Advertisement

ಸಿಗರೇಟ್‌, ಗುಟ್ಕಾ ನಂತರ ಜೀನ್ಸ್‌-ಟಿ ಶರ್ಟ್‌ ಬ್ಯಾನ್‌

03:45 AM Apr 06, 2017 | Team Udayavani |

ಲಕ್ನೋ: ಉತ್ತರ ಪ್ರದೇಶದ 158 ಸರ್ಕಾರಿ ಹಾಗೂ 331 ಸರ್ಕಾರಿ ಸ್ವಾಮ್ಯದ ಕಾಲೇಜುಗಳ ಸಿಬ್ಬಂದಿ ಇನ್ನು ಮುಂದೆ ಜೀನ್ಸ್‌ ಮತ್ತು ಟಿ ಶರ್ಟ್‌ ಧರಿಸುವಂತಿಲ್ಲ! ಬದಲಿಗೆ “ಸರಳ’ ಉಡುಪು ಧರಿಸಬೇಕು ಎಂದು ಸರ್ಕಾರ ಆದೇಶಿಸಿದೆ.
ಈಗಾಗಲೇ ಸರ್ಕಾರಿ ಕಚೇರಿ, ಶಾಲೆ, ಕಾಲೇಜುಗಳಲ್ಲಿ ಧೂಮಪಾನ, ಗುಟ್ಕಾ ಸೇವನೆಗೆ ಸಿಎಂ ಯೋಗಿ ಆದಿತ್ಯನಾಥ್‌
ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ಇದೀಗ, “”ವಿವಿಗಳ ಎಲ್ಲ ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಸರಳವಾಗಿರುವ
ಉಡುಪು ಧರಿಸಿ, ಸರಿಯಾದ ಸಮಯಕ್ಕೆ ಕಚೇರಿ ಅಥವಾ ಕಾಲೇಜಿಗೆ ಬಂದು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕೆಲಸದ ಅವಧಿಯಲ್ಲಿ ಜೀನ್ಸ್‌ ಹಾಗೂ ಟಿಶರ್ಟ್‌ ಧರಿಸುವುದನ್ನು ನಿರ್ಬಂಧಿಸಲಾಗಿದೆ,” ಎಂದು ಉನ್ನತ ಶಿಕ್ಷಣ ನಿರ್ದೇಶನಾಲಯ ಮಾ.30ರಂದು ಹೊರಡಿಸಿದ ಸುತ್ತೋಲೆಯಲ್ಲಿ ಆದೇಶಿಸಿದೆ. “”ಬೋಧಕರು ಬಿಳಿ ಅಥವಾ ಆಕಾಶ ನೀಲಿ ಬಣ್ಣದ ಅಂಗಿ ಹಾಗೂ ಕಪ್ಪು ಅಥವಾ ನೀಲಿ ಬಣ್ಣದ ಪ್ಯಾಂಟ್‌ ಧರಿಸುವ ಮೂಲಕ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು,” ಎಂದು ಉನ್ನತ ಶಿಕ್ಷಣ ಇಲಾಖೆ ನಿರ್ದೇಶಕ ಆರ್‌.ಪಿ.ಸಿಂಗ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next