ಮೂಡುಬಿದಿರೆ: ನೆಹರೂ ಕಾಲದಿಂದಲೂ ಪೌರತ್ವ ಕುರಿತಾಗಿ ಅನೇಕ ತಿದ್ದುಪಡಿಗಳಾಗಿವೆ. ಆದರೆ ಯಾವುದೇ ಸಮುದಾಯವನ್ನು ಗುರಿಯಾಗಿರಿಸಿಕೊಂಡು ತಿದ್ದುಪಡಿ ಆದದ್ದಲ್ಲ. ಈಗ ಕೇಂದ್ರ ಸರಕಾರ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ. ಇದನ್ನು ಜಾರಿಗೊಳಿಸಲು ಯಾರಿಂದಲೂ ಸಾಧ್ಯ ವಿಲ್ಲ, ದೇಶವನ್ನು ಒಡೆದು ಆಳಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.
ಮೂಡುಬಿದಿರೆಯಲ್ಲಿ ಸಂವಿಧಾನ ರಕ್ಷಣ ಸಮಿತಿ ಗುರುವಾರ ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಎನ್‌ಆರ್‌ಸಿ/ಸಿಎಎ ಮತ್ತು ಎನ್‌ಪಿಆರ್ ಕಾಯ್ದೆಗಳ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನ ಸಭೆಯಲ್ಲಿ ಮಾತನಾಡಿದ ಅವರು, ಈಗಿನ ಪರಿಸ್ಥಿತಿ ನಿರ್ಮಾಣವಾಗಿರುವುದು ಕಾಂಗ್ರೆಸ್‌ನವರಿಂದ ಎಂದು ಬಿಜೆಪಿ ಆಪಾದಿಸುತ್ತಿದೆ, ನಿಜಕ್ಕಾದರೆ ಇದೆಲ್ಲ ಮೋದಿ ಮತ್ತು ಅಮಿತ್ ಶಾ ಅವರ ಹುನ್ನಾರ. ಹಾಗಿದ್ದರೂ, ಕೇಂದ್ರವೇ ಈ ಕಾಯ್ದೆಯನ್ನು ಜಾರಿಗೆ ತರಲಾಗದು. ದೇಶದ ರಾಜ್ಯಗಳ ಮೂರನೇ ಎರಡರಷ್ಟು ಭಾಗ ಒಪ್ಪಿದರೆ ಮಾತ್ರ ಈ ಕಾಯ್ದೆಯನ್ನು ಜಾರಿಗೊಳಿಸಲು ಸಾಧ್ಯ. ಕರ್ನಾಟಕದ ಯಡಿಯೂರಪ್ಪ ಹೊರತು ಯಾವ ರಾಜ್ಯ ಈ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ? ಇಲ್ಲ. ಈ ಕಾಯ್ದೆಯನ್ನು ತಕ್ಷಣ ಸರಕಾರ ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.
ಹೋರಾಟಗಾರ ಮಹೇಂದ್ರಕುಮಾರ ಮಾತನಾಡಿ, 30 ವರ್ಷಗಳ ಹಿಂದೆ ಇದ್ದ ಸಾಮರಸ್ಯ ಈಗ ಮಾಯವಾಗುತ್ತಿರುವುದಕ್ಕೆ ಕೆಲವು ಹಿಂದೂ ಸಂಘಟನೆಗಳು ತಮ್ಮೊಳಗಿನ ಸಮಸ್ಯೆಗಳನ್ನು ಬದಿಗಿಟ್ಟು ಕೇವಲ ಮುಸ್ಲಿಮರ ವಿರುದ್ಧ ಹೋರಾಟ ನಡೆಸಲು ಹಿಂದೂಗಳನ್ನು ಪ್ರೇರೇಪಿಸುತ್ತಿರುವುದೇ ಕಾರಣ. ಮಂಗಳೂರು ಗೋಲಿಬಾರ್‌ನಲ್ಲಿ ಮೃತ ಪಟ್ಟ ವರ ಕುಟುಂಬಗಳಿಗೆ ಸೂಕ್ತ ಪರಿ ಹಾರ ನೀಡಬೇಕು ಎಂದು ಆಗ್ರಹಿಸಿದರು.
ಪೇಟೆಯ ಮಸೀದಿಯ ಬಳಿಯಿಂದ ಹೊರಟ ಮೆರವಣಿಗೆಯಲ್ಲಿ ಪಾಲ್ಗೊಂಡ ಸುಮಾರು 4,000 ಮಂದಿ ಪ್ರತಿಭಟನಕಾ ರರು ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು “ಆಝಾದೀ, ಆಝಾದೀ, ನಾವಿಲ್ಲೇ ಹುಟ್ಟಿ ಹೆವು, ನಾವಿಲ್ಲೇ ಬೆಳೆದಿಹೆವು, ಇದು ನಮ್ಮ ಮಣ್ಣು, ನಾವಿಲ್ಲೇ ಮಣ್ಣಾಗುವೆವು. ನೀವು ನಮ್ಮನ್ನು ಜೈಲಿಗಟ್ಟುವಿರೇ, ಗೋಲಿ ಬಾರ್ ಮಾಡುವಿರೇ, ಮಾಡಿ, ನಾವಿಲ್ಲೇ ಸಾಯುವೆವು. ಇದು ನಮ್ಮ ದೇಶ ಯಾರಿಂದಲೂ ನಮ್ಮನ್ನು ಹೊರಹಾಕಲು ಸಾಧ್ಯವಿಲ್ಲ, ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕ, ಜೆಡಿಎಸ್ ಕಚೇರಿ ಹಿಂಭಾಗದ ವಿಶಾಲ ಜಾಗದಲ್ಲಿ ಪ್ರತಿ ಭಟನ ಸಭೆ ನಡೆಯಿತು. ಸರ್ಕಲ್ ಇನ್‌ಸ್ಪೆಕ್ಟರ್ ದಿನೇಶ್ ಕುಮಾರ್ ಹಾಗೂ ಸಾಕಷ್ಟು ಸಂಖ್ಯೆ ಯಲ್ಲಿದ್ದ ಪೊಲೀಸರು ಹತ್ತಿರದಲ್ಲೇ ರಾಷ್ಟ್ರೀಯ ಕ್ರೀಡಾಕೂಟದ ಮೆರವಣಿಗೆ ಸಾಗಿ ಬಂದರೂ ಯಾವುದೇ ಗೊಂದಲಕ್ಕೆ ಅವಕ ಾಶ ವಾಗದೆ, ಎರಡೂ ಕಾರ್ಯ ಕ್ರಮ ಗಳು ಅತ್ಯಂತ ಸಂಯಮದಿಂದ ನಡೆದವು.
ಸಭೆಯಲ್ಲಿ ದಿನೇಶ್ ಹೆಗ್ಡೆ ಉಳೆಪಾಡಿ, ಮೂಡುಬಿದಿರೆ ಮಸೀದಿ ಮುಖ್ಯಗುರು ಮುಸ್ತಫಾ ಯಾಮಾನಿ, ಎಸ್‌ಕೆಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ , ಎ.ಕೆ. ಅಶ್ರಫ್, ಮೂಡುಬಿದಿರೆ ಚರ್ಚ್‌ನ ವಂ| ಪೌಲ್ ಸಿಕ್ವೇರ, ಸಿ.ಎಚ್. ಗಫೂರ್, ಶಿವಾನಂದ ಪಾಂಡ್ರು, ಅಬ್ದುಲ್ ರಹಿಮಾನ್, ಉಸ್ಮಾನ್ ಸೂರಿಂಜೆ, ಪಾರ್ಕರ್ ಶರೀಫ್ ಸಾಹೇಬ್, ಅಬುಲಾಲ್ ಪುತ್ತಿಗೆ, ಉಸ್ಮಾನ್ ತೋಡಾರ್, ಕೋಲಾರದ ರಫೀಕ್ ಹುದವಿ ಮೊದಲಾದವರು ಪಾಲ್ಗೊಂಡಿದ್ದರು.
ಯಾಸೆರ್ ಉಮರ್ ತೋಡಾರು ಕಾರ್ಯಕ್ರಮ ನಿರೂಪಿಸಿದರು.