ಮಣಿಪಾಲ: ಸಿನೆಮಾ ಪ್ರಮುಖ ಕಲೆಯಾಗಿದ್ದು, ಇದು ಕೇವಲ ಮನೋರಂಜನೆ ಮಾಧ್ಯಮವಲ್ಲ ಮತ್ತು ಯಾವುದೋ ವಿಷಯದ ಪ್ರಚಾರ ವಸ್ತುವಲ್ಲ .ಸತ್ಯಜಿತ್ ರೇ ಅವರು ಈ ತತ್ವದ ಮೇಲೆ ಸಿನೆಮಾಗಳನ್ನು ರೂಪಿಸುತ್ತಿದ್ದರು ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಜನ್ಮಶತಮಾನೋತ್ಸವ ನೆನಪಿಗಾಗಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್ ವತಿಯಿಂದ ಆಯೋಜಿಸಲಾದ “ರೇ’ ಚಲನಚಿತ್ರೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯಜಿತ್ ರೇ ಅವರು ಚಿತ್ರ ನಿರ್ದೇಶಕ ಮಾತ್ರ ಆಗಿರಲಿಲ್ಲ. ಸಂಗೀತಗಾರ, ಚಿತ್ರಕಲಾವಿದ, ವಿನ್ಯಾಸಗಾರ ಹೀಗೆ ಬಹುಮುಖ ಪ್ರತಿಭೆ ಅವರಲ್ಲಿತ್ತು. ಜಗತ್ತಿನಲ್ಲಿ ಚಾರ್ಲಿ ಚಾಪ್ಲಿನ್ ಮತ್ತು ಸತ್ಯಜಿತ್ ರೇ ಇವರಿಬ್ಬರೇ ಪರಿಪೂರ್ಣ ನಿರ್ದೇ ಶಕರಾಗಿದ್ದರು. ಸಿನೆಮಾಗಳಲ್ಲಿ ವೈಯಕ್ತಿಕ ಅಭಿಪ್ರಾಯಗಳನ್ನು ಹೇರಿಕೆ ಮಾಡುತ್ತಿರಲಿಲ್ಲ. ಚಿಂತನೆ, ವಿಮರ್ಶೆ ಗಳನ್ನು ಪ್ರೇಕ್ಷಕ ರಿಗೆ ಬಿಡುತ್ತಿದ್ದರು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹಕುಲಾಧಿಪತಿ ಡಾ|ಎಚ್. ಎಸ್. ಬಲ್ಲಾಳ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಮಾಹೆ ಕಲೆ ಮತ್ತು ಸಂಸ್ಕೃತಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಸತ್ಯಜಿತ್ ರೇ ಚಲನಚಿತ್ರೋತ್ಸವ ಯುವ ಜನರಿಗೆ ಅಮೂಲ್ಯ ಸಿನೆಮಾಗಳನ್ನು ಪರಿಚಯಿಸುವ ಹೆಜ್ಜೆಯಾಗಿದೆ ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಮಾತನಾಡಿ, ಭಾರತೀಯ ಚಿತ್ರರಂಗಕ್ಕೆ ಸತ್ಯಜಿತ್ ಅವರ ಕೊಡುಗೆ ಅನನ್ಯ ಎಂದು ಬಣ್ಣಿಸಿ ದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ|ವರದೇಶ್ ಹಿರೇಗಂಗೆ ಪ್ರಸ್ತಾವನೆಗೈದರು. ಮರಿಯಂ
ರಾಯ್, ಜೂಡಿ ಶೆರಿನ್ ನಿರೂಪಿ ಸಿದರು. ಮೊದಲ ದಿನ ಪಾಥೆರ್ ಪಾಂಚಾಲಿ ಸಿನೆಮಾ ಪ್ರದರ್ಶ ನಗೊಂಡು ಸಂವಾದ ನಡೆಯಿತು. ಪ್ರೊ| ಫಣಿರಾಜ್ ವಂದಿಸಿದರು.