Advertisement

ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿ ನೇಣಿಗೆ ಶರಣು; ಇದನ್ನು ಕಂಡ ಮಾಲೀಕ ಹೃದಯಾಘಾತದಿಂದ ಮೃತ್ಯು

04:41 PM Mar 16, 2023 | Team Udayavani |

ರಾಜಸ್ಥಾನ: ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ತಾನು ವಾಸವಾಗಿರುವ ಬಾಡಿಗೆ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದು ಇದನ್ನು ಕಂಡ ಮನೆ ಮಾಲೀಕ ಹೃದಯಾಘಾತಗೊಂಡು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯೊಂದು ರಾಜಸ್ಥಾನದ ಧೋಲ್ ಪುರ ಜಿಲ್ಲೆಯಲ್ಲಿ ನಡೆದಿದೆ.

Advertisement

ಘಟನೆ ರಾಜಸ್ಥಾನದ ಧೋಲ್‌ಪುರದ ಮಾಧವಾನಂದ ಕಾಲೋನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿ ಪುಷ್ಪೇಂದ್ರ ರಜಪೂತ್ (17) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.

ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಪುಷ್ಪೇಂದ್ರ ಧೋಲ್‌ಪುರದ ಮಾಧವಾನಂದ ಕಾಲೋನಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ, ಅಲ್ಲದೆ ಈತ ಪರೀಕ್ಷಾ ಒತ್ತಡದಿಂದ ಬಳಲುತ್ತಿದ್ದು ಊರಿಗೆ ಹೋಗಿದ್ದ ಈತ ಬುಧವಾರವಷ್ಟೇ ಊರಿನಿಂದ ಹಿಂದಿರುಗಿದ್ದ ಅದೇ ದಿನ ರಾತ್ರಿ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಇಂದು(ಗುರುವಾರ) ಬೆಳಿಗ್ಗೆ ಮನೆ ಮಾಲೀಕ ವಿದ್ಯಾರ್ಥಿಯನ್ನು ಎಬ್ಬಿಸಲು ಕೊಠಡಿ ಬಳಿಗೆ ಬಂದು ಕರೆದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದನ್ನು ಕಂಡು ಕಿಟಕಿಯ ಮೂಲಕ ನೋಡಿದಾಗ ವಿದ್ಯಾರ್ಥಿ ನೇಣುಬಿಗಿದ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ತನ್ನ ಮನೆಯ ಕೊಠಡಿಯಲ್ಲಿ ಶವ ನೇತಾಡುತ್ತಿದ್ದನ್ನು ಕಂಡ ಮನೆ ಮಾಲೀಕ ಬಹದ್ದೂರ್ ಸಿಂಗ್ (70) ಜೋರಾಗಿ ಕಿರುಚಿಕೊಂಡಿದ್ದಾರೆ, ಸುತ್ತಮುತ್ತಲ ಜನ ಬರುವಷ್ಟರಲ್ಲಿ ಬಹದ್ದೂರ್ ಸಿಂಗ್ ಕುಸಿದು ಬಿದ್ದಿದ್ದಾರೆ ಕೂಡಲೇ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಘಟನೆ ಕುರಿತು ನಿಹಾಲ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಂದು ಶಂಕಿತ ಗೂಢಚಾರಿಕೆ ಪಾರಿವಾಳ ಪತ್ತೆ; ತನಿಖೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next