Advertisement

ಮೀನಿನಲ್ಲಿ ಲಾಭ ಗಳಿಸಬೇಕಾದರೆ ಸ್ವಚ್ಛತೆ ಅಗತ್ಯ

10:55 PM Jun 21, 2019 | Team Udayavani |

ಮಲ್ಪೆ: ಮಲ್ಪೆ ಕನ್ನಿ ಮೀನುಗಾರ ಸಂಘದ ಆಶ್ರಯದಲ್ಲಿ ನೆಟ್‌ಫಿಶ್‌-ಎಂಪಿಡಾ ಸಂಸ್ಥೆಯ ಸಹಯೋಗದಲ್ಲಿ ಮೀನಿನ ಸಂರಕ್ಷಣೆ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಜೂ. 20ರಂದು ಕನ್ನಿ ಮೀನುಗಾರ ಸಂಘದ ಭವನದಲ್ಲಿ ಜರಗಿತು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ನೆಟ್‌ಫಿಶ್‌ನ ರಾಜ್ಯ ಸಮನ್ವಯ ಅಧಿಕಾರಿ ನಾರಾಯಣ ಕೆ. ಅವರು ಮಾಹಿತಿ ನೀಡಿ ಮೀನುಗಾರರು ಹಿಡಿದ ಮೀನುಗಳಲ್ಲಿ ಬಹುತೇಕ ಸ್ವಚ್ಛ ತೆಯ ಕೊರತೆಯಿಂದಾಗಿ ನಷ್ಟವಾಗುತ್ತಿದೆ. ಅದನ್ನು ತಡೆಯ ಬೇಕಾದರೆ ಮೀನುಗಾರಿಕೆಯಲ್ಲಿ ಸ್ವತ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಬೋಟಿನಿಂದ ಇಳಿಸಿದ ಮೀನನ್ನು ಕೊಳಕು ನೀರಿನ ಸ್ಥಳದಲ್ಲಿ ಹಾಕದೇ ಸ್ವತ್ಛವಾದ ಜಾಗದಲ್ಲಿ ತಂದು ಹರಾಜು ಮಾಡಬೇಕು. ಶುದ್ಧವಾದ ನೀರಿನಿಂದ ತೊಳೆಯಬೇಕು ಇದರಿಂದ ಮೀನಿನ ತಾಜಾತನವೂ ಹೆಚ್ಚು ಕಾಲ ಉಳಿಯಲು ಸಾಧ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ ಅವರು ನೆಟ್‌ಫಿಶ್‌ ಸಂಸ್ಥೆಯವರು ಮೀನುಗಾರಿಕೆಯಲ್ಲಿ ಸ್ವಚ್ಚತಾ ಜಾಗೃತಿಯನ್ನು ಮೂಡಿಸಿದ್ದರಿಂದ ಮೀನುಗಾರರಲ್ಲಿ ಸಾಕಷ್ಟು ಜಾಗೃತಿ ಮೂಡಲು ಸಹಕಾರಿಯಾಗಿವೆ. ಇಂತಹ ಕಾರ್ಯಕ್ರಮಗಳನ್ನು ಮಲ್ಪೆ ಬಂದರಿನಲ್ಲಿ ಇತರ ಸಂಘಟನೆಗಳೂ ಆಯೋಜಿಸಿ ಮೀನಿನ ಸಂರಕ್ಷಣೆ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಸಂಘದ ಗೌರವಾಧ್ಯಕ್ಷ ದಾಸ ಕುಂದರ್‌, ಉಪಾಧ್ಯಕ್ಷರಾದ ಗುರುದಾಸ್‌ ಕುಂದರ್‌, ಜಯ ಕರ್ಕೇರ, ಸುರೇಂದ್ರ ಕುಂದರ್‌, ಕೋಶಾಧಿಕಾರಿ ಉದಯ ಬಂಗೇರ, ಜತೆಕಾರ್ಯದರ್ಶಿ ರವಿ ಕಾಂಚನ್‌ ಮೊದಲಾದವರು ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸುಧಾಕರ ಖಾರ್ವಿ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next