ರಾಂಚಿ: ನಕ್ಸಲರ ವಿರುದ್ಧದ ಹೋರಾಟದಲ್ಲಿ ಐಇಡಿ ಸಿಡಿದು ಕನಿಷ್ಠ ಐವರು ಸಿಆರ್ ಪಿಎಫ್ ಜವಾನರು ಮೃತಪಟ್ಟ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೊಂಟೊ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬಹಕದಲ್ಲಿ ಸಿಆರ್ ಪಿಎಫ್ ಸಿಬ್ಬಂದಿಯು ಐಇಡಿ ಬ್ಲಾಸ್ಟ್ ನಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡ ಯೋಧರು ಚೈಬಾಸಾ ಪೊಲೀಸ್ ನ ಕೋಬ್ರಾ ಬೆಟಾಲಿಯನ್ ನವರು ಎಂದು ವರದಿ ತಿಳಿಸಿದೆ. ಈ ಪ್ರದೇಶದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ನಕ್ಸಲರೊಂದಿಗಿನ ಎನ್‌ಕೌಂಟರ್ ನಲ್ಲಿ ಸಾವುನೋವುಗಳು ಸಂಭವಿಸಿದವು, ಇದರಲ್ಲಿ ಭದ್ರತಾ ಪಡೆಗಳಿಗೆ ಗಾಯಗಳಾಗಿವೆ.
Related Articles
ಗಾಯಗೊಂಡ ಸಿಆರ್ ಪಿಎಫ್ ಜವಾನರನ್ನು ರಾಂಚಿಗೆ ಏರ್ ಲಿಫ್ಟ್ ಮಾಡಲಾಗಿದೆ.