ನವದೆಹಲಿ: ಫ್ರಾನ್ಸ್ ವಾಹನ ತಯಾರಿಕಾ ಕಂಪೆನಿ ಸಿಟ್ರೊಯೆನ್ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಸಿಟ್ರೊಯೆನ್ ಇ-ಸಿ3 ಬಿಡುಗಡೆ ಮಾಡಿದೆ.
ಇದು ಐಸಿಇ ಚಾಲಿತ ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. 29.2 ಕೆಡಬ್ಲ್ಯೂಎಚ್ ಸಾಮರ್ಥಯದ ಬ್ಯಾಟರಿ ಹೊಂದಿರುವ ಕಾರು, ಒಮ್ಮೆ ಚಾರ್ಚ್ ಮಾಡಿದರೆ 320 ಕಿ.ಮೀ. ಚಲಿಸಲಿದೆಯಂತೆ. 60kmph ವೇಗವನ್ನು 6.8 ಸೆಕೆಂಡುಗಳಲ್ಲಿ ಮತ್ತು 107kmph ಗರಿಷ್ಠ ವೇಗವನ್ನು ಹೊಂದಿದೆ.
ಲೈವ್, ಫೀಲ್, ಫೀಲ್ ವೈಬ್ ಪ್ಯಾಕ್ ಮತ್ತು ಫೀಲ್ ಡ್ಯುಯಲ್ ಟೋನ್ ವೈಬ್ ಪ್ಯಾಕ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿರಲಿದ್ದು ಆರಂಭಿಕ ಎಕ್ಸ್‌ಶೋರೂಮ್ ಬೆಲೆ 11.50 ಲಕ್ಷ ರೂ. ಇದೆ. ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದ್ದು ಆಸಕ್ತ ಗ್ರಾಹಕರು ರೂ.25,000 ಮುಂಗಡ ಹಣವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ಅಷ್ಟೇ ಅಲ್ಲದೆ ದೇಶಾದ್ಯಂತ 25 ನಗರಗಳ ಶೋರೂಮ್‌ಗಳಲ್ಲಿ ಸಿಟ್ರೊಯೆನ್ ಕಾರು ಲಭ್ಯವಿರಲಿದೆ.
ಇದನ್ನೂ ಓದಿ: ಟರ್ಕಿಯಯಲ್ಲಿ ಮತ್ತೆ 5.6 ತೀವ್ರತೆಯ ಭೂಕಂಪ; ಹಲವು ಕಟ್ಟಡಗಳ ಕುಸಿತ