ ನಂದಗ್ರಾಮ್ ರವಿಕುಮಾರ್ ಸಿಂಗ್ ತಿಳಿಸಿದ್ದಾರೆ.
ಕಳೆದ 8 ವರ್ಷಗಳಿಂದ ನಾನು ಈ ಪ್ರದೇಶದಲ್ಲಿ ಭೂತೋಚ್ಚಾಟನೆ(ಭೂತವನ್ನು ಓಡಿಸುವುದು) ಮಾಡುತ್ತಿದ್ದೇನೆ. ಅನಾರೋಗ್ಯದಲ್ಲಿರುವವರಿಗೆ ಭೂತದ ಭಯವನ್ನು ಹುಟ್ಟಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಪ್ರೇರೇಪಿಸುತ್ತಿದ್ದೆ ಎಂದು ವಿಚಾರಣೆಯಲ್ಲಿ ಮೌಲ್ವಿ ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಮತ್ತು ಡ್ರಗ್ಸ್ ಮತ್ತು ಮಾಂತ್ರಿಕ ಪರಿಹಾರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಸರ್ಫರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.