Advertisement

ಪೌರಕಾರ್ಮಿಕರಿಗಿಲ್ಲ ಸ್ವಚ್ಛತಾ ಪರಿಕರ

04:42 PM Jul 26, 2022 | Team Udayavani |

ರಾಮನಗರ: ನಗರದ ಸ್ವಚ್ಛತೆ ವಿಚಾರದಲ್ಲಿ ಸದಾ ಜೀವವನ್ನೇ ಪಣಕ್ಕಿಟ್ಟು ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರು ಸಾವು ಬದುಕಿನ ನಡುವೆ ನಿರಂತರವಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ರಾಮನಗರ ನಗರಸಭೆಯಲ್ಲಿ ಇದಕ್ಕೆ ತಾಜಾ ಉದಾಹರ ಣೆಯಾಗಿ ನೇರ ಪಾವತಿ ಆಧಾರದಲ್ಲಿ ಕಾರ್ಯ ನಿರ್ವಹಿಸುವ ವೇಣು(32) 2017ರಲ್ಲಿ ನೇರ ನೇಮಕಾತಿಯಾದ ಯುವಕ ಹಾವು ಕಡಿತದಿಂದ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

ನಗರದ ಹೊರವಲಯದಲ್ಲಿನ ಹುಣಸನಹಳ್ಳಿ ರಸ್ತೆಯಲ್ಲಿರುವ ಕಸ ಸುರಿಯುವ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕನಿಗೆ ಹಾವು ಕಚ್ಚಿದ್ದು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಸರ್ಕಾರಿ ಆಸ್ಪತ್ರೆಗೆ ಕರೆ ದೊಯ್ಯಲಾಗಿದೆ. ಇದು ಪೌರ ಕಾರ್ಮಿಕರಲ್ಲಿ ಇದ್ದ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.

ನಗರಸಭೆ ಸ್ವಚ್ಛನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅದಕ್ಕೆ ಪೌರ ಕಾರ್ಮಿಕರ ಪ್ರಾಮಾಣಿಕ ಶ್ರಮ ಕೂಡ ಪ್ರಮುಖವಾಗಿತ್ತು. ಆದರೆ, ಇದೀಗ ಪೌರ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ನಿಯಮದಂತೆ ಪೌರ ಕಾರ್ಮಿಕರು ಕೆಲಸ ನಿರ್ವಹಿಸುವ ವೇಳೆ ಸಿಗಬೇಕಾದ ಮೂಲಭೂತ ಸೌಲಭ್ಯ ನಗರಸಭೆ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಆದಕ್ಕೆ ತಾಜಾ ಉದಾಹರಣೆಯಾಗಿಯೇ ಬೆಳಗ್ಗೆ ನಗರದ ಬೀದಿ ಬೀದಿಗಳಲ್ಲಿ ಕಸತೆಗೆಯುವ ಪೌರಕಾರ್ಮಿಕರು ಯಾವುದೇ ಮುಂಜಾಗ್ರತಾ ಕವಚಗಳಿಲ್ಲದೇ ಕೆಲಸ ನಿರ್ವಹಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಗಂಬೂಟು ನೀಡುತ್ತಿಲ್ಲ: ಮುಂಜಾಗ್ರತಾ ಕವಚಗಳ ಕಿಟ್‌ನಲ್ಲಿ ನೀಡಬೇಕಾಗಿದ್ದ ಗಂಬೂಟು ನೀಡುತ್ತಿಲ್ಲ, ಜೊತೆಗೆ ಉಪಾಹಾರ ನೀಡಬೇಕಾದ ವ್ಯವಸ್ಥೆಯಲ್ಲಿವ್ಯತ್ಯಯ ತುಂಬಾ ಇದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದಷ್ಟೇ ಅಲ್ಲದೆ ನಗರಸಭೆಯ ಸಿಬ್ಬಂದಿ ಗಳಿಂದ ಕಿರುಕುಳದ ಆರೋಪ ಕೂಡ ಹೆಚ್ಚಾಗಿ ಕೇಳಿ ಬರುತ್ತಿದೆ. ಇದೆಲ್ಲದರ ನಡುವೆ ಇವರ ನಿರ್ವಹಣಾಜವಾಬ್ದಾರಿ ಹೊತ್ತಿರುವ ಅಧಿಕಾರಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಎಲ್ಲವನ್ನೂ ನಿರ್ವಹಣೆ ಮಾಡಿಸುವ ಜವಾಬ್ದಾರಿ ಕೂಡ ಇರುತ್ತೆ. ಆದ್ರೆ, ನಗರಸಭೆಯ ಹಿರಿಯ ಅಧಿಕಾರಿ ಸುಬ್ರಮಣ್ಯ ಅವರು ಬೆಂಗಳೂರಿ ನಿಂದ ಕಾರ್ಯಾಲಯಕ್ಕೆ ಹೋಗಿ ಬಂದು ಮಾಡುತ್ತಿ ದ್ದಾರೆ ಅವರು ಇದರ ನಿರ್ವಹಣೆ ಬಗ್ಗೆ ಗಮನಿಸುವ ಗೋಜಿಗೆ ಹೋಗಿಲ್ಲ ಎನ್ನಲಾಗಿದೆ.

Advertisement

ಇನ್ನುಳಿದಂತೆ ಪೌರ ಕಾರ್ಮಿಕರಿಗೆ ಮುಂಜಾಗ್ರತೆಗಾಗಿ ನೀಡಬೇಕಾದ ಸೌಲಭ್ಯವನ್ನು ಇ ಪ್ರಕ್ಯೂರ್‌ ಮೆಂಟ್‌ ಮುಖಾಂತರ ಟೆಂಡರ್‌ ಕರೆದು ಖರೀದಿಸಲಾಗಿದೆ. ಯಾವುದೇ ಅಂಗಡಿಗೆ ಹೋಗಿ ಬಿಡಿ ಬಿಡಿ ಯಾಗಿ ಖರೀದಿಸಿಲ್ಲ ಎನ್ನುವ ನಗರಸಭೆಯ ಆಯುಕ್ತ ನಂದಕುಮಾರ್‌ ಅವರು, ನನ್ನ ಕಸ ನನ್ನ ಜವಾಬ್ದಾರಿ ಎಂಬ ಯೋಜನೆ ಕಟ್ಟು ನಿಟ್ಟಾಗಿದೆ. ಇದನ್ನ ಸಾರ್ವಜನಿಕರು ಪಾಲಿಸಬೇಕು. ಆದರೆ, ಯಾರೂ ಪಾಲಿಸುತ್ತಿಲ್ಲ. ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ ಎಂದು ಅಸಹಾಯಕತೆ ತೋಡಿಕೊಂಡರು.

ಪ್ರಾಣಾಪಾಯದಿಂದ ಪಾರು: ಬೆಳಗ್ಗೆ ಸಮಯದಲ್ಲಿ ಕಸ ವಿಲೇವಾರಿ ವೇಳೆ ಪೌರ ಕಾರ್ಮಿಕರೊಬ್ಬರಿಗೆ ಹಾವು ಕಡಿತಕ್ಕೆ ಸಂಬಂಧಿಸಿದಂತೆ ಅಂತಹದ್ದೇನು ಇಲ್ಲ. ನಗರಸಭೆ ಅವರಿಗೆ ನೀಡಬೇಕಾದ ಮುಂಜಾಗ್ರತಾ ಕ್ರಮವಾಗಿ ರಕ್ಷಣಾತ್ಮಕ ವ್ಯವಸ್ಥೆಯಡಿ ಶೂ, ಕೈ ಗವಚ, ವಾಷ್‌ ಕೋಟ್‌, ಸೇರಿದಂತೆ ಹಲವು ಪರಿಕರ ನೀಡಬೇಕು. ಅದರಂತೆ ನಾವು ನಿಯಮಾನುಸಾರ ನೀಡಿದ್ದೇವೆ. ಆದರೆ, ತಿಂಡಿ ತಿನ್ನುವ ವೇಳೆ ಶೂ ಬಿಚ್ಚಿ ತಿನ್ನುತ್ತಿದ್ದರು. ಆಗ ಬಹಿರ್ದೆಸೆಗೆ ಹೋಗಿ ದ್ದರು. ಆ ಸಂದರ್ಭ ದುರ್ಘ‌ಟನೆ ನಡೆದಿದೆ. ಕೂಡಲೇ ಅವರನ್ನ ರಾಮ  ನಗರ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನಗರ ಸಭೆ ಪೌರಾಯುಕ್ತ ನಂದ ಕುಮಾರ್‌ ತಿಳಿಸಿದರು.

ಕಳೆದ ಎರಡು ವರ್ಷದ ಹಿಂದೆ ನಗರದ ಐಜೂರು ಬಡಾವಣೆಯಲ್ಲಿ ಮ್ಯಾನ್‌ಹೋಲ್‌ನಲ್ಲಿ ಕೆಲಸ ಮಾಡಲು ಹೋಗಿ ಮೂರು ಪೌರಕಾರ್ಮಿಕರು ಬಿದ್ದು ಸಾವನ್ನಪ್ಪಿದ್ದ ಘಟನೆ ಇನ್ನು ಪೌರ ಕಾರ್ಮಿಕರ ಮನಸ್ಸಿನಿಂದ ಮಾಸಿಲ್ಲ. ಆದರೂ, ಇಂದಿಗೂ ಕೆಲವರುಯಾವುದೇ ರಕ್ಷಣಾತ್ಮಕ ಉಡುಪು ಬಳಸದೆ ಕಾರ್ಯ ನಿರ್ವಹಿಸುತ್ತಿರುವುದು ಸಾಮಾನ್ಯವಾಗಿ ಕಾಣಸಿಗುತ್ತಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಇರೋದು ಇಂತಹ ಅವಾಂತರಗಳಿಗೆ ಕಾರಣ ಎನ್ನಲಾಗಿದೆ.

ಕಾರ್ಮಿಕರ ಕೊರತೆ:

ನಗರಸಭೆಯಲ್ಲಿ ಕಾರ್ಮಿಕರ ಕೊರತೆ ಕೂಡ ಹೆಚ್ಚಾಗಿದೆ. ನಿಯಮದಂತೆ 700 ಜನಕ್ಕೆ ಒಬ್ಬರು ಪೌರ ಕಾರ್ಮಿಕರು ಬೇಕು. ಆದರೆ, ನಮ್ಮಲ್ಲಿ ಇಲ್ಲ. ಇದರಿಂದ ಎಲ್ಲಾ ಕಾರ್ಮಿಕರು ಮತ್ತು ಸಿಬ್ಬಂದಿ ಶಕ್ತಿ ಮೀರಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ಯುಜಿಡಿ ಕಾಮಗಾರಿ ಕೂಡ ನಡಿಬೇಕು. ವಾಟರ್‌ ಬೋರ್ಡ್‌ನವರು ನಿರಂತರ ನೀರು ಸರಬರಾಜುಮಾಡುವ ಉದ್ದೇಶಕ್ಕಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಇದು ಕೂಡ ನಮ್ಮ ಕೆಲಸಕ್ಕೆ ತೊಡಕಾಗಿದೆ ಎಂದು ನಗರಸಭೆ ಆಯುಕ್ತ ನಂದಕುಮಾರ್‌ ಹೇಳಿದರು.

ಅಧಿಕಾರಿಗಳ ಬೇಜವಾಬ್ದಾರಿತನನಗರ ಸಭೆಯಲ್ಲಿ ಹೆಚ್ಚಾಗಿದೆ. ಪರಿಸರಅಭಿಯಂತರರುಕೊರೊನಾ ಸಂದರ್ಭದಲ್ಲೂ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲ. ನಗರಸಭೆಯಲ್ಲಿ ಅಕ್ರಮದ ವಾಸನೆ ಬಗ್ಗೆಯೋಜನಾ ನಿರ್ದೆಶಕರಿಗೆ ದೂರು ನೀಡಿದ್ದೇನೆ. ಯಾವ ಮಾಹಿತಿ ಕೇಳಿದರೂಕೊಡಲ್ಲ, ವರ್ಷಗಳೇ ಕಳೆದರೂ, ಈವರೆಗೆಯಾವುದೇ ಕ್ರಮ ಕೈಗೊಂಡಿಲ್ಲ.ಅಧಿಕಾರಿಗಳು ಬೆಂಗಳೂರಿನಿಂದ ಹೋಗಿಬಂದು ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿ ಹೇಳ್ಳೋರು, ಕೇಳ್ಳೋರು ಯಾರು ಇಲ್ಲ ಎನ್ನುವಂತಾಗಿದೆ. – ಶಿವನಾಗಸ್ವಾಮಿ, ಆರ್‌ಟಿಐ ಕಾರ್ಯಕರ್ತ

ಪೌರ ಕಾರ್ಮಿಕರಿಗೆ ಸರ್ಕಾರದ ನಿಯಮದಂತೆ ಎಲ್ಲವನ್ನೂ ಇ-ಪ್ರಕ್ಯೂರ್‌ಮೆಂಟ್‌ ಮುಖಾಂತರವೇ ಟೆಂಡರ್‌ ಕರೆದು ನೀಡುತ್ತಿದ್ದೇವೆ.ಅದರಲ್ಲಿಯಾವುದೇ ಲೋಪವಾಗಿಲ್ಲ. ತಿಂಡಿತಿನ್ನುವ ವೇಳೆ ಪೌರಕಾರ್ಮಿಕ ವೇಣುಶೂ ಮತ್ತು ಕೈ ಕವಚ ಬಿಚ್ಚಿದ್ದರು.ಅದೇ ವೇಳೆ ಬಹಿರ್ದೆಸೆಗೆಹೋಗಿದ್ದಾಗ ಘಟನೆ ನಡೆದಿದೆ. ಈಗಆ ಪೌರ ನೌಕರಆರೋಗ್ಯವಾಗಿದ್ದಾರೆ. ಯಾವುದೇ ಪ್ರಾಣಾಪಾಯ ಇಲ್ಲ. – ನಂದಕುಮಾರ್‌, ನಗರಸಭೆ ಪೌರಾಯುಕ್ತ

ಪೌರ ಕಾರ್ಮಿಕರಿಗೆ ನೀಡುವ ರಕ್ಷಣಾತ್ಮಕ ವಸ್ತು ನೀಡುವಲ್ಲಿ ವ್ಯತ್ಯಯ ಇದೆ. ಗಂಬೂಟ್‌ ನೀಡಿಲ್ಲ. ಸಾಮಾನ್ಯ ಶೂ ನೀಡುತ್ತಾರೆ. ಅಲ್ಲದೆ, ಕಳೆದ ಎಂಟು ತಿಂಗಳ ಹಿಂದೆ ಉಪಾಹಾರನೀಡುವ ವಿಚಾರದಲ್ಲಿ ಅವ್ಯವಹಾರ ಮಾಡಿದ್ದರು. ನಾಲ್ಕು ತಿಂಗಳು ನೀಡಿರಲಿಲ್ಲ. ನಾವು ಹೋರಾಟ ಮಾಡಿದ ಬಳಿಕ ಅದನ್ನುಕೊಡಿಸಿದ್ದೇವೆ. ಇಲ್ಲಿ ಆರೋಗ್ಯ ಶಾಖೆ ಅಧಿಕಾರಿಗಳದ್ದೇ ದರ್ಬಾರ್‌ಜೋರಾಗಿದ್ದು, ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಹೊರಗುತ್ತಿಗೆಆಧಾರದ ಕಾರ್ಮಿಕರಿಗೂ ನ್ಯಾಯಯುತವಾಗಿ ಸಲ್ಲಬೇಕಾದ ಸವಲತ್ತು ತಲುಪಬೇಕೆಂದು ಆಗ್ರಹಿಸುತ್ತೇನೆ. -ಚಲಪತಿ, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ

 

– ಎಂ.ಎಚ್‌. ಪ್ರಕಾಶ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next