Advertisement

3 ವರ್ಷದಲ್ಲಿ 63 ಕೋಮು ಸಂಘರ್ಷ ಪ್ರಕರಣ : 14 ಪ್ರಕರಣದ ಚಾರ್ಜ್‌ಶೀಟ್‌, 36 ತನಿಖಾ ಹಂತದಲ್ಲಿ

09:09 AM Jul 28, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 63 ಕೋಮು ಸಂಘರ್ಷ ಪ್ರಕರಣಗಳು ನಡೆದಿದ್ದು, ಕೋಮು ಸಂಘರ್ಷ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲೇ 9ನೇ ಸ್ಥಾನ ಪಡೆದುಕೊಂಡಿದೆ.

Advertisement

ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದಿರುವ ಕೋಮು ಗಲಭೆ ಪ್ರಕರಣಗಳಲ್ಲಿ 36 ಕೇಸ್‌ಗಳು ಇನ್ನೂ ತನಿಖಾ ಹಂತದಲ್ಲಿದ್ದರೆ, 14 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿ ಕೋರ್ಟ್‌ನಲ್ಲಿ ವಿಚಾರಣ ಹಂತದಲ್ಲಿದೆ.

ರಾಜ್ಯದಲ್ಲಿ ಕೋಮು ಗಲಭೆಗಳಿಗೆ ಸಂಬಂಧಿಸಿ 2019ರಲ್ಲಿ 12 ಪ್ರಕರಣ ದಾಖಲಾದರೆ, 2020ರಲ್ಲಿ 21 ಕೇಸ್‌ ಠಾಣೆ ಮೆಟ್ಟಿಲೇರಿವೆ. 2021ರಲ್ಲಿ ಇದರ ಪ್ರಮಾಣ 23ಕ್ಕೆ ಏರಿಕೆಯಾಗಿದೆ.

ಈ ವರ್ಷ (ಜನವರಿ, ಫೆಬ್ರುವರಿ) 2 ತಿಂಗಳಿನಲ್ಲಿ 7 ಎಫ್ಐಆರ್‌ ದಾಖಲಾಗಿದೆ. ದಕ್ಷಿಣ ಕನ್ನಡದ ವಿಟ್ಲ ಪೊಲೀಸ್‌ ಠಾಣೆಯಲ್ಲಿ 2020ರಲ್ಲಿ ಹಾಗೂ ಹಿರೇಕೆರೂರು ಠಾಣೆಯಲ್ಲಿ 2019ರಲ್ಲಿ ದಾಖಲಾಗಿದ್ದ 2 ಕೇಸ್‌ಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿ’ ವರದಿ ಸಲ್ಲಿಸಲಾಗಿದೆ. ವಿಟ್ಲ ಪೊಲೀಸ್‌ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಮತ್ತೂಂದು ಕೇಸ್‌ನಲ್ಲಿ ಪೊಲೀಸರು ಕೋರ್ಟ್‌ಗೆ “ಸಿ’ ವರದಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಕ್ಷ್ಯಗಳ ಕೊರತೆ
ತನಿಖಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾಕ್ಷ éಗಳ ಕೊರತೆಯಿಂದ ಶೇ. 65ರಷ್ಟು ಕೇಸ್‌ಗಳು ವಜಾ ಆಗುತ್ತಿವೆ. ಆರೋಪಿಗಳು ಬೇರೆ ವ್ಯಕ್ತಿಯಿಂದ ತಮ್ಮ ಪರ ಸಾಕ್ಷ್ಯ ಹೇಳಿಸಿ ಗೊಂದಲ ಸೃಷ್ಟಿಸುವುದು. ಸಾಕ್ಷಿದಾರರು ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಸಾಕ್ಷಿ ನುಡಿಯದಿರುವುದು. ವಿಳಾಸ ಪೂರ್ಣವಾಗಿಲ್ಲದ ಕಾರಣ ಆರೋಪಿತರ ಮೇಲೆ ಸಮನ್ಸ್‌ ಜಾರಿಯಾಗುತ್ತಿಲ್ಲ ಎನ್ನುವ ವರದಿ ಆಧರಿಸಿ ಕೇಸ್‌ ಖುಲಾಸೆ ಆಗುತ್ತಿದೆ ಎಂದು ಹೇಳಲಾಗಿದೆ.

Advertisement

ಮಂಗಳೂರು 2ನೇ ಸ್ಥಾನದಲ್ಲಿ
ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ನಡೆದಿರುವ ಕೋಮು ಸಂಘರ್ಷಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ 12 ಕೇಸ್‌ ದಾಖಲಾಗಿದ್ದು, ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡದಲ್ಲಿ 11 ಪ್ರಕರಣ ದಾಖಲಾಗಿದ್ದು, 2ನೇ ಸ್ಥಾನದಲ್ಲಿದೆ. ಹಾವೇರಿ, ಬಾಗಲಕೋಟೆಯಲ್ಲಿ ತಲಾ 10 ಕೇಸ್‌ ದಾಖಲಾಗಿದ್ದು, ಅನಂತರದ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next