ಮೈಸೂರು: ದೇಶದಲ್ಲಿ ಆರಂಭವಾಗಿರುವ ವಿಜಯ ಅಭಿಯಾನ ರಾಜ್ಯದಲ್ಲೂ ಮುಂದು ವರಿಯಲಿದೆ. ಆ ಮೂಲಕ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಾಗು ವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ತಿಳಿಸಿದರು.
ನಗರದಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತ ನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಮೈಸೂರಿನಲ್ಲಿ ನಡೆಯು ತ್ತಿರುವ ಬಿಜೆಪಿ ಕಾರ್ಯಕಾರಿಣಿ ದೇಶ ಮತ್ತು ರಾಜ್ಯದ ಜನರ ಗಮನ ಸೆಳೆದಿದೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಸರ್ಕಾರ ಜನ ಮಾನಸದಿಂದ ದೂರಾ ಗಿದೆ. ಇದು ರಾಜ್ಯದಲ್ಲಿ ಯಡಿಯೂರಪ್ಪನೇತೃತ್ವದ ಬಿಜೆಪಿ ಸರ್ಕಾರ ಬರುವ ವಾತಾವರಣವನ್ನು ಸೂಚಿಸು ತ್ತದೆ. ದೇಶದಲ್ಲಿ ಆರಂಭವಾಗಿ ರುವ ವಿಜಯ ಅಭಿಯಾನ ರಾಜ್ಯದಲ್ಲೂ ಮುಂದು ವರಿಯಲಿದೆ ಎಂದರು.
ತಿರುಗೇಟು: ಮೈಸೂರು ಮಹಾ ನಗರ ಪಾಲಿಕೆಗೆ ಸ್ವಚ್ಛನಗರಿ ಪ್ರಶಸ್ತಿಯ ಪ್ರಥಮ ಸ್ಥಾನ ಕೈತಪ್ಪಲು ಕೇಂದ್ರ ಸರ್ಕಾರ ಕಾರಣ ಎಂದು ಮೇಯರ್ ಆರೋಪ ಮಾಡಿರುವುದು ಸರಿಯಲ್ಲ, ನರೇಂದ್ರ ಮೋದಿ ಅವರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಕೈಗೊಂಡ ನಂತರ ಸತತ ಎರಡು ಬಾರಿ ಮೈಸೂರು ಮಹಾ ನಗರ ಪಾಲಿಕೆ ಸ್ವಚ್ಛನಗರಿ ಪ್ರಶಸ್ತಿಯ ಪ್ರಥಮ ಸ್ಥಾನ ಪಡೆದುಕೊಂಡಿತ್ತು. ಆಗ ಕೂಡ ಕೇಂದ್ರದಲ್ಲಿ ಮೋದಿ ಅವರ ಸರ್ಕಾರವಿತ್ತು ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು. ಸ್ವಚ್ಛ ಭಾರತದ ವಿಷಯದಲ್ಲೂ ರಾಜಕಾರಣ ಮಾಡ ಬಾರದು ಎಂದು ತಿರುಗೇಟು ನೀಡಿದರು.
ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಯಾಗಿದ್ದ ದಿಗ್ವಿಜಯಸಿಂಗ್ ಅವರು ತೆಲಂಗಾಣ ಸರ್ಕಾರದ ಕುರಿತು ಮಾಡಿದ್ದ ವಿವಾದಿತ ಟ್ವಿಟ್ ಬಗ್ಗೆ ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ಈವರೆಗೆ ಬಾಯಿ ಬಿಟ್ಟಿಲ್ಲ. ಇದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷದ ನಾಯಕರು ಪಾಕಿಸ್ಥಾನದ ಪರ ಇದ್ದಾರಾ ಎಂಬ ಸಂದೇಹಗಳು ಮೂಡುತ್ತವೆ ಎಂದರು.
ರಾಜ್ಯದಲ್ಲಿ ಸುಶಾಸನ ತರುವುದು ನಮ್ಮ ಮಂತ್ರವಾಗಬೇಕು. ಇದಕ್ಕಾಗಿ ಪಕ್ಷದ ಸಾಮರ್ಥ್ಯ, ತತ್ವ-ಸಿದ್ಧಾಂತ, ದೇಶದ ಭವಿಷ್ಯದಲ್ಲಿದೆ. ಹೀಗಾಗಿ 2018ರ ಚುನಾವಣೆ ಯಲ್ಲಿ 150 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಲ್ಲದೆ, 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸ ಬೇಕಿದೆ ಎಂದರು.