Advertisement

ಸಿಟಿ ಬಸ್‌: ವಿದ್ಯಾರ್ಥಿಗಳಿಗೆ ಟಿಕೆಟ್‌ ರಹಿತ ಸ್ಮಾರ್ಟ್‌ ಬಸ್‌ ಪಾಸ್‌ !

11:24 PM Jan 22, 2021 | Team Udayavani |

ಮಹಾನಗರ: ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಪ್ರಯಾಣಿಸುವ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಟಿಕೆಟ್‌ ರಹಿತ ಸೇವೆ ಒದಗಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಸಿಟಿ ಬಸ್‌ ಮಾಲಕರ ಸಂಘವು ಸ್ಮಾರ್ಟ್‌ ಬಸ್‌ ಪಾಸ್‌ ವ್ಯವಸ್ಥೆಯನ್ನು ಪರಿಚಯಿಸಿದೆ.

Advertisement

ಈ ನೂತನ ಯೋಜನೆಯಿಂದಾಗಿ ಓರ್ವ ವಿದ್ಯಾರ್ಥಿಗೆ 3.47 ರೂ.ರಷ್ಟು ಕಡಿಮೆ ದರದಲ್ಲಿ ಬಸ್‌ ಪ್ರಯಾಣ ಮಾಡುವಂತಹ ಅವಕಾಶ ನೀಡಲಾಗಿದೆ. ಈ ಬಸ್‌ ಪಾಸ್‌ ಅನ್ನು ಚಲೋ ಕಾರ್ಡ್‌ನಲ್ಲಿ ಖರೀದಿಸಬಹುದಾಗಿದ್ದು, ಖರೀದಿಸಿದ ದಿನದಿಂದ 30 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ. ವಿದ್ಯಾರ್ಥಿಗಳು ತಮ್ಮ ಏಕಮುಖ ಪ್ರಯಾಣದ ದರ ಮತ್ತು ದಿನದಲ್ಲಿ ಕೈಗೊಳ್ಳುವ ಪ್ರಯಾಣದ ಸಂಖ್ಯೆಗೆ ಅನುಗುಣವಾಗಿ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಸಾಮಾನ್ಯವಾಗಿ ಒಂದು ಪ್ರಯಾಣಕ್ಕೆ 10 ರೂ. ನೀಡುವ ವಿದ್ಯಾರ್ಥಿಯು 434 ರೂ.ನ ಬಸ್‌ ಪಾಸ್‌ ಪಡೆದರೆ, ಆತ 30 ದಿನಗಳಲ್ಲಿ 104 ಪ್ರಯಾಣಗಳನ್ನು ಕೈಗೊಂಡರೆ, ಆಗ ತಲಾ ಒಂದು ಪ್ರಯಾಣದ ದರ ಕೇವಲ 3.47 ರೂ.ಗೆ ಆಗುತ್ತದೆ.

ಬಸ್‌ ಪಾಸ್‌ ಪಡೆಯುವುದು ಹೇಗೆ? :

ವಿದ್ಯಾರ್ಥಿಗಳು ಬಸ್‌ ಪಾಸ್‌ ಅನ್ನು ಹಂಪನಕಟ್ಟೆಯ ಮಿಲಾಗ್ರಿಸ್‌ ಕಟ್ಟದಲ್ಲಿರುವ ದ.ಕ. ಬಸ್‌ ಮಾಲಕರ ಸಂಘದ ಕಚೇರಿ, ಸ್ಟೇಟ್‌ಬ್ಯಾಂಕ್‌ ಬಳಿಯ ಸಿಟಿ ಟವರ್‌ 2ನೇ ಮಹಡಿಯಲ್ಲಿರುವ ಚಲೋ ಕಚೇರಿ, ಬಲ್ಮಠರಸ್ತೆಯ ಹಂಪನಕಟ್ಟೆಯಲ್ಲಿರುವ ಮಾಂಡವಿ ಮೋಟರ್ಸ್‌ ಎದುರಿನ ಸಾಗರ್‌ ಟೂರಿಸ್ಟ್‌ನಲ್ಲಿ ಪಡೆಯಬಹುದಾಗಿದೆ.

Advertisement

ವಿದ್ಯಾರ್ಥಿ ಬಸ್‌ ಪಾಸ್‌ಗೆ ಒಂದಿ ಬಾರಿ 50 ರೂ. ಪಾವತಿಸಿ ನೋಂದಣಿ ಮಾಡಬೇಕು. ವಿದ್ಯಾರ್ಥಿಗಳು ಅರ್ಜಿ ಫಾರಂ ಅನ್ನು ಭರ್ತಿ ಮಾಡಿ, ಅದರಲ್ಲಿ ಆಯಾ ಕಾಲೇಜು/ಶಾಲೆಗಳ ಮುಖ್ಯಸ್ಥರಿಂದ ಸಹಿ ಮಾಡಿಸಿ ಮೊಹರು (ಸೀಲ್‌) ಹಾಕಿಸಿಕೊಂಡು ಮೇಲೆ ಈ ಮೇಲಿನ ಯಾವುದೇ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಬಳಿಕ ತಮ್ಮ ಆಯ್ಕೆಯ ಪ್ಲ್ರಾನ್‌ ಅನ್ನು ಆಯ್ಕೆ ಮಾಡಿ ಅದನ್ನು ಚಲೋ ಕಾರ್ಡ್‌ಗೆ ಲೋಡ್‌ ಮಾಡಬೇಕು. ವಿದ್ಯಾರ್ಥಿ ಪಾಸ್‌ಗಳನ್ನು ಜ. 22ರಿಂದ ನೀಡಲಾಗುತ್ತಿದೆ.

ಸಿಟಿ ಬಸ್‌ ಮಾಲಕರ ಸಂಘದಿಂದ ವಿದ್ಯಾರ್ಥಿಗಳಿಗೆ ವಿಶೇಷ ಯೋಜನೆಯನ್ನು ಜಾರಿಗೆ ತರಲಿದ್ದೇವೆ. ಸ್ಮಾರ್ಟ್‌ ಬಸ್‌ ಪಾಸ್‌ಗಳನ್ನು ಉಪಯೋಗಿಸುವುದರಿಂದ ಬಸ್‌ ಪ್ರಯಾಣವು ನಗದು ರಹಿತವಾಗಿರುತ್ತದೆ. ಕೊರೊನಾ ಸಮಯದಲ್ಲಿ ನಗದು ನಿಯಮಯದಿಂದಾಗುವ ಸಂಪರ್ಕ ಇಲ್ಲವಾಗಿಸಿ ಸುರಕ್ಷೆ ನೀಡುತ್ತದೆ.ದಿಲ್‌ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅದ್ಯಕ್ಷ

 

Advertisement

Udayavani is now on Telegram. Click here to join our channel and stay updated with the latest news.

Next