Advertisement

ಜೂ.1ರಿಂದ ಉಡುಪಿಯಲ್ಲಿ ನಿರಂತರವಾಗಿ ಖಾಸಗಿ ಬಸ್ಸು ಓಡಾಟ:  ಶಾಸಕ ರಘುಪತಿ ಭಟ್

05:50 PM May 30, 2020 | keerthan |

ಉಡುಪಿ: ಜಿಲ್ಲೆಯ ಜನತೆ ಬಹುವಾಗಿ ನಂಬಿಕೊಂಡಿರುವ ಖಾಸಗಿ ಬಸ್ಸುಗಳ ಓಡಾಟವನ್ನು ಸೋಮವಾರದಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

Advertisement

ಕೋವಿಡ್ – 19 ಮಹಾಮಾರಿಯ ಸಂಕಷ್ಟದಿಂದ ಲಾಕ್ ಡೌನ್ ಹೇರಿಕೆಯಾದ ದಿನಗಳಿಂದ ಉಡುಪಿಯಲ್ಲಿ ಖಾಸಗಿ ಬಸ್ಸು ಸಂಚಾರ ಸಂಪೂರ್ಣ ತಡೆ ಹಿಡಿಯಲಾಗಿತ್ತು. ಸದ್ಯ ಬಸ್ ಸಂಚಾರಕ್ಕೆ ಸರಕಾರ ಅನುಮತಿ ನೀಡಿರದ್ದರು ಜನರು ಬಸ್ಸೇರಲು ಆತಂಕ ತೋರುವ ಕಾರಣ ಕಳೆದ ಒಂದು ವಾರಗಳಿಂದ ಉಚಿತ ಸಿಟಿ ಬಸ್ ಸೇವೆ ನೀಡಲಾಗಿತ್ತು. ಈ ಸೇವೆ ಭಾನುವಾರ ಅಂತ್ಯವಾಗುತ್ತಿದೆ.

ಈ ಸಂಬಂಧ ಇಂದು ಖಾಸಗಿ ಬಸ್ಸು ಮಾಲಕರೊಂದಿಗೆ ಶಾಸಕರು ಚರ್ಚೆ ನಡೆಸಿದ್ದು,  ಬಸ್ಸಿನ ಸಿಬ್ಬಂದಿಗಳ ರಕ್ಷಣೆಯ ಜೊತೆಗೆ ಪ್ರಯಾಣಿಕರ ರಕ್ಷಣೆಗೂ ಆದ್ಯತೆಯನ್ನು ನೀಡಿ ಸೋಮವಾರ ನಿರಂತರವಾಗಿ ಉಡುಪಿಯಲ್ಲಿ ಖಾಸಗಿ ಸಿಟಿ ಬಸ್ಸು ಓಡಿಸುವ ಬಗ್ಗೆ ನಿರ್ಧರಿಸಲಾಗಿದೆ.

ಪ್ರಾರಂಭಿಕವಾಗಿ 25 ಬಸ್ಸುಗಳು ನಂತರ ಜನರ ಬೇಡಿಕೆಗಣುಗುಣವಾಗಿ ಬಸ್ಸು ಓಡಿಸುವುದು. ಬಸ್ಸಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹಾಗೂ ಬಸ್ಸನ್ನು ಸ್ಯಾನಿಟೈಸಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next