ಪೌರ ಕಾರ್ಮಿಕರ ದಿಢೀರ್ ಪ್ರತಿಭಟನೆ
Team Udayavani, Apr 13, 2021, 12:57 PM IST
ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರ ನೇರ ನೇಮಕಾತಿ ಸಂಬಂಧ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಹಾಲಿ 377 ದಿನಗೂಲಿ ಪೌರ ಕಾರ್ಮಿಕರನ್ನು ಪರಿಗಣಿಸದೇ ಇರುವುದನ್ನುಖಂಡಿಸಿ ಪೌರ ಕಾರ್ಮಿಕರ ಹೋರಾಟಕ್ರಿಯಾ ಸಮಿತಿ ನೇತೃತ್ವದಲ್ಲಿ ಸೋಮವಾರಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪಾಲಿಕೆಯಲ್ಲಿ 377 ಪೌರ ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಳೆದ 26ವರ್ಷಗಳಿಂದ ದುಡಿಯುತ್ತಿದ್ದಾರೆ. ಇದರಲ್ಲಿ ಈಗಾಗಲೇ ಕೆಲವರು ಸೇವೆ ಸಂದರ್ಭದಲ್ಲೇ ಮರಣ ಹೊಂದಿದ್ದಾರೆ. ನೌಕರಿ ಕಾಯಂಗೊಳಿಸಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ನೌಕರಿ ಕಾಯಂಗಾಗಿ ನ್ಯಾಯಾಲಯದ ಮೊರೆ ಹೋದಾಗ ಕಾರ್ಮಿಕರ ಪರವಾಗಿ ತೀರ್ಪು ನೀಡಿದೆ. ಆದರೆ, ಏ.6ರಂದುಪ್ರಕಟಿಸಿರುವ ನೇರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಈ 377ದಿನಗೂಲಿ ಪೌರ ಕಾರ್ಮಿಕರ ಹೆಸರೇ ಇಲ್ಲ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.
ನೇರ ನೇಮಕಾತಿಗಾಗಿ 2017-18ರಲ್ಲಿ ಜಿಲ್ಲಾಧಿಕಾರಿಗಳು ಅರ್ಜಿ ಆಹ್ವಾನಿಸಿದ್ದರು.ಆಗ ಎಲ್ಲ ದಿನಗೂಲಿ ಪೌರ ಕಾರ್ಮಿಕರುಅರ್ಜಿ ಸಲ್ಲಿಸಿದ್ದರು. ನಂತರ ದಿನಗೂಲಿ ಪೌರ ಕಾರ್ಮಿಕರ ಸೇವೆ ಪರಿಗಣಿಸಿ, ಈಗಇರುವವರನ್ನೇ ಕಾಯಂ ನೇಮಕಾತಿ ಮಾಡಿಕೊಳ್ಳಲಾಗುವುದಾಗಿ ಅನೇಕಸಭೆಗಳಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಭರವಸೆ ನೀಡಿತ್ತು. ಸರ್ಕಾರ ಎಲ್ಲ ಇಲಾಖೆಗಳಲ್ಲೂ ದಿನಗೂಲಿ ನೌಕರರನ್ನೇಕಾಯಂ ಮಾಡಿಕೊಂಡು ಬರಲಾಗಿದೆ.ಕಲಬುರಗಿ ಮಹಾಗರ ಪಾಲಿಕೆ ಮಾತ್ರಹಾಲಿ ನೌಕರರನ್ನು ಆಯ್ಕೆ ಪಟ್ಟಿಯಿಂದಬಿಟ್ಟು ಮೋಸ ಮಾಡಲು ಹೊರಟಿದೆ ಎಂದು ಆಕ್ರೋಶ ಹೊರ ಹಾಕಿದರು.
ತಾತ್ಕಾಲಿಕ ಆಯ್ಕೆ ಪಟ್ಟಿಗೆ ನೌಕರರ ಸೇವೆಪರಿಗಣಿಸಿದೇ ಇರುವುದು ನ್ಯಾಯಾಲಯದಆದೇಶದ ಉಲ್ಲಂಘನೆಯಾಗಿದೆ. ದಿನಗೂಲಿನೌಕರರನ್ನು ಹಕ್ಕನ್ನು ಕಸಿದುಕೊಳ್ಳುವಹುನ್ನಾರವಾಗಿದೆ. ಕಾಯಂ ನೇಮಕಾತಿಗೆಪರಿಗಣಿಸದೇ ಇರುವುದರಿಂದಬಡ ಕಾರ್ಮಿಕರ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಆದ್ದರಿಂದ ಈಗ ಪ್ರಕಟಿಸಿರುವ ಆಯ್ಕೆಯನ್ನುರದ್ದುಗೊಳಿಸಬೇಕು. ಹಾಲಿ 377 ದಿನಗೂಲಿ ಪೌರ ಕಾರ್ಮಿಕರನ್ನೊಳಗೊಂಡ ಹೊಸ ಪಟ್ಟಿಯನ್ನು ಪ್ರಕಟಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಹೋರಾಟ ನಡೆಸಲಾಗುತ್ತದೆ. ಇದನ್ನುಜಿಲ್ಲಾಧಿಕಾರಿಗಳೇ ಕಾರಣರಾಗಬೇಕಾಗುತ್ತೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಮುಖಂಡರಾದ ಅರ್ಜುನ ಭದ್ರೆ, ಮರೆಪ್ಪಹಳ್ಳಿ, ಮಲ್ಲೇಶಿ ಸಜ್ಜನ, ಸೂರ್ಯಕಾಂತ ನಿಂಬಾಳಕರ, ಸಂತೋಷ ಮೇಲ್ಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀ ಸಿಮೆಂಟ್ ಕಾರ್ಖಾನೆ; ರೈತರ ಪರಿಹಾರದಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ ನೀಡಿದ ತೇಲ್ಕೂರ
Kalaburagi ರೈಲ್ವೇ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಯತ್ನ
Congress: ಸಿಎಂ, ಡಿಸಿಎಂ ನಡುವೆ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ: ಕೆ.ಜೆ.ಜಾರ್ಜ್
Kalaburagi: ಜ. 26ರಂದು ಸಿದ್ಧಲಿಂಗೇಶ್ವರ ಪ್ರಕಾಶನ 131 ಗ್ರಂಥಗಳು ಏಕಕಾಲಕ್ಕೆ ಬಿಡುಗಡೆ
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ