Advertisement

ಮತಾಂತರಕ್ಕೆ ಪ್ರಚೋದನೆ: ಕ್ರೈಸ್ತ ಪಾದ್ರಿ ಬಂಧನ

07:03 PM Dec 26, 2022 | Team Udayavani |

ಬರೇಲಿ: ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದವರನ್ನು ಆಮಿಷವೊಡ್ಡಿ ಕ್ರೈಸ್ಥ ಧರ್ಮಕ್ಕೆ ಮತಾಂತರ ಆಗುವಂತೆ ಪ್ರಚೋದನೆ ನೀಡಿದ ಆರೋಪದಲ್ಲಿ ಕ್ರೈಸ್ತ ಪಾದ್ರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಪೌಲಸ್‌ ಮಾಸಿಹ್‌ ಬಂಧಿತ ಪಾದ್ರಿ. ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಹಲವರನ್ನು ಪೌಲಸ್‌ ಮತಾಂತರ ಮಾಡಲು ಆಮಿಷವೊಡ್ಡಿದ್ದಾರೆ ಎಂದು ಪಟ್ವಾಯಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿತ್ತು.

ದೂರಿನ ಆಧಾರದಲ್ಲಿ ಪೌಲಸ್‌ ಅವರನ್ನು ಬಂಧಿಸಿರುವ ಪೊಲೀಸರು, ಅವರ ವಿರುದ್ಧ 2021ರ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next