Advertisement

ಸರ್ಕಲ್‌ ಅಭಿವೃದ್ಧಿ ಸರದಾರ ಸಿಪಿಐ ಸರ್ದಾರ್‌

07:25 PM Jan 05, 2021 | Team Udayavani |

ಮಧುಗಿರಿ: ತಾಲೂಕು ಏಕಶಿಲಾ ಪರ್ವತ ಸೇರಿದಂತೆ ಅನೇಕ ವಿಷಯಗಳಿಂದಮಧುಗಿರಿ ತನ್ನ ವೈಶಿಷ್ಯವನ್ನು ಹೆಚ್ಚಿಸಿಕೊಂಡಿದೆ. ಆದರೆ, ಇಲ್ಲಿನ ತಾಲೂಕುಆಡಳಿತ ಮಾಡದಿರುವ ಕೆಲಸವನ್ನು ಸರ್ಕಲ್‌ ಇನ್ಸ್‌ ಪೆಕ್ಟರ್‌ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

Advertisement

ಈ ಕ್ಷೇತ್ರವು ಸುತ್ತಲಿನ ಪಾವಗಡ, ಹಿಂದೂಪುರ, ಗೌರಿಬಿದನೂರು, ಶಿರಾಹಾಗೂ ತುಮಕೂರು ಮಧ್ಯದಲ್ಲಿದ್ದು,ಸಂಚಾರರಿಗೆ ಇಲ್ಲಿನ ಮುಖ್ಯ 4 ವೃತ್ತಗಳುಹಿಂದೆ ಶಿಥಿಲವಾಗಿದ್ದವು. ನಿತ್ಯ ಅಪಘಾತದವಲಯವಾಗಿ ಮಾರ್ಪಟ್ಟಿತ್ತು. ಸರ್ದಾರ್‌ಅವರ ಆಗಮನದ ಬಳಿಕ ಈಗ ಈ 4ವೃತ್ತಗಳಲ್ಲಿ 3 ವೃತ್ತಗಳು ಸಂಚಾರಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿದೆ.

ಪಟ್ಟಣದ ತುಮಕೂರು ರಸ್ತೆಯಲ್ಲಿ ಉಪವಿಭಾಗದ ಮೊದಲ ಉಪವಿಭಾಗಾಧಿಕಾರಿಮಾಸ್ತಿ ವೆಂಕಟೇಶ ಅಯ್ನಾಂಗಾರ್‌ ವೃತ್ತ, ಶಿರಾ ಗೇಟ್‌ನಲ್ಲಿ ಕ್ಷೇತ್ರವನ್ನಾಳಿದ ನಾಡ ಪ್ರಭು ರಾಜ ಚಿಕ್ಕಪ್ಪಗೌಡ ವೃತ್ತ, ಪಾವಗಡ ವೃತ್ತದಲ್ಲಿ ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್‌ ವೃತ್ತ ಹಾಗೂ ಹಿಂದೂಪುರಕ್ಕೆ ತೆರಳುವ ರಸ್ತೆಯಲ್ಲಿರುವ ಟಿವಿವಿ ವೃತ್ತವನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ.

ಈ ಹಿಂದಿನಿಂದಲೂ ತಾಲೂಕು ಆಡಳಿತ, ಶಾಸಕರು, ಜನಪ್ರತಿನಿಧಿಗಳು ಇಂಥ ಕೆಲಸಕ್ಕೆ ಕೈ ಹಾಕದಿರುವುದು ಶೋಚನೀಯ. ಆದರೆಸರ್ದಾರ್‌ರವರು ಇತರರ ನೆರವಿನಿಂದ ಈಕೆಲಸವನ್ನು ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಸ್ವಂತ ಖರ್ಚಿನಲ್ಲೇ ಕಾರ್ಯಸಾಧನೆ : ಸದ್ಯ 4 ವೃತ್ತಗಳನ್ನು ಕೆಲವು ಸ್ನೇಹಿತರು ಹಾಗೂಯುವಕರ ನೆರವಿನಿಂದ ಸ್ವಂತ ಖರ್ಚಿನಲ್ಲೇ ಅಭಿವೃದ್ಧಿಪಡಿಸುತ್ತಿರುವ ಸಿಪಿಐ ಸರ್ದಾರ್‌ಈಗ ಪಟ್ಟಣದಿಂದ ಗೌರಿಬಿದನೂರು,ಹಿಂದೂಪುರಕ್ಕೆ ತೆರಳುವ ರಸ್ತೆಯಲ್ಲಿರುವನೃಪತುಂಗ ವೃತ್ತ ಎಂಬ 5ನೇ ಸರ್ಕಲ್‌ನ್ನುಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ಪ್ರತಿಕ್ರಿಯಿಸಿದ ಅವರು, ಇದು ನಾನು ಮಾಡುತ್ತಿರುವ 5ನೇ ಸರ್ಕಲ್‌ ಕಾರ್ಯ. ಇದನ್ನು ಸ್ವಂತ ಖರ್ಚಿನಿಂದಲೇ ಕೆಲ ಸ್ನೇಹಿತರ ಸಹಕಾರದಿಂದ ಅಭಿವೃದ್ಧಿಪಡಿಸುತ್ತಿದ್ದು,ಪುರಸಭೆ ಹಾಗೂ ಲೋಕೋಪಯೋಗಿಇಲಾಖೆ, ಶಾಸಕರಿಂದ ಯಾವುದೇಅನುದಾನ ಪಡೆದಿಲ್ಲ. ಸ್ನೇಹಿತರು ಹೆಚ್ಚಿನ ಸಹಕಾರ ನೀಡಿದರೆ ಪಟ್ಟಣದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತೇನೆ. ಒಂದು ವೃತ್ತವನ್ನು ನಿಯಮದಂತೆಅಭಿವೃದ್ಧಿ ಪಡಿಸಿದರೆ 4 ಪೊಲೀಸರುಮಾಡುವ ಕೆಲಸ ಒಂದು ಸಂಚಾರಿನಿಯಮವನ್ನು ಅಳವಡಿಸಿಕೊಂಡಸಧೃಡ ವೃತ್ತ ಮಾಡುತ್ತದೆ ಎಂಬುದು ನನ್ನ ನಂಬಿಕೆ.

Advertisement

ಸಿಪಿಐ ಸರ್ದಾರ್‌ ಕಾರ್ಯ ಶ್ಲಾಘನೀಯ. ಈ ಕಾರ್ಯ ತಾತ್ಕಾಲಿಕವಾಗಿದ್ದು, ಇದಕ್ಕಾಗಿ ಶಾಶ್ವತವಾದ ಕಾರ್ಯ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕಿದೊಡನೆಪಟ್ಟಣದ 5 ಪ್ರಮುಖ ವೃತ್ತಗಳನ್ನು ಆಧು ನಿಕವಾಗಿ ಅಭಿವೃದ್ಧಿಪಡಿಸ ಲಾಗುವುದು. ಎಂ.ವಿ.ವೀರಭದ್ರಯ್ಯ, ಶಾಸಕರು

ಸಿಪಿಐ ಸರ್ದಾರ್‌ ಅವರ ಕಾರ್ಯ ಇಲಾಖೆಯನ್ನು ನೋಡುವ ಜನರ ದೃಷ್ಟಿಯನ್ನುಬದಲಾಯಿಸುತ್ತದೆ. ಜನಸ್ನೇಹಿ ಅಭಿವೃದ್ಧಿ ಕಾರ್ಯಕ್ಕೆ ಇಲಾಖೆಯಿಂದಸಂಪೂರ್ಣ ಸಹಕಾರ ಸಿಗಲಿದೆ. ಎಂ.ಪ್ರವೀಣ್‌, ಡಿವೈಎಸ್ಪಿ, ಮಧುಗಿರಿ

Advertisement

Udayavani is now on Telegram. Click here to join our channel and stay updated with the latest news.

Next