Advertisement

ಪಾಠ ಕಲಿಸುತ್ತಿವೆ ಮಲಿನ ನಗರಗಳು

09:12 AM Jun 06, 2019 | sudhir |

ಪರಿಸರ ದಿನ ಬಂತೆಂದರೆ ಸಾಕು, ಶಾಲೆಗಳು, ಕಚೇರಿಗಳು ಹಾಗೂ ಸಂಘ – ಸಂಸ್ಥೆಗಳಲ್ಲಿ ಗಿಡ ನೆಡುವ, ಪರಿಸರ ಶುಚಿತ್ವದ ಕೆಲಸಗಳು ಶುರುವಾಗುತ್ತವೆ. ತಿಂಗಳು ಕಳೆಯುವಷ್ಟರಲ್ಲಿ ಸ್ವತ್ಛತೆಯ ಕಾರ್ಯ ಹಳ್ಳ ಹಿಡಿಯುತ್ತದೆ. ನೆಟ್ಟ ಗಿಡಗಳು ಬಾಡಿ ಹೋಗುತ್ತವೆ. ಕಸ, ವಾಹನಗಳು, ಕಾರ್ಖಾನೆಗಳ ಹೊಗೆ, ಕಲುಷಿತ ನೀರು, ಅಂಗಡಿ ಮುಂಗಟ್ಟುಗಳ ತ್ಯಾಜ್ಯ, ದುರ್ವಾಸನೆ ಎಲ್ಲವೂ ಮತ್ತೆ ನಮ್ಮ ಪರಿಸರವನ್ನು ಹದಗೆಡಿಸುತ್ತವೆ.

Advertisement

ನಮ್ಮ ಪರಿಸರವನ್ನು ಗಮನಿಸಿದರೆ ಸಾಕು, ಶುಚಿತ್ವದ ಕುರಿತಾಗಿ ನಮಗಿರುವ ಕಾಳಜಿ ತಿಳಿಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆ 2018ರಲ್ಲಿ ಜಗತ್ತಿನ 30 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 22 ನಗರಗಳನ್ನು ಸೇರಿಸಿರುವುದು ನಮ್ಮಲ್ಲಿ ಸ್ವತ್ಛತೆಯ ಜಾಗೃತಿ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಸೂಚಿಸುತ್ತದೆ. ಎರಡನೇ ಸ್ಥಾನದಲ್ಲಿ ಚೀನದ ಐದು ನಗರಗಳನ್ನು ಗುರುತಿಸಲಾಗಿದೆ.

ದಕ್ಷಿಣ ಏಷ್ಯದಲ್ಲೇ ಪರಿಸರ ಮಾಲಿನ್ಯ ಅತೀ ಹೆಚ್ಚು ಎಂಬುದು ಸಂಶೋಧನ ವರದಿಗಳಿಂದ ರುಜುವಾತಾಗಿದೆ. ಭಾರತದ ಗುರುಗ್ರಾಮ, ಗಾಝಿಯಾಬಾದ್‌, ಫ‌ರೀದಾಬಾದ್‌, ಬಿವದಿ, ನೋಯ್ಡಾ, ಪಟನಾ, ಲಕ್ನೋ ನಗರಗಳನ್ನು ಗರಿಷ್ಠ ಕಲುಷಿತ ನಗರಗಳ ಪಟ್ಟಿಗೆ ಸೇರಿಸಲಾಗಿದೆ. ಚೀನದ ಹಾಟನ್‌, ಪಾಕಿಸ್ಥಾನದ ಫೈಸಲಾಬಾದ್‌ ನಗರಗಳೂ ಈ ಪಟ್ಟಿಯಲ್ಲಿ ಬರುತ್ತವೆ.

ಮಾಲಿನ್ಯಕ್ಕೇನು ಕಾರಣ?
ಬಳಸಿ ಬೇಡವಾದ ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವುದು, ಬಯಲು ಶೌಚ, ಸಿಕ್ಕಲ್ಲೆಲ್ಲ ಕಸ ಚೆಲ್ಲುವುದು, ಸ್ನಾನ, ಬಟ್ಟೆ ಒಗೆಯುವುದು, ವಾಹನ ತೊಳೆಯುವುದು, ಪ್ರಾಣಿಗಳ ಮೈ ತೊಳೆಯಲೂ ನದಿ, ಕೆರೆಗಳನ್ನೇ ಬಳಸುವುದು, ಸತ್ತ ಪ್ರಾಣಿಗಳ ಶವಗಳನ್ನು ನೀರಿಗೆಸೆಯುವುದು, ಕಾರ್ಖಾನೆಗಳೂ ತ್ಯಾಜ್ಯವನ್ನು ನದಿಗಳಿಗೆ ಹರಿಯಬಿಡುವುದು, ವಾಹನಗಳು ದೊಡ್ಡ ಶಬ್ದ ಹಾಗೂ ಕರ್ಕಶ ಹಾರ್ನ್ ಬಳಸುವುದು, ಅತಿಯಾದ ಹೊಗೆ ಉಗುಳುವ ಯಂತ್ರಗಳು ಪರಿಸರ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ.

ಇದು ಹೀಗೆಯೇ ಮುಂದುವರಿದರೆ 22 ಅಲ್ಲ, ಎಲ್ಲ 30 ನಗರಗಳೂ ಭಾರತದಿಂದಲೇ ಈ ಪಟ್ಟಿಗೆ ಸೇರಿದರೆ ಅಚ್ಚರಿ ಏನೂ ಇಲ್ಲ. ಈಗಲೇ ಎಚ್ಚೆತ್ತುಕೊಂಡು ನಮ್ಮ ಕೈಲಾದ ಮಟ್ಟಿನಲ್ಲಿ ಪರಿಸರ ರಕ್ಷಣೆಯ ಕೈಂಕರ್ಯ ಮಾಡಬೇಕಿದೆ. ಇದು ಪರಿಸರವನ್ನಲ್ಲ, ನಮ್ಮನ್ನೇ ನಾವು ರಕ್ಷಿಸಿಕೊಳ್ಳುವ ಕ್ರಮ.
ಮಾನವನ ದುರಾಸೆಯ ಫ‌ಲವಾಗಿ ಅರಣ್ಯ ನಾಶವಾಗುತ್ತಿದೆ. ಮಳೆ ಸುರಿಯುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಗರಿಷ್ಠ ಮಳೆ ಸುರಿಯುವ ಪ್ರದೇಶಗಳಲ್ಲೂ ಮೂರು ತಿಂಗಳು ಕಳೆಯುವಷ್ಟರಲ್ಲಿ ಅಂತರ್ಜಲ ಪಾತಾಳ ಸೇರುತ್ತಿದೆ. ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ.

Advertisement

ಈ ಪರಿಸ್ಥಿತಿಯಲ್ಲಿ ಜಗತ್ತನ್ನು ಕಾಪಾಡಿಕೊಳ್ಳಬೇಕಾದರೆ ನಾವು ಮೊದಲು ಬದಲಾಗಬೇಕು. ಪ್ರಕೃತಿಯನ್ನು ಉಳಿಸುವ ಮೂಲಕ ಮುಂದಿನ ಜನಾಂಗಕ್ಕೂ ಅದನ್ನು ಕಾಪಿಡಬೇಕು. ವಿಶ್ವ ಪರಿಸರ ದಿನದಂದು ಪರಿಸರ ಸಂರಕ್ಷಣೆಯ ಮೂಲಕ ಜಗತ್ತನ್ನು ಕಾಪಡುವ ಗುರಿಯನ್ನಿಟ್ಟುಕೊಂಡು ನಾವು ಇನ್ನಾದರೂ ಬದಲಾಗೋಣ.

ನಿಮಗೆ ಗೊತ್ತಿಲ್ಲದ ಸಂಗತಿಗಳು!
-   ಭೂಮಿ ದಲ್ಲಿನ ಶೇ. 3ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಉಳಿದ ಶೇ. 97 ಭಾಗ ನೀರು ಉಪ್ಪಾಗಿದೆ. ಭೂಮಿಯ ಅರ್ಧದಷ್ಟು ನೀರು ಮಾತ್ರ ಅಂತರ್ಜಲದ ರೂಪದಲ್ಲಿದ್ದು, ಉಳಿದ ಭಾಗ ಆವಿಯ ರೂಪದಲ್ಲಿದೆ.
-   700 ಮಿಲಿಯನ್‌ಗೂ ಅಧಿಕ ಮಂದಿ ಸದ್ಯ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. 6ರಿಂದ 8 ಮಿಲಿಯನ್‌ ಜನರು ನೀರಿನಿಂದ ಹರಡುವ/ ಕಲುಷಿತ ನೀರಿನಿಂದ ಬರುವ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ.
-   ಕೃಷಿಗೆ ಶೇ. 70ರಷ್ಟು ನೀರನ್ನು ಬಳಕೆಯಾಗುತ್ತದೆ. ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇದು ಶೇ. 90ರಷ್ಟಿದೆ.
-   ಸೂರ್ಯನ ಶಾಖ ಭೂಮಿಯನ್ನು ನೇರವಾಗಿ ತಲುಪದಂತೆ ತಡೆಯುವ ಓಝೊàನ್‌ ಪದರ ಅಪಾಯ ದಲ್ಲಿದೆ. ಅದರ ರಂಧ್ರಗಳು ವಿಸ್ತರಿಸುತ್ತಿವೆ. ಸದ್ಯ 29 ಮಿಲಿಯನ್‌ ಚದರ ಅಡಿಯಷ್ಟು ದೊಡ್ಡ ರಂಧ್ರವಾಗಿದೆ. ಮುಂದಿನ 50 ವರ್ಷಗ ಳಲ್ಲಿ ಓಝೊàನ್‌ ಪರದೆ ಸಂಪೂರ್ಣ ತೂತಾಗಲಿದೆ.
-   ಇತ್ತೀಚೆಗಿನ 200 ವರ್ಷಗಳಲ್ಲಿ ನಾವು 2.3 ಬಿಲಿಯನ್‌ ಟನ್‌ ಇಂಗಾಲದ ಡೈ ಆಕ್ಸೆ„ಡನ್ನು ಪರಿಸರಕ್ಕೆ ಬಿಟ್ಟಿದ್ದೇವೆ. ಈ ಪೈಕಿ ಅರ್ಧದಷ್ಟು ಕಳೆದ 35ರಿಂದ 50 ವರ್ಷಗಳಲ್ಲೇ ಸೇರಿದೆ.
-   ಅಂಟಾರ್ಟಿಕಾದಲ್ಲಿರುವ ಮಂಜುಗಳು ಅಟ್ಲಾಂಟಿಕ್‌ ಸಾಗರದಲ್ಲಿರುವ ನೀರಿಗಿಂತ ಜಾಸ್ತಿ. ಎಲ್ಲ ಮಂಜು ಕರಗಿದರೆ ಸಮುದ್ರದ ಎತ್ತರ 66 ಮೀಟರ್‌ ಹೆಚ್ಚಾಗಲಿದೆ.
-   ವಿಶ್ವದಲ್ಲಿ ಪ್ರತಿ ಸೆಕೆಂಡ್‌ಗೆ 1.60 ಲಕ್ಷ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಬಳಸುತ್ತಾರೆ. ಒಂದು ದಿನ ಪರಿಸರ ಸೇರುವ ಪ್ಲಾಸ್ಟಿಕ್‌ ಪ್ರಮಾಣ ಹಲವು ಟನ್‌.
-   ಪ್ರತಿ ದಿನ 27 ಸಾವಿರ ಮರಗಳನ್ನು ಟಿಶ್ಯೂ ಪೇಪರ್‌ ತಯಾರಿಸಲು ಕಡಿಯಲಾಗುತ್ತದೆ. ಎಲ್ಲ ಬಗೆಯ ಪೇಪರ್‌/ಕಾಗದಗಳನ್ನು ಮರುಬಳಕೆ ಮಾಡಿದರೆ ಹಲವು ಸಾವಿರ ಮರಗಳನ್ನು ಸಂರಕ್ಷಿಸಬಹುದಾಗಿದೆ.
-   ಗಾಜು ಮಣ್ಣನ್ನು ಸೇರಿದರೆ 4,000 ಸಾವಿರಕ್ಕೂ ಹೆಚ್ಚು ವರ್ಷ ಅದು ಮೂಲ ಸ್ವರೂಪವನ್ನು ಬಿಟ್ಟು ಕೊಡುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next