Advertisement

ಯುವ ಕಾಂಗ್ರೆಸ್‌ಗೆ ಕ್ಲಾಸ್‌, ಮಹಿಳೆಯರಿಗೆ ಮಾರ್ಕ್ಸ್

07:40 AM Dec 06, 2017 | Team Udayavani |

ಬೆಂಗಳೂರು: ಚುನಾವಣೆ ಗುಂಗಿನಲ್ಲಿರುವ ಆಡಳಿತ ಪಕ್ಷವನ್ನು ಚುರುಕುಗೊಳಿಸಲು ವೇಣುಗೋಪಾಲ್‌ ಮಂಗಳವಾರ ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳಿಗೆ ಪಕ್ಷ ಸಂಘಟನೆಯ ಪಾಠ ಮಾಡಿದ್ದಾರೆ. ಇಡೀ ದಿನ ಸರಣಿ ಸಭೆ ನಡೆಸಿದ ವೇಣುಗೋಪಾಲ್‌, ಪ್ರಮುಖವಾಗಿ ಯುವ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳಾ ಕಾಂಗ್ರೆಸ್‌ನ ಅರಿಶಿನ ಕುಂಕುಮ, ಇಂದಿರಾ ದೀಪ ನಮನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಯುವ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳನ್ನು ಆರಂಭದಲ್ಲಿಯೇ ತರಾಟೆಗೆ ತೆಗೆದುಕೊಂಡ ವೇಣುಗೋಪಾಲ್‌, ಹೊಸ ಘಟಕ ರಚನೆಯಾದ ಮೇಲೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಎಷ್ಟು ಹೋರಾಟಗಳನ್ನು ನಡೆಸಿದ್ದೀರಿ. ವಿಸಿಟಿಂಗ್‌ ಕಾಡ್‌ಗಾಗಿ ಪಕ್ಷದ ಪದಾಧಿಕಾರಿಗಳಾದರೆ ನಡೆಯುವು ದಿಲ್ಲ. ನಾವೆಲ್ಲರೂ ಯುವ ಕಾಂಗ್ರೆಸ್‌ ಘಟಕದಿಂದಲೇ ಹೋರಾಟ ಮಾಡಿ ಮೇಲೆ ಬಂದವರು. ನೀವು ಮುಂದೆ ನಾಯಕರಾಗಿ ಬೆಳೆಯಬೇಕೆಂದರೆ, ಯುವ ಕಾಂಗ್ರೆಸ್‌ ಘಟಕದಿಂದ ಜನಪರ ಹೋರಾಟ ಮಾಡಬೇಕು ಎಂದು ಪಾಠ ಮಾಡಿದರು.

ಈ ಸಂದರ್ಭದಲ್ಲಿ “ನಮ್ಮ ಹೋರಾಟಕ್ಕೆ ಕೆಪಿಸಿಸಿ  ಸಹಕರಿಸುತ್ತಿಲ್ಲ’ ಎಂದು ದೂರು ಹೇಳಲು ಮುಂದಾದಾಗ ಯುವ ಘಟಕದ ರಾಜ್ಯಾಧ್ಯಕ್ಷರಿಗೆ ಗರಂ ಆಗಿಯೇ ಎಚ್ಚರಿಕೆ ನೀಡಿರುವ ವೇಣುಗೋಪಾಲ್‌, “ದೂರು ನೀಡುವುದು  ನಿಮ್ಮ ಕೆಲಸವಲ್ಲ. ರಾಜ್ಯದಲ್ಲಿ ಯುವ ಕಾಂಗ್ರೆಸ್‌ ಸತ್ತು ಹೋಗಿದೆ ಎಂಬ ಮಾತು ಕೇಳಿ ಬರುತ್ತಿದೆ’ ಎಂದರು. 

ಡಿ.28ರಂದು ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆಯಂದು ಯುವ ಕಾಂಗ್ರೆಸ್‌ನಿಂದ ಪ್ರತಿ ಜಿಲ್ಲೆಯಲ್ಲಿಯೂ ಪಾದಯಾತ್ರೆ
ಕೈಗೊಳ್ಳುವಂತೆ ಸೂಚನೆ ನೀಡಿದರು. ಎನ್‌ಎಸ್‌ಯುಐ ಘಟಕಕ್ಕೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮಿತಿ ರಚನೆ ಮಾಡುವಂತೆ ಸೂಚಿ ಸಿದ್ದು, ರಾಜ್ಯ ಸರ್ಕಾರ ವಿದ್ಯಾರ್ಥಿ ಸಮುದಾಯಕ್ಕೆ ನೀಡಿದ ಕೊಡುಗೆ, ಮೋದಿ ಸರ್ಕಾರ ವಿದ್ಯಾರ್ಥಿಗಳಿಗೆ ಏನೂ ಮಾಡದಿರುವ ಬಗ್ಗೆ ವಿಭಾಗವಾರು ಸೈಕಲ್‌ ಜಾಥಾ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದ್ದಾರೆ.

ರಾಯರಡ್ಡಿ ವಿರುದ್ಧ ದೂರು
ಇದೇ ಸಂದರ್ಭದಲ್ಲಿ ಎನ್‌ಎಸ್‌ಯುಐ ಪದಾಧಿಕಾರಿಗಳು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ವಿರುದ್ಧ ದೂರು ನೀಡಿದರು. ನಕಲಿ ಮಾರ್ಕ್ಸ್ ಕಾರ್ಡ್‌ ಹಾವಳಿ ತಡೆಯುವಲ್ಲಿ ಸಚಿವರು ವಿಫ‌ಲರಾಗಿದ್ದು, ಎನ್‌ಎಫ್ಸಿ ತಂತ್ರಜ್ಞಾನ ಬಳಸಿದ ಮಾರ್ಕ್ಸ್ ಕಾರ್ಡ್‌ ಬಳಕೆಗೆ ಅವಕಾಶ ನೀಡದೆ ಮಹಾರಾಷ್ಟ್ರದ ಕಂಪನಿಗೆ ನೀಡಿದ್ದಾರೆ. ಇದರಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಸಚಿವರೊಂದಿಗೆ ಮಾತುಕತೆ ನಡೆಸಿ ಎನ್‌ಎಸ್‌ಯುಐ ಸಮಸ್ಯೆ ಪರಿಹರಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ವೇಣುಗೋಪಾಲ್‌ ಜವಾಬ್ದಾರಿ ವಹಿಸಿದರು.

Advertisement

ಸಮೀಕ್ಷೆಗೆ ಸೂಚನೆ
ಕೆಪಿಸಿಸಿ ಮಹಿಳಾ ಘಟಕದಿಂದ ಸುಮಾರು 35 ಜನರಿಗೆ ಟಿಕೆಟ್‌ ನೀಡಬೇಕೆಂದು ಮಂಗಳವಾರ ನಡೆದ ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಟಿಕೆಟ್‌ ಪಡೆಯುವ ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಸಾಮರ್ಥ್ಯದ ಕುರಿತು ಪ್ರತ್ಯೇಕವಾಗಿ ಸಮೀಕ್ಷೆ ನಡೆಸುವಂತೆ ಮಹಿಳಾ ಘಟಕಕ್ಕೆ ವೇಣುಗೋಪಾಲ ಸೂಚನೆ ನೀಡಿದ್ದಾರೆ.

ಬಿಜೆಪಿ ಬಿ ಟೀಂ
ಎಸ್‌ಟಿಪಿಐ ಹಾಗೂ ಹೈದರಾಬಾದ್‌ ಮೂಲದ ಓವೈಸಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ಅವರು ರಾಜ್ಯದಲ್ಲಿ ಬೆಳೆಯದಂತೆ ಈಗಿನಿಂದಲೇ ಕಾರ್ಯತಂತ್ರ ರೂಪಿಸುವಂತೆ ವೇಣುಗೋಪಾಲ್‌ ಅಲ್ಪಸಂಖ್ಯಾತ ಘಟಕಕ್ಕೆ ಸೂಚಿಸಿದರು. ಅಲ್ಪಸಂಖ್ಯಾತ ಮತಗಳನ್ನು ಒಡೆಯಲು ಈ ಎರಡೂ ಪಕ್ಷಗಳಿಗೆ ಬಿಜೆಪಿಯ ಪರೋಕ್ಷ ಬೆಂಬಲ ಇದೆ. ಅವು ಬಿಜೆಪಿಯ ಬಿ ಟೀಂ ತರಹ ಕೆಲಸ ಮಾಡುತ್ತಿವೆ ಎಂದು ಸಲಹೆ ನೀಡಿದರು. 

ಟಿಕೆಟ್‌ ಆಕಾಂಕ್ಷಿಗಳ ಗ್ರಾಮ ವಾಸ್ತವ್ಯಕ್ಕೆ ಪ್ರೋತ್ಸಾಹ ದೊರೆತಿದೆ. ಮಹಿಳೆಯರಿಗೆ ಹೆಚ್ಚಿನ ಟಿಕೆಟ್‌ ನೀಡುವುದಾಗಿ ನಾಯಕರು ಭರವಸೆ ನೀಡಿದ್ದಾರೆ. 35 ಮಹಿಳೆಯರಿಗೆ ಟಿಕೆಟ್‌ ನೀಡುವಂತೆ ಕೇಳಿದ್ದೇವೆ. ಜಿಲ್ಲಾವಾರು ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ.
 ●ಲಕ್ಷ್ಮೀ ಹೆಬ್ಟಾಳ್ಕರ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ

ಪಕ್ಷದ ರಾಜ್ಯ ನಾಯಕರು ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ ಅವರು ಎಲ್ಲ ಘಟಕಗಳ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದು, ಚುನಾವಣೆಗೆ ಪಕ್ಷವನ್ನು ಹೇಗೆ ಸಿದ್ಧªಗೊಳಿಸಬೇಕೆಂದು ಚರ್ಚೆ ಮಾಡಲಾಗುತ್ತಿದೆ. ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಯಶಸ್ವಿಯಾಗಿದ್ದು, ಎಲ್ಲ ಮುಂಚೂಣಿ ಘಟಕಗಳಿಂದ ಸಮಾವೇಶ ನಡೆಸಲು ಸೂಚನೆ ನೀಡಲಾಗುತ್ತಿದೆ.
 ●ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next