ಹಿಂಪಡೆ ಯಬೇಕೆಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Advertisement
ದೇಶದ ಪ್ರಮುಖ ಕಾರ್ಮಿಕ, ರೈತ ಕೃಷಿ ಕೂಲಿಕಾರರ ಸಂಘಟನೆಗಳು, ಸಿಐಟಿಯು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಜು.25 ರಿಂದ ಆ.8ರ ತನಕ ಪ್ರಚಾರಾಂದೋಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸೋಮವಾರ ಸಮೂಹಿಕ ವಾಗಿ ಪ್ರತಿಭಟನೆ ನಡೆಸಿದರು.
ಅಸಂಘಟಿತ ವಲಯಗಳ ಕಾರ್ಮಿಕರನ್ನು ನೋಂದಣಿಮಾಡಬೇಕು,ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ, ಸಾಮಾಜಿಕ ಸುರಕ್ಷೆ, ಪಿಂಚಣಿ ಖಾತ್ರಿ ಪಡಿಸಿ, ಕೊರೊನಾ ಸಂಕಷ್ಟದಲ್ಲಿನ ಎಲ್ಲಾ ಕಾರ್ಮಿಕರಿಗೆ ಆಹಾರ ಕಿಟ್ ನೀಡಬೇಕು ಎಂದು ಉಪತಹಶೀಲ್ದಾರ್ ಶೋಭಾ ಮೂಲಕ
ಪ್ರಧಾನಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನರಸಮ್ಮ, ಕಾರ್ಯದರ್ಶಿ ನರಸಿಂಹಪ್ಪ, ಕಾಮ್ರೇಡ್ ಲಕ್ಷ್ಮೀನಾರಾಯಣ,
ಮುನಿರಾಜು, ನಾಗಾ, ಕೃಷ್ಣಪ್ಪ ಪಾಲ್ಗೊಂಡಿದರು.