Advertisement

ಕೂಳೂರು ಸೇತುವೆಯಲ್ಲಿ ನೇತಾಡಿದ ಸಿಟಿಬಸ್‌

11:11 AM Jan 16, 2018 | Team Udayavani |

ಪಣಂಬೂರು: ಸುರತ್ಕಲ್‌ನಿಂದ ಮಂಗಳೂರು ಕಡೆ ಹೋಗುತ್ತಿದ್ದ 59 ನಂಬ್ರದ ಸಿಟಿ ಬಸ್‌ನ ಸ್ಟಿಯರಿಂಗ್‌ ಪ್ಲೇಟ್‌ ತುಂಡಾಗಿ  ಕೂಳೂರು ಸೇತುವೆಯಲ್ಲಿ ನೇತಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ 9.40ಕ್ಕೆ ಸಂಭವಿಸಿದೆ. ಪ್ರಯಾಣಿಕರಿಗೆ ಸಣ್ಣ ಗಾಯಗಳಾ ಗಿದ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.

Advertisement

ಬೆಳಗ್ಗೆ ಸುರತ್ಕಲ್‌ನಿಂದ ಹೊರಟ ಬಸ್‌ ಕೂಳೂರು ತಲುಪುತ್ತಿದ್ದಂತೆ  ಮುಂಭಾ ಗದ ಸ್ಪ್ರಿಂಗ್‌ ಪ್ಲೇಟ್‌ ತುಂಡಾಯಿತಲ್ಲದೆ ಬಸ್‌ ಎಡಬದಿಗೆ ಚಲಿಸಿ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆಯಿತು. ತಡೆಗೋಡೆಯ ರಾಡ್‌  ಮತ್ತು ಸಮೀಪದಲ್ಲೇ ಇದ್ದ ಮರವೊಂದು ಬಸ್ಸಿಗೆ ಆಧಾರವಾಯಿತು.

ಚಾಲಕ ಕೂಳೂರು ಪಂಜಿಮೊಗರಿನ ಮ್ಯಾಕ್ಸಿಂ ರೋಡ್ರಿಗಸ್‌ ಅವರು  ಪ್ರಯಾ ಣಿಕರನ್ನು ಹಿಂಬಾಗಿಲ ಮೂಲಕ ನಿಧಾನವಾಗಿ ಕೆಳಗಿಳಿಯುವಂತೆ ಹೇಳುವ ಮೂಲಕ  ಬಸ್‌ ಮತ್ತಷ್ಟು  ವಾಲು ವುದನ್ನು ತಪ್ಪಿಸಿದರು. ಈ ಭಾಗದಲ್ಲಿ ನದಿಯು ಸಾಧಾರಣ ಪ್ರಮಾಣದಲ್ಲಿ ಆಳವಿದ್ದು, ಕೆಳಗೆ ಬೀಳುತ್ತಿದ್ದರೆ ದೊಡ್ಡ ದುರಂತ ಸಂಭವಿ ಸುತ್ತಿತ್ತು. ಅಪಘಾತವಾಗುವುದು ಖಚಿತವಾದಾಗ  ಚಾಲಕ  ಬಸ್ಸಿನ ವೇಗವನ್ನು  ನಿಯಂತ್ರಿಸಿದ ಪರಿಣಾಮ ಅದು ನೇರವಾಗಿ ಸೇತುವೆಯಿಂದ ಕೆಳಗೆ ಬೀಳುವುದು ತಪ್ಪಿದೆ.

ಅಗ್ನಿಶಾಮಕ ದಳದ ಸಿಬಂದಿ ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸರು  ಕ್ರೇನ್‌ ಮೂಲಕ ಬಸ್ಸನ್ನು ಮೇಲೆತ್ತಿದರು.  
ಅಪಘಾತದಿಂದಾಗಿ ಹೆದ್ದಾರಿ ಯಲ್ಲಿ  ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ತ ವಾಗಿದ್ದು, ಅಗ್ನಿಶಾಮಕ ವಾಹನವೂ ವಾಹನಗಳ ಮಧ್ಯೆ ಸಿಲುಕಿಕೊಂಡಿತು. ಬಸ್ಸನ್ನು ನೋಡಲು ಕುತೂಹಲಿಗಳು ಸಾಲುಗಟ್ಟಿ ಬಂದ ಕಾರಣ ಜನದಟ್ಟಣೆಯೂ  ಹೆಚ್ಚಾಯಿತು. 

ಈ ಸೇತುವೆಯಲ್ಲಿ   ಬೃಹತ್‌ ಹೊಂಡಗಳಿದ್ದು ಸಂಚಾರಕ್ಕೆ ಅಡಚಣೆ ಯಾಗುತ್ತಿವೆ. ಸೋಮವಾರ ಆಳವಾದ   ಹೊಂಡದಲ್ಲಿ ಬಸ್ಸಿನ   ಚಕ್ರ  ಸಿಲುಕಿ ಪ್ಲೇಟ್‌ ತುಂಡಾಗಿದೆ ಎನ್ನಲಾಗಿದೆ.  ಕುಳಾಯಿ ಮತ್ತು ಬೈಕಂಪಾಡಿಯಲ್ಲಿ ತಾತ್ಕಾಲಿಕವಾಗಿ ಹೊಂಡಗಳನ್ನು ಮುಚ್ಚಲಾಗಿದ್ದರೂ ಸೇತುವೆಯ ಮೇಲಿರುವ ಅಪಾಯಕಾರಿ ಹೊಂಡಗಳು ಯಥಾಸ್ಥಿತಿಯಲ್ಲಿವೆ.

Advertisement

ಅತಿ ವೇಗ  ಕಾರಣ?
ಸಿಟಿ ಬಸ್‌ ಚಾಲಕ ಓವರ್‌ ಟೇಕ್‌ ಮಾಡುವ ಭರದಲ್ಲಿ ಬಸ್ಸನ್ನು ಹೊಂಡ ಗುಂಡಿಗೆ ಹಾಕುತ್ತಾ ಹೋಗುತ್ತಿದ್ದಾಗ  ವೈಫಲ್ಯಕ್ಕೆ ಒಳಗಾಗಿ ಅದರ ಪ್ಲೇಟ್‌ ತುಂಡಾಗಿದೆ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಆರೋಪಿಸಿದ್ದಾರೆ.

ವೇಗವನ್ನು ನಿಯಂತ್ರಿಸಿದೆ ಕೂಳೂರು ಸೇತುವೆಯ ಮೇಲೆ ಹೊಂಡಗಳಿದ್ದು ಬಸ್ಸು ಹೊಂಡಕ್ಕೆ ಬಿದ್ದು ಪ್ಲೇಟ್‌ ತುಂಡಾದ ಸದ್ದು ಕೇಳಿಸಿತು. ಸ್ಟಿಯರಿಂಗ್‌ ಜಾಮ್‌ ಆಗಿ ತಿರುಗಿಸಲು ಆಗಲಿಲ್ಲ. ತತ್‌ಕ್ಷಣ ಬ್ರೇಕ್‌ ಹಾಕಿ ಬಸ್ಸನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದೆ. ನಿಧಾನವಾಗಿ ವೇಗ ಕಳೆದುಕೊಂಡು ತಡೆಗೋಡೆಗೆ ಗುದ್ದಿ  ಬಸ್ಸು ನಿಯಂತ್ರಣಕ್ಕೆ ಬಂತು. ಬಳಿಕ ನಿಧಾನವಾಗಿ ಕೆಳಗಿಳಿಯುವಂತೆ ನಾನು ಮತ್ತು ನಿರ್ವಾಹಕ ಪ್ರಯಾಣಿಕರನ್ನು ಕೇಳಿಕೊಂಡೆ.   ತಡೆಗೋಡೆಯ ಕಬ್ಬಿಣದ ತಂತಿ ಹಾಗೂ ಮರ ಬಸ್‌ ಒರಗಿ ನಿಲ್ಲಲು ಸಹಾಯವಾಯಿತು. ಕೆಳಭಾಗದಲ್ಲಿ ಮಣ್ಣು ಮಿಶ್ರಿತ ನೀರಿದ್ದು,  ಬಸ್‌ ಬೀಳುತ್ತಿದ್ದರೆ ಅಪಾಯ ಹೆಚ್ಚಿತ್ತು .
ಮ್ಯಾಕ್ಸಿಂ ರೋಡ್ರಿಗಸ್‌ ಅಪಘಾತಕ್ಕೀಡಾದ ಬಸ್ಸಿ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next