Advertisement

 ಎಸ್‌ ಐ ಐ ನೊಂದಿಗೆ ಸಿಐಐ ಒಪ್ಪಂದ ..!

01:27 PM Jul 30, 2021 | Team Udayavani |

ನವ ದೆಹಲಿ : ಕೋವಿಡ್ 19 ಸೋಂಕಿನ ಉತ್ಪಾದನೆ ಹಾಗೂ ಪೂರೈಕೆಯಲ್ಲಿನ ವೇಗವನ್ನು ವೃದ್ಧಿಸುವ ಉದ್ದೇಶದಿಂದ  ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಭಾರತದ ಸೀರಮ್ ಇನ್‌ ಸ್ಟಿಟ್ಯೂಟ್ (ಎಸ್‌ ಐ ಐ)ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Advertisement

ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ವೇಗ ನೀಡುವ ಉದ್ದೇಶದಿಂದ ಈ ಒಪ್ಪಂದ ನಡೆದಿದ್ದು, ದೇಶದ  ಹಳ್ಳಿ ಹಳ್ಳಿಗಳಿಗೂ ಲಸಿಕೆಗಳು ಲಭ್ಯವಾಗಬೇಕು ಎನ್ನುವುದೇ ನಮ್ಮ ಪ್ರಧಾನ ಉದ್ದೇಶ ಎಂದು ಉಭಯ ಸಂಸ್ಥೆಗಳು ಹೇಳಿವೆ.

ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್: ಪದಕದ ಭರವಸೆ ಮೂಡಿಸಿದ ದೀಪಿಕಾ ಕುಮಾರಿಗೆ ಸೋಲು!  

ಈ ಬಗ್ಗೆ ಪ್ರತಿಕ್ರಿಯಿಸದ ಸಿಐಐ ಅಧ್ಯಕ್ಷರಾದ ಟಿ. ವಿ ನರೇಂದ್ರನ್, ಲಸಿಕೆ ಪೂರೈಕೆ ಆರ್ಥಿಕ ಸ್ಥಿತಿ ಹೇಗೆ ಸುಧಾರಿಸುತ್ತದೆ ಎನ್ನುವುದರ ಮೇಲೆ ಆಧಾರವಾಗಿದೆ ಎಂದಿದ್ದಾರೆ.

ಸಿಐಐ, ಮತ್ತು ಸೀರಮ್ ಇನ್‌ ಸ್ಟಿಟ್ಯೂಟ್‌ ನೊಂದಿಗಿನ ಪಾಲುದಾರಿಕೆಯು ವ್ಯಾಕ್ಸಿನೇಷನ್ ಟ್ರ್ಯಾಕ್, ಉದ್ಯಮದ ಭಾಗವಹಿಸುವಿಕೆಯು ಹೆಚ್ಚಿನ ಸಮುದಾಯಗಳಿಗೆ ತಲುಪಲು ಸಹಕಾರಿಯಾಗಿರಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಇನ್ನು, ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಸೀರಮ್ ಇನ್ಸ್ ಸ್ಟಿಟ್ಯೂಟ್‌ ನ ಕಾರ್ಯ ನಿರ್ವಾಹಕ ಅಧಿಕಾರಿ ಅದರ್ ಪೂನಾವಾಲ,  ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ ಯೊಂದಿಗಿನ ಒಪ್ಪಂದದಿಂದ ದೇಶದಾದ್ಯಂತ ಕೋವಿಡ್ ಲಸಿಕೆಗಳ ಪೂರೈಕೆಯಲ್ಲಿ ಹೆಚ್ಚಿನ ಸಾಮರ್ಥ್ಯ ಲಭಿಸಿದಂತಾಗಿದೆ. ದೇಶದ ಎಲ್ಲಾ ಸಮುದಾಯಗಳಿಗೆ ಲಸಿಕೆಗಳು ತಲುಪುವುದಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಸಿಐಐ ಲಸಿಕೆಯ ಬೇಡಿಕೆಯ ಬಗ್ಗೆ ದೇಶದ 196 ನಗರ ಪ್ರದೇಶಗಳಲ್ಲಿ ಸಮೀಕ್ಷೆಯೊಂದನ್ನು ಮಾಡಿದ್ದು, ಆ ಸಮೀಕ್ಷೆಯನ್ವಯ  ದೇಶದಾದ್ಯಂತ ಏಳು ದಶಲಕ್ಷಕ್ಕೂ ಅಧಿಕ ಲಸಿಕೆಗಳ ಅಗತ್ಯವಿದೆ ಎಂದು ತಿಳಿಸಿದೆ.

23 ಜುಲೈ 2021 ರ ವೇಳೆಗೆ, ಸಿಐಐ ಮತ್ತು ಸಿಐಐ ಫೌಂಡೇಶನ್‌ ನಿಂದ ದೇಶಾದ್ಯಂತ ನಡೆದ 430 ಶಿಬಿರಗಳ ಮೂಲಕ ಒಟ್ಟು 3.4 ಮಿಲಿಯನ್ ಸಿಂಗಲ್ ಡೋಸ್‌ ಗಳನ್ನು ನೀಡಲಾಗಿದೆ ಎಂದು ಸಿಐಐ ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ :   ಶಿಶುಕಾಮ/ಮಕ್ಕಳ ಕಳ್ಳ ಸಾಗಾಣಿಕೆ; ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”

Advertisement

Udayavani is now on Telegram. Click here to join our channel and stay updated with the latest news.

Next