Advertisement
ಇದನ್ನೂ ಓದಿ:ಚಡಚಣ ಸಹೋದರರ ಹತ್ಯಾ ಪ್ರಕರಣ : ನ್ಯಾಯಾಲಯಕ್ಕೆ ಹಾಜರಾದ ಭೈರಗೊಂಡ – ಸಹಚರರಿಗೆ ಭಾರಿ ಭದ್ರತೆ
ಸೋಮವಾರ ಪಶ್ಚಿಮಬಂಗಾಳದ ಬಿರ್ಭ್ಯೂಮ್ ಜಿಲ್ಲೆಯಲ್ಲಿನ ತೃಣಮೂಲ ಕಾಂಗ್ರೆಸ್ ಆಡಳಿತದ ಪಂಚಾಯತ್ ನ ಉಪ ಪ್ರಧಾನ್ ಭಾದು ಶೇಖ್ ಅವರನ್ನು ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಘಟನೆ ಬಳಿಕ ಉದ್ರಿಕ್ತ ಗ್ರಾಮಸ್ಥರು ಸುತ್ತಮುತ್ತಲಿನ ಮನೆಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚಿದ ಘಟನೆಯಲ್ಲಿ ಒಂದೇ ಮನೆಯ ಏಳು ಮಂದಿ ಸಜೀವವಾಗಿ ದಹನವಾಗಿದ್ದು, ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಪಶ್ಚಿಮಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಾಗಿ ರಾಜ್ಯಪಾಲರಾದ ಜಗ್ ದೀಪ್ ಧಾನ್ಖಾರ್ ಆರೋಪಿಸಿದ್ದಾರೆ.
Related Articles
Advertisement