Advertisement

10ನೇ ತರಗತಿ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದ ವಿದ್ಯಾರ್ಥಿ ಈಗ ಐಎಎಸ್‌ ಅಧಿಕಾರಿ

12:09 AM Jun 14, 2022 | Team Udayavani |

ಹೊಸದಿಲ್ಲಿ: ಐಎಎಸ್‌ ಅಧಿಕಾರಿಗಳೆಂದರೆ ಬುದ್ಧಿವಂತರೆಂಬ ಕಲ್ಪನೆ ಇರುತ್ತದೆ. ಆದರೆ ಈ ಐಎಎಸ್‌ ಅಧಿಕಾರಿಯು 10ನೇ ತರಗತಿ ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌!

Advertisement

2012ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ತುಷಾರ್‌ ಸುಮೇರ್‌, 10ನೇ ತರಗತಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ 35 ಮತ್ತು ಗಣಿತದಲ್ಲಿ ಕೇವಲ 36 ಅಂಕ ಪಡೆದಿದ್ದರು. “ನಿನ್ನಿಂದ ಏನೂ ಸಾಧ್ಯವಿಲ್ಲ’ ಎಂದು ಶಾಲೆ, ಕುಟುಂಬಸ್ಥರಿಂದ ಬೈಯಿಸಿಕೊಂಡಿದ್ದರು. ಈಗ ಅದೇ ಜಸ್ಟ್‌ ಪಾಸ್‌ ವಿದ್ಯಾರ್ಥಿ ಗುಜರಾತ್‌ನ ಬರೂಚ್‌ನ ಜಿಲ್ಲಾಧಿಕಾರಿಯಾಗಿದ್ದಾರೆ.

ತುಷಾರ್‌ ಅವರ 10ನೇ ತರಗತಿ ಅಂಕಪಟ್ಟಿಯನ್ನು, ಇನ್ನೋರ್ವ ಐಎಎಸ್‌ ಅಧಿಕಾರಿಯಾಗಿರುವ ಅವನೀಶ್‌ ಶರಣ್‌ ತಮ್ಮ ಟ್ವಿಟರ್‌ ಖಾತೆ  ಯಲ್ಲಿ ಹಂಚಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತೆಂದು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next