Advertisement

ಮಲ್ಲಾಡಿಹಳ್ಳಿ ಸಾಧಕ ರಾಘವೇಂದ್ರ ಸ್ವಾಮಿಗಳ ಕುರಿತು ಸಿನಿಮಾ

03:57 AM May 26, 2020 | Lakshmi GovindaRaj |

ಕನ್ನಡದಲ್ಲಿ ಈಗಾಗಲೇ ಅನೇಕ ಸಾಧಕರ ಕುರಿತು ಸಿನಿಮಾಗಳು ಮೂಡಿಬಂದಿವೆ. ಆ ಸಾಲಿಗೆ ಈಗ ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತಾದ “ತಿರುಕ ‘ ಶೀರ್ಷಿಕೆಯ ಚಿತ್ರವೂ ಸೇರಿದೆ. ಹೌದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡ ಮಹತ್ವ ಪಡೆದಿದೆ. ನಾಡಿನ ದೊಡ್ಡ ಸಾಧಕರ ಪೈಕಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳು ಕೂಡ ದೊಡ್ಡ ಸಾಧಕರು. ಅವರ ಜೀವನ ಚರಿತ್ರೆ ಕುರಿತಂತೆ ಈಗ ಸಿನಿಮಾ ಆಗುತ್ತಿದೆ.

Advertisement

ಅಂದಹಾಗೆ, ಈ ಚಿತ್ರವನ್ನು ರಾಧಾಕೃಷ್ಣ ಪಲ್ಲಕ್ಕಿ ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ತಿರುಕರ ಜೋಳಿಗೆ ಪವಾಡವನ್ನು ಸಿನಿಮಾ ಮೂಲಕ ಅಳವಡಿಸಿ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಪಲ್ಲಕ್ಕಿ. ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವರು ಮಾಡಿದ ಸಾಧನೆ ಅಪಾರ. ಆ ಕುರಿತು ಸಿನಿಮಾ ಮೂಲಕ ಹೇಳುವ ಪ್ರಯತ್ನ ಮಾಡಿರುವ ನಿರ್ದೇಶಕರು, ಇದಕ್ಕೂ ಮುನ್ನ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ ಫೆಬ್ರವರಿಯಲ್ಲೇ ಶ್ರೀಗಳ ಕುರಿತು ಒಂದಷ್ಟು ಅಧ್ಯಯನ ನಡೆಸಿದ್ದಾರೆ. ಇನ್ನು, ಈ ತಿರುಕರ ಜೊತೆ ಕೆಲಸ ಮಾಡಿದ ಕವಿಗಳು, ಅಧಿಕಾರಿಗಳು,ಯೋಗಪಟುಗಳು, ಕುಸ್ತಿ ಪಟುಗಳು, ಆಯುರ್ವೇದ ಚಿಕಿತ್ಸೆಯಲ್ಲಿ ವೃತ್ತಿ ನಿರತ ವೈದ್ಯರು, ಇನ್ನೂ ಅನೇಕರ ವಿಡಿಯೋ ಸಂದರ್ಶನಗಳು ಹಾಗೂ ತಿರುಕ ಮೂಲವಾಗಿರುವ ಬಾಕೂರು, ಕುಂದಾಪುರ, ಭಟ್ಕಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಶಿಷ್ಯರನ್ನೂ ನಿರ್ದೇಶಕರು ಭೇಟಿ ಮಾಡಿ ಅವರ ಹೇಳಿಕೆಗಳನ್ನು ದಾಖಲಿಸಿ ಕಥೆ ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಸಂಯೋಜನೆ ಕೂಡ ಆರಂಭಗೊಂಡಿದೆ.

ಲಾಕ್‌ಡೌನ್‌ ಮುಗಿದ ಬಳಿಕ ಈ ಕುರಿತು ಇನ್ನಷ್ಟು ಮಾಹಿತಿಗಳು ಹೊರಬರಲಿವೆ. ನಿರ್ದೇಶಕರು ಈಗಾಗಲೇ ಎರಡು ಚಿತ್ರಗಳನ್ನು ನಿರ್ದೇಶಿಸಿ, ಬಿಡುಗಡೆಗೆ ಸಜ್ಜು ಮಾಡಿದ್ದಾರೆ. ಆ ಪೈಕಿ “ಬರಗೂರು’ ಮತ್ತ “ಮದಕರಿಪುರ’ ಚಿತ್ರಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿವೆ. ಸದ್ಯಕ್ಕೆ ರಾಧಾಕೃಷ್ಣ ಪಲ್ಲಕ್ಕಿ ಅವರು ಈ “ತಿರುಕ ‘ ಜೋಳಿಗೆಯ ಪವಾಡ ಸಿನಿಮಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next