Advertisement

ಸಿನ್ಸಿನಾಟಿ ಓಪನ್‌’ಟೆನಿಸ್‌ : ಮೆಡ್ವೆಡೇವ್‌-ಸಿಸಿಪಸ್‌ ಮುಖಾಮುಖಿ

10:50 PM Aug 20, 2022 | Team Udayavani |

ಸಿನ್ಸಿನಾಟಿ: ಅಮೆರಿಕದ ಬಿಗ್‌ ಸರ್ವಿಂಗ್‌ ಟೆನಿಸಿಗರಾದ ಟೇಲರ್‌ ಫ್ರಿಟ್ಜ್ ಮತ್ತು ಜಾನ್‌ ಇಸ್ನರ್‌ ಸವಾಲನ್ನು ಮೆಟ್ಟಿನಿಂತ ವಿಶ್ವದ ನಂ.1 ಆಟಗಾರ ಡ್ಯಾನಿಲ್‌ ಮೆಡ್ವೆಡೇವ್‌ ಮತ್ತು 4ನೇ ಶ್ರೇಯಾಂಕದ ಸ್ಟೆಫ‌ನಸ್‌ ಸಿಸಿಪಸ್‌ “ಸಿನ್ಸಿನಾಟಿ ಓಪನ್‌’ ಟೆನಿಸ್‌ ಕೂಟದ ಸೆಮಿಫೈನಲ್‌ ಮುಖಾಮುಖಿಗೆ ಅಣಿಯಾಗಿದ್ದಾರೆ.

Advertisement

2019ರ ಸಿನ್ಸಿನಾಟಿ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೇವ್‌ 11ನೇ ಶ್ರೇಯಾಂಕದ ಟೇಲರ್‌ ಫ್ರಿಟ್ಜ್ ವಿರುದ್ಧ 7-6 (1), 6-3 ಅಂತರದಿಂದ ಗೆಲುವು ಸಾಧಿಸಿದರು.

ಸ್ಟೆಫ‌ನಸ್‌ ಸಿಸಿಪಸ್‌ 7-6 (5), 5-7, 6-3ರಿಂದ ಜಾನ್‌ ಇಸ್ನರ್‌ಗೆ ಆಘಾತವಿಕ್ಕಿದರು. ಅಲ್ಲಿಗೆ ಆತಿಥೇಯ ನಾಡಿನ ಇಬ್ಬರೂ ಆಟಗಾರರ ಹೋರಾಟಕ್ಕೆ ತೆರೆ ಬಿದ್ದಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next