Advertisement

ಶರದ್‌ಯಾದವ್‌ಗೆ 14 ರಾಜ್ಯ ಘಟಕಗಳ ಬೆಂಬಲ

06:15 AM Aug 14, 2017 | Team Udayavani |

ಹೊಸದಿಲ್ಲಿ: ಬಿಹಾರ ಸಿಎಂ ನಿತೀಶ್‌ ಕುಮಾರ್‌ ಜತೆ ಅಸಮಾಧಾನಗೊಂಡಿರುವ ಜೆಡಿಯು ನಾಯಕ ಶರದ್‌ ಯಾದವ್‌ ಅವರಿಗೆ ಬೆಂಬಲ ಸೂಚಿಸಿ ಇದೀಗ 14 ರಾಜ್ಯ ಘಟಕಗಳು ಪತ್ರ ಬರೆದಿವೆ. ಇದರಿಂದ ಉಬ್ಬಿಹೋಗಿರುವ ಶರದ್‌ ಅವರು, ತಮ್ಮದೇ “ನೈಜ ಜೆಡಿಯು’, ನಿತೀಶ್‌ರ ಹವಾ ಬಿಹಾರಕ್ಕಷ್ಟೇ ಸೀಮಿತ ಎಂಬುದನ್ನು ಸಾಬೀತುಪಡಿಸಲು ಹೊರಟಿದ್ದಾರೆ. 

Advertisement

ಇಬ್ಬರು ರಾಜ್ಯಸಭಾ ಸದಸ್ಯರು, ಕೆಲವು ರಾಷ್ಟ್ರೀಯ ಪದಾಧಿಕಾರಿಗಳು ಶರದ್‌ ಜತೆಗಿದ್ದು, ಈಗ 14 ರಾಜ್ಯ ಘಟಕಗಳ ಬೆಂಬಲವೂ ಸಿಕ್ಕಿದೆ ಎಂದು ಅವರ ಆಪ್ತ ಅರುಣ್‌ ಶ್ರೀವಾಸ್ತವ ತಿಳಿಸಿದ್ದಾರೆ. ಇನ್ನೊಂದೆಡೆ, ಶರದ್‌ರಿಗೆ ನಿಜಕ್ಕೂ ನಾಚಿಕೆಯಿದ್ದರೆ ಅವರು ರಾಜ್ಯಸಭಾ ಸದಸ್ಯ ಸ್ಥಾನವನ್ನು ತ್ಯಜಿಸಲಿ ಎಂದು ಜೆಡಿಯು ಸವಾಲು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next