Advertisement

ನೈರ್ಮಲೀಕರಣಕ್ಕಾಗಿ 5.35 ಕೋಟಿ ರೂ.ಮೀಸಲು

04:01 PM Mar 16, 2023 | Team Udayavani |

ಕೋಲಾರ: ನಗರಸಭೆಯ 2023-24ನೇ ಸಾಲಿನ ಆಯವ್ಯಯದಲ್ಲಿ ರೂ 4.97 ಕೋಟಿ ರೂಗಳ ಉಳಿತಾಯದ ಬಜೆಟ್‌ನ್ನು ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಷ್‌ ಮಂಡಿಸಿದ್ದು, ನಗರ ನೈರ್ಮಲೀಕರಣಕ್ಕಾಗಿ 5.35 ಕೋಟಿ ರೂ ನಿಗ ಪಡಿಸಲಾಗಿದೆ.

Advertisement

ನಗರಸಭೆ ಕಾರ್ಯಾಲಯದಲ್ಲಿ ನಡೆದ ನಗರಸಭೆಯ 2023-24ನೇ ಸಾಲಿನ ಆಯ-ವ್ಯಯ ಸಭೆಯ ಅಧ್ಯಕ್ಷತೆ ವಹಿಸಿ ಮಂಡಿಸಿದ ಅವರು, ಮಾರ್ಚ್‌ 31ಕ್ಕೆ ಶಿಲ್ಕು ರೂ. 38.19ಕೋಟಿ ರೂ.ಗಳಾಗಿದ್ದು, ನಿರೀಕ್ಷಿತ ಜಮಾ ರೂ. 81.22 ಕೋಟಿ ರೂ. ಸೇರಿದಂತೆ ಒಟ್ಟು ಅದಾಯ 119.41ಕೋಟಿ ರೂ.ಗಳಾಗಿದ್ದು ನಿರೀಕ್ಷಿತ ಖರ್ಚು ರೂ. 114.44ಕೋಟಿ ರೂ. ಗಳಾಗಿದ್ದು ನಿರೀಕ್ಷಿತ ಉಳಿತಾಯ ರೂ 4.97 ಕೋಟಿ ರೂ.ಗಳಾಗಿದೆ ಎಂದರು.

ಸರ್ಕಾರದ ಅನುದಾನದ ನಿರೀಕ್ಷೆ ಪ್ರಕಾರ ಎಸ್‌. ಎಫ್‌.ಸಿ. ಅನುದಾನ ರಾಜ್ಯ ಹಣಕಾಸು ಆಯೋಗದ ಅನುದಾನ ರೂ. 2.59 ಕೋಟಿ , ವೇತನ ಅನುದಾನ ರೂ.5.22ಕೋಟಿ, ವಿದ್ಯುತ್‌ ಶಕ್ತಿ ಅನುದಾನ ರೂ. 21.58 ಕೋಟಿ, ಶಾಸಕರ ಅನುದಾನ ರೂ 5ಲಕ್ಷ , ಸ್ವಚ್ಚ ಭಾರತ್‌ ಮಿಷನ್‌ ಅನುದಾನ ರೂ. 25 ಲಕ್ಷ, ಎಸ್‌ಎಫ್‌ಸಿ ಬರ ಪರಿಹಾರ ಅನುದಾನ ರೂ.15 ಲಕ್ಷ, 15ನೇ ಹಣಕಾಸು ಯೋಜನೆ ಅನುದಾನ ರೂ 5.71 ಕೋಟಿ,ಅಮೃತ ಯೋಜನೆ ಅನುದಾನ ರೂ. 7.88 ಕೋಟಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿಆರ್‌ಎಫ್‌. ಅನುದಾನ 20 ಲಕ್ಷ, ಪೌರಕಾರ್ಮಿಕರ ಆಶ್ರಯ ಯೋಜನೆ ರೂ 2.74 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ ರೂ.4.66 ಕೋಟಿ ರೂ.ಬಂಡವಾಳ ಆದಾಯ ರೂ. 4 ಕೋಟಿ, ಶೇ 24.10 %, 7.25%, 5%, 1%ರ ಅಭಿವೃದ್ಧಿಗಾಗಿ ರೂ. 77 ಲಕ್ಷ, ಅಸಾಮಾನ್ಯ ಸಾಲ ರೂ. 8.46ಕೋಟಿ ಹಾಗೂ ಪ್ರಾರಂಭಿಕ ಶಿಲ್ಕು ರೂ.38, 19,17,460 ಸೇರಿದಂತೆ ಒಟ್ಟು ಅದಾಯ ರೂ. 119.41 ಕೋಟಿ ರೂಗಳ ನಿರೀಕ್ಷಿತ ಆದಾಯವಾಗಿದೆ ಎಂದು ತಿಳಿಸಿದರು.

ರಸ್ತೆ ದುರಸ್ತಿ,ಬೀದಿ ದೀಪ , ಚರಂಡಿ ನಿರ್ಮಾಣಕ್ಕೆ ಆದ್ಯತೆ: ನಗರದ 35 ವಾರ್ಡಗಳ ನೈರ್ಮಲೀಕರಣ ರೂ 5.35 ಕೋಟಿ, ರಸ್ತೆ ದುರಸ್ತಿ ಹಾಗೂ ರಸ್ತೆ ಮೆಟಿಲಿಂಗ್‌ ರೂ 50 ಲಕ್ಷ, ಬೀದಿ ದೀಪ ನಿರ್ವಹಣೆ ಹಾಗೂ ವಿದ್ಯುತ್‌ ಬಿಲ್‌ ರೂ 7.52 ಕೋಟಿ,ನೀರು ಸರಬರಾಜು ವಿದ್ಯುತ್‌ ಬಿಲ್‌ ರೂ 14.06 ಕೋಟಿ, ಬೀದಿ ದೀಪ ನಿರ್ವಾಹಣೆ 1.20 ಕೋಟಿ, ಪೈಪ್‌ ಲೈನ್‌ ಮತ್ತು ಪಂಪು ಮೋಟರ್‌ ದುರಸ್ತಿ ರೂ. 5.50 ಕೋಟಿ, ಘನ ತ್ಯಾಜ್ಯ ವಸ್ತುಗಳ ಸಲಕರಣೆಗಳು ಖರೀದಿ ರೂ 35 ಲಕ್ಷ, ಜಮೀನು ಖರೀದಿ ರೂ 10 ಕೋಟಿ, ಕಟ್ಟಡ ನಿರ್ಮಾಣ ರೂ 1 ಕೋಟಿ,ವಾಹನ ಖರೀದಿ ರೂ. 70 ಲಕ್ಷ, ಹೊಸ ರಸ್ತೆ ನಿರ್ಮಾಣ 3.03,43,000, ಹೊಸ ಚರಂಡಿ ನಿರ್ಮಾಣ ರೂ 7.49 ಕೋಟಿಗಳಾಗಿದೆ ಎಂದು ಹೇಳಿದರು.

Advertisement

ಸಭೆಯ ಲ್ಲಿ ಮಾಜಿ ಸಂಸದ ಧ್ರುವ ನಾರಾಯಣ್‌ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಜುಗ್ನು ಅಸ್ಲಾಂ ಹಾಗೂ ಪೌರಾಯುಕ್ತ ಶಿವಾನಂದ ಉಪಸ್ಥಿತರಿದ್ದರು.

ನಗರ ಸಭೆ ವಿವಿಧ ಮೂಲದ ಆದಾಯ ನಿರೀಕ್ಷೆ : ನಗರಸಭೆಯ ಆದಾಯದ ನಿರೀಕ್ಷೆಯ ಪ್ರಕಾರ ಆಸ್ತಿ ತೆರಿಗೆ ರೂ 8.90 ಕೋಟಿ ರೂ, ನೀರಿನ ಬಳಕೆದಾರರ ಶುಲ್ಕ ರೂ 99.98 ಲಕ್ಷ ಘನತ್ಯಾಜ್ಯ ನಿರ್ವಾಹಣೆ ಶುಲ್ಕ ರೂ.70 ಲಕ್ಷ ಮಳಿಗೆಗಳ ಬಾಡಿಗೆ ರೂ.68 ಲಕ್ಷ ಕಟ್ಟಡಗಳ ಪರವಾನಗಿ ಶುಲ್ಕ ರೂ.60 ಲಕ್ಷ ಲೈಸನ್ಸ್‌  ಫ್ರೀಯಿಂದ ರೂ.38 ಲಕ್ಷ ಒಳಚರಂಡಿ ಬಳಕೆ ಹಾಗೂ ಸಂರ್ಪಕ ಶುಲ್ಕ ರೂ.47 ಲಕ್ಷ ಮಾರುಕಟ್ಟೆ ಬಸ್‌ ನಿಲ್ದಾಣ ಮತ್ತು ಸಂತೆ ಶುಲ್ಕ ರೂ. 15.75 ಲಕ್ಷ, ಜಾಹೀರಾತು ತೆರಿಗೆ ರೂ.7.68 ಲಕ್ಷ ಹಾಗೂ ಇತರೆ ವಸೂಲಿ ರೂ. 3.89 ಕೋಟಿ ರೂ ಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next