Advertisement

ಕೆಲವಕ್ಕೆ ಜಿಎಸ್‌ಟಿ ರಿಯಾಯಿತಿ ಕೇಂದ್ರ ವಿತ್ತ ಸಚಿವಾಲಯ ಸ್ಪಷ್ಟನೆ

12:36 AM Jul 19, 2022 | Team Udayavani |

ಹೊಸದಿಲ್ಲಿ: ಪೊಟ್ಟಣ ಮಾಡಲಾಗಿದ್ದರೂ “ಬ್ರ್ಯಾಂಡೆಡ್‌’ ಅಲ್ಲದ ಏಕದಳ – ದ್ವಿದಳ ಧಾನ್ಯಗಳಿಗೆ ಶೇ. 5 ಜಿಎಸ್‌ಟಿ ಅನ್ವಯವಾಗುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

Advertisement

ದಿನಬಳಕೆಯ ವಸ್ತುಗಳಿಗೆ ಕೂಡ ಜಿಎಸ್‌ಟಿ ವಿಧಿ ಸಿರುವ ಬಗ್ಗೆ ಜನರು ಮತ್ತು ವಿಪಕ್ಷಗಳಿಂದ ಕಟು ಟೀಕೆ ವ್ಯಕ್ತವಾದ ಬಳಿಕ ಕೇಂದ್ರ ವಿತ್ತ ಸಚಿ ವಾಲಯ ದರ ಹೆಚ್ಚಳದ ಬಗ್ಗೆ ಸ್ಪಷ್ಟನೆ ನೀಡಿದೆ.

ಅಕ್ಕಿ, ಗೋಧಿ ಮತ್ತು ಹಿಟ್ಟುಗಳು ಬ್ರ್ಯಾಂಡೆಡ್‌ ಅಲ್ಲದಿದ್ದರೆ ಪ್ಯಾಕ್‌ ಮಾಡಲಾಗಿದ್ದರೂ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ.

25 ಕೆ.ಜಿ. ಗಳಿಗಿಂತ ಅಧಿಕ ತೂಕದ ಧಾನ್ಯಗಳು ಮತ್ತು ಬೇಳೆ ಕಾಳುಗಳು, ಹಿಟ್ಟು, 25 ಲೀ.ಗಳಿಗಿಂತ ಹೆಚ್ಚು ತೂಕದ ಮೊಸರು, ಲಸ್ಸಿಗಳನ್ನು ಮೊದಲೇ ಪ್ಯಾಕ್‌ ಮಾಡಲಾಗಿರುವ ಮತ್ತು ಬ್ರ್ಯಾಂಡೆಡ್‌ ಎಂದು
ಪರಿಗಣಿಸಲಾಗುವುದಿಲ್ಲ. ಹೀಗಾಗಿ ಜಿಎಸ್‌ಟಿ ವಿಧಿಸ ಲಾಗುವುದಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.

ಬಿಡಿ ಮಾರಾಟಕ್ಕೆ ಇಲ್ಲ
ಅಂಗಡಿಗಳ ಮಾಲಕರು ಚಿಲ್ಲರೆಯಾಗಿ ಮಾರಾಟ ಮಾಡುವ ಅಕ್ಕಿ ಮತ್ತಿತರ ಧಾನ್ಯ ಗಳು ಶೇ. 5 ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ಹತ್ತು ಕೆ.ಜಿ. ಹಿಟ್ಟನ್ನು ಹತ್ತು ಚಿಲ್ಲರೆ ಪ್ಯಾಕ್‌ಗಳಾಗಿ ದೊಡ್ಡ ಪ್ಯಾಕ್‌ನಲ್ಲಿರಿಸಿ ಮಾರಾಟ ಮಾಡಿದರೆ ಅದಕ್ಕೆ ತೆರಿಗೆ ಅನ್ವಯವಾಗುತ್ತದೆ ಎಂದು ಸರಕಾರ ತಿಳಿಸಿದೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next