Advertisement
ರಾಧಾಕೃಷ್ಣ ಭಟ್ ಮಾತನಾಡಿ, ಸಾರ್ವಜನಿಕರು ಕೇವಲ ಸ್ವಚ್ಛತೆ ಮಾಡುವುದನ್ನು ನಿಂತು ನೋಡಿದರೆ ಸಾಲದು. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛ ಪುತ್ತೂರಿನ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಇದರಿಂದ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಪರಿಕಲ್ಪನೆಗೆ ನಾವು ಕೈಜೋಡಿಸಲು ಸಾಧ್ಯ ಎಂದರು.
ಬಸ್ ನಿಲ್ದಾಣ ಪರಿಸರದ ಹೊಟೇಲ್, ಅಂಗಡಿ, ತಂಪು ಪಾನೀಯ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದ ಅಭಿಯಾನ ತಂಡವು ತಮ್ಮ ಉದ್ಯಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕಸವನ್ನು ಪರಿಸರದಲ್ಲಿ ಎಸೆಯದಂತೆ ಜಾಗೃತಿ ಮೂಡಿಸಬೇಕು ಎಂದು ಕರಪತ್ರಗಳನ್ನು ವಿತರಿಸಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸಿತು. ಅಭಿಯಾನದಲ್ಲಿ ಟೀಮ್ ಸ್ವಚ್ಛ ಪುತ್ತೂರು ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ಜಿ. ಕೃಷ್ಣ, ಸಂದೀಪ್ ಲೋಬೋ, ಕೃಷ್ಣ ಮೋಹನ್, ಡಾ| ಸದಾಶಿವ ಭಟ್, ಯುವ ಕಾರ್ಯಕರ್ತೆ ವಿಜೇತಾ ಬಲ್ಲಾಳ್, ಸುರೇಶ್ ಕಲ್ಲಾರೆ, ಜಯಪ್ರಕಾಶ್ ಆಚಾರ್ಯ, ಶಂಕರ್ ಮಲ್ಯ ಸೇರಿದಂತೆ ಮೊದಲಾದವರು ಪಾಲ್ಗೊಂಡರು.