ಸಿಡ್ನಿ: ಐಸಿಸಿ ಆಯೋಜಿಸುವ ಪುರುಷರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಕ್ಕೆ ಅಂಪಾಯರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಆಸ್ಟ್ರೇಲಿಯದ ಕ್ಲೇರ್ ಪೊಲೊಸಾಕ್ ಪಾತ್ರರಾಗಿದ್ದಾರೆ. ಅವರು ಎ. 27ರಂದು ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್-2 ಟೂರ್ನಿಯ ಒಮಾನ್-ನಮೀಬಿಯಾ ಪಂದ್ಯದಲ್ಲಿ ಅಂಪಾಯರ್ ಆಗಿ ಕಾರ್ಯ ನಿರ್ವಹಿಸಿದರು.
2017ರಲ್ಲಿ ಕ್ಲೇರ್ ಪೊಲೊಸಾಕ್ ಆಸ್ಟ್ರೇಲಿಯದ ಪುರುಷರ ದೇಶಿ ಕ್ರಿಕೆಟ್ ಕೂಟದಲ್ಲಿ ಅಂಪಾಯರ್ ಆಗಿ ಕಾರ್ಯ ನಿರ್ವಹಿಸಿ ಸುದ್ದಿಯಾಗಿದ್ದರು.
31 ವರ್ಷದ ಪೊಲೊಸಾಕ್ ಈಗಾಗಲೇ 15 ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಅಂಪಾಯರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ 2018ರಲ್ಲಿ ಮಹಿಳಾ ಬಿಗ್‌ಬಾಶ್ ಕೂಟದಲ್ಲೂ ತೀರ್ಪುಗಾರರಾಗಿದ್ದರು.