Advertisement
ಹೌದು, ಸcಚ್ಛ ನಗರವನ್ನು ನಿರ್ಮಸಲು ಮುಂದಾಗಿರುವ ಬಿಬಿಎಂಪಿ, ಫೆ. 24 ರಿಂದ ಮಾ. 4ರವರೆಗೆ ನಗರದಲ್ಲಿ “ಕ್ಲೀನ್ ಬೆಂಗಳೂರು’ ಅಭಿಯಾನ ನಡೆಸಲು ಮುಂದಾಗಿದ್ದು, ಅಭಿಯಾನದಲ್ಲಿ ಭಾಗವಹಿಸಲು ನಾಗರಿಕರಿಗೆ ಮುಕ್ತ ಆಹ್ವಾನ ನೀಡಿದೆ.
Related Articles
Advertisement
ಅಭಿಯಾನ ಪ್ರಮುಖ ಉದ್ದೇಶಗಳು – ಹಲವಾರು ದಿನಗಳಿಂದ ತೆರವಾಗದೆ ಉಳಿದಿರುವ ಕಟ್ಟಡ ಅವಶೇಷ ಹಾಗೂ ಘನತ್ಯಾಜ್ಯ ವಿಲೇವಾರಿ ಮಾಡುವುದು
– ನಗರದ ಪ್ರಮುಖ ಜಂಕ್ಷನ್‌ಗಳನ್ನು ಸುಂದರಗೊಳಿಸುವುದು
– ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಸುಂದರೀಕರಣ
– ಬ್ಯಾನರ್‌ಗಳು, ಬಂಟಿಂಗ್ಸ್ ಹಾಗೂ ಭಿತ್ತಿಪತ್ರಗಳ ತೆರವು
– ಕೆರೆಯ ಆವರಣ, ಉದ್ಯಾನ, ಆಟದ ಮೈದಾನ, ಮಳೆನೀರು ಕಾಲುವೆ ಸೇರಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸುವುದು ಸ್ವಚ್ಛತಾ ಕಾರ್ಯದ ಹಂಚಿಕೆ ಹೇಗೆ? ರಸ್ತೆ ಮೂಲಸೌಕರ್ಯ
– ನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿನ ತ್ಯಾಜ್ಯ ತೆರವುಗೊಳಿಸಿ, ಸ್ವಚ್ಛವಾಗಿಡುವುದು
– ನಗರದ ಎಲ್ಲ ಜಂಕ್ಷನ್‌ಗಳನ್ನು ಸ್ವಚ್ಛಗೊಳಿಸಿ, ಸುಂದರೀಕರಣಗೊಳಿಸುವುದು
– ಕಾಮಗಾರಿ ಪ್ರಗತಿಯಲ್ಲಿರುವ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಧೂಳು ನಿಯಂತ್ರಣಕ್ಕೆ ಕ್ರಮ ಕೇಂದ್ರ ಯೋಜನೆ ವಿಭಾಗ
– ಹೊರ ವರ್ತುಲ ರಸ್ತೆಗಳ ಸ್ವಚ್ಛಗೊಳಿಸುವುದು
– ಟೆಂಡರ್ ಶ್ಯೂರ್ ರಸ್ತೆಗಳ ನಿರ್ವಹಣೆ
– ಮೇಲ್ಸೇತುವೆ, ಕೆಳಸೇತುವೆ ಹಾಗೂ ಎಲಿವೇಟೆಡ್ ಕಾರಿಡಾರ್ ಯೋಜನೆಗಳ ತ್ಯಾಜ್ಯ ವಿಲೇವಾರಿಗೆ ಕ್ರಮ ವಲಯದ ಎಂಜಿನಿಯರಿಂಗ್ ವಿಭಾಗ
– ಉದ್ಯಾನ, ಆಟದ ಮೈದಾನ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ತ್ಯಾಜ್ಯ ತೆರವು
– ವಲಯದಲ್ಲಿನ ಪೋಸ್ಟರ್, ಬಂಟಿಂಗ್ಸ್ ಹಾಗೂ ಬ್ಯಾನರ್‌ಗಳ ತೆರವು
– ಪ್ರಮುಖ ಜಂಕ್ಷನ್‌ಗಳಲ್ಲಿನ ಮರಗಳ ಟ್ರಿಮ್ಮಿಂಗ್
– ವಲಯದ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ದುರಸ್ತಿಯಾದ ಬಲ್ಬ್ಗಳ ಬದಲಿಸುವುದು
– ಪಾದಚಾರಿ ಕೆಳಸೇತುವೆಗಳನ್ನು ಸ್ವಚ್ಛ ಹಾಗೂ ಸುಂದರಗೊಳಿಸುವುದು ಬೃಹತ್ ಮಳೆನೀರು ಕಾಲುವೆ
– ಮಳೆನೀರು ಕಾಲುವೆಗಳ ಸುತ್ತಮುತ್ತಲಿನ ಭಾಗಗಳಲ್ಲಿ ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳ ತೆರವು ಕೆರೆ ವಿಭಾಗ
– ಕೆರೆ ಹಾಗೂ ಟ್ಯಾಂಕ್‌ಗಳ ಆವರಣ ಹಾಗೂ ಅಂಗಳದಲ್ಲಿ ಸುರಿಯಲಾಗಿರುವ ಅನುಪಯುಕ್ತ ವಸ್ತುಗಳ ವಿಲೇವಾರಿ ಘನತ್ಯಾಜ್ಯ ನಿರ್ವಹಣಾ ವಿಭಾಗ
– ನಗರದ ಪ್ರಮುಖ ಮಾರುಕಟ್ಟೆಗಳು, ತ್ಯಾಜ್ಯ ಉತ್ಪಾದಕರು ಹಾಗೂ ತ್ಯಾಜ್ಯ ವಿಲೇವಾರಿ ಜಾಗಗಳ ಸ್ವಚ್ಛವಾಗಿರಿಸುವುದು ಅಭಿಯಾನದಲ್ಲಿ ಭಾಗಿಯಾಗಲು ಯಾರನ್ನು ಸಂಪರ್ಕಿಸಬೇಕು?: ಕ್ಲೀನ್ ಬೆಂಗಳೂರು ಅಭಿಯಾನದಲ್ಲಿ ಭಾಗವಹಿಸಲು ನಾಗರಿಕ ಸಂಸ್ಥೆಗಳು, ಎನ್‌ಜಿಒಗಳು, ಸ್ವಯಂ ಸೇವಕರು ಹಾಗೂ ನಾಗರಿಕರು, ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಎಸ್.ಸೋಮಶೇಖರ್ (9480684990) ಅಥವಾ ಪೂರ್ವ ವಲಯದ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಸಾದ್ (9480684531) ಸಂಪರ್ಕಿಸಬಹುದಾಗಿದೆ. ಅಗತ್ಯ ಪರಿಕರಗಳಿಗಾಗಿ ಅರ್ಜಿ ಭರ್ತಿ ಮಾಡಿ cleanblrcmp@gmail.com ಜಾಲತಾಣಕ್ಕೆ ಕಳುಹಿಸಬಹುದು. ಪಾಲಿಕೆಯಿಂದ ದೊರೆಯುವ ಸಹಕಾರವೇನು?
– ಕಾರ್ಮಿಕರು ಹಾಗೂ ಸುರಕ್ಷತಾ ಪರಿಕರಗಳು
– ತ್ಯಾಜ್ಯ ಹಾಗೂ ಕಟ್ಟಡ ಅವಶೇಷ ಸಾಗಿಸಲು ವಾಹನಗಳು
– ಜೆಸಿಬಿ ಹಾಗೂ ರಸ್ತೆ ಸ್ವಚ್ಛತಾ ಯಂತ್ರಗಳು
– ಸಿವಿಲ್ ಕಾಮಗಾರಿಗೆ ಅಗತ್ಯ ಕರ್ಬ್ ಸ್ಟೋನ್, ಪೇವರ್ ಬ್ಲಾಕ್ಸ್, ಸಾಲಿಡ್ ಬ್ಲಾಕ್ಸ್, ಸಿಮೆಂಟ್, ಮರಳು ಹಾಗೂ ಪೆಯಿಂಟ್
– ನೀರಿನ ಟ್ಯಾಂಕರ್ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನಗರವನ್ನು ಸ್ವಚ್ಛ ಹಾಗೂ ಸುಂದರಗೊಳಿಸುವ ಉದ್ದೇಶದಿಂದ ಫೆ.24 ರಿಂದ ಒಂದು ವಾರ ಕ್ಲೀನ್ ಬೆಂಗಳೂರು ಅಭಿಯಾನ ನಡೆಸಲಾಗುತ್ತಿದೆ. ಅಭಿಯಾನದಲ್ಲಿ ಭಾಗವಹಿಸಲು ನಾಗರಿಕ ಸೇವಾ ಸಂಸ್ಥೆಗಳು, ಸ್ವಯಂ ಸೇವಕರು, ಕ್ಷೇಮಾಭಿವೃದ್ಧಿ ಸಂಘಗಳು, ಎನ್‌ಜಿಒಗಳಿಗೆ ಮುಕ್ತ ಆಹ್ವಾನವಿದೆ. ಜತೆಗೆ ಅಗತ್ಯವಾದ ಉಪಕರಣಗಳು ಹಾಗೂ ಯಂತ್ರಗಳನ್ನು ಸಹ ಪಾಲಿಕೆಯಿಂದ ನೀಡಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ